ಸಚಿವ ಜಮೀರ್‌ಗೆ ಲೇ ತುರ್ಕಾ, ಅರೆಬಿಕ್ ತಳಿ ಎಂದ ಪುನೀತ್ ಕೆರೆಹಳ್ಳಿ!
ಸಚಿವ ಜಮೀರ್ ಅಹಮದ್ ಖಾನ್ ಬಗ್ಗೆ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಇದೀಗ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈ ವಿವಾದ ತಣ್ಣಗಾಗುವ ಮೊದಲೇ ಇದೀಗ ಪುನೀತ್ ಕೆರೆಹಳ್ಳಿ ಜಮೀರ್ ಬಗ್ಗೆ ತೀರ ವಿವಾದಾತ್ಮಕ ಪದಗಳನ್ನು ಬಳಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ಲೇ ಜಮೀರ್ ಅಹಮದ್ ಖಾನ್, ಕುಮಾರಸ್ವಾಮಿ ಅವರನ್ನು ಕರಿಯಾ ಅಂದ ನೀನು ನನ್ನ ಈ ಮಾತುಗಳನ್ನು ಸರಿಯಾಗಿ ಕೇಳಿಸಿಕೊ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ. ಆ ವಿಡಿಯೋದಲ್ಲಿ ಪ್ರಾರಂಭದಲ್ಲೇ ಲೇ.. ಅರೆಬಿಕ್ ತಳಿ ಜಮೀರ್ ಅಹಮದ್‌ಖಾನ್ ತುರ್ಕಾ.. ನಮ್ಮದೇ ನಾಡಿನಲ್ಲಿ.. ನಮ್ಮದೇ ಜನರ ಮುಂದೆ ನಮ್ಮ ನಾಯಕರ ಬಗ್ಗೆ ಅವರ ಬಣ್ಣವನ್ನು ಹಂಗಿಸಿ, ಕಾಲಾ ಕುಮಾರಸ್ವಾಮಿ ಅನ್ನುವಷ್ಟು ದುರಹಂಕಾರ, ದರ್ಪ ಬಂತ ನಿನಗೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಪತ್ರಕರ್ತರು ಪ್ರಶ್ನೆ ಮಾಡಿದರೆ, ಅವರು ಕಪ್ಪಗಿದ್ದಾರೆ. ಅದಕ್ಕೆ ಆ ರೀತಿ ಕರೆದೆ ಅಂತ ಸಮರ್ಥನೆ ಮಾಡ್ಕೋತಿಯಾ. ಕುಮಾರಸ್ವಾಮಿ ಅವರು ಏನಾದರೂ ಬೆಳ್ಳಗೆ ಇದ್ದು, ನಾನು ಹೇಳಿದ್ದರೆ ತಪ್ಪು ಅವರು ಇರುವುದೇ ಕಪ್ಪಗೆ ಎಂದು ಹೇಳಿರುವ ವಿಡಿಯೋವನ್ನೂ ಇದರಲ್ಲಿ ಸೇರಿಸಲಾಗಿದೆ.
ಈ ವಿಡಿಯೋದಲ್ಲಿ ಪದೇ ಪದೇ ತುರ್ಕಾ ಎನ್ನುವ ಪದವನ್ನು ಬಳಸಲಾಗಿದೆ. ನಾವು ಹಿಂದೂಗಳು ಕಪ್ಪಗಿದ್ದೇವೆ. ನಾವು ಪೂಜಿಸುವ ಕೃಷ್ಣ ಸಹ ಕಪ್ಪಗಿದ್ದಾನೆ. ನೀನು ನಿತ್ಯ ನವಾಜ್ ಮಾಡುವ ದೇವರು ಯಾವ ಬಣ್ಣ ಹೇಳ್ತೀಯಾ ಅಂತನೂ ಕೇಳಿದ್ದಾರೆ. ಮುಸ್ಲಿಂ ದೇವರ ಬಗ್ಗೆಯೂ ಇದರಲ್ಲಿ ಪ್ರಶ್ನೆ ಮಾಡಲಾಗಿದೆ.

ಹಿಂದೂಗಳ ವರ್ಣದ ಬಗ್ಗೆ ಮಾತಾಡ್ತೀಯಾ, ಅರೆಬಿಕ್ ತಳಿ ಇದು ಕರುನಾಡು ಕಣೋ.. ಕಪ್ಪು ಮಣ್ಣಿನ ನಾಡುಕಣೋ.. ಅದು ನಮ್ಮ ಹಿಂದೂ ನಾಯಕನ ಬಗ್ಗೆ, ಹಿಂದೂಗಳ ಮುಂದೆಯೇ ಕರಿಯಾ ಅಂತ ಕರಿತೀಯ ಅಂದರೆ ನಿನ್ನ ದರ್ಪ, ಇದು ಹಿಂದೂಗಳ ದೌರ್ಬಲ್ಯವೇ ನಾವು ಒಪ್ಪಿಕೊಳ್ಳುತ್ತೇವೆ.
ನಿಂಗೊಂದು ಸವಾಲು ಹಾಕುತ್ತೇನೆ ಜಮೀರ್ ಅಹಮದ್ ಖಾನ್. ನೀನು ನಿಮ್ಮ ಅಪ್ಪನಿಗೇ ಹುಟ್ಟಿದ್ದರೆ.. ಇನ್ನೊಮ್ಮೆ ಹಾಸನದಲ್ಲೋ.. ಮಂಡ್ಯದಲ್ಲೋ ನಿಂತು.. ಕರಿಯಾ ಕುಮಾರಸ್ವಾಮಿ ಹೇಳಿ ಆ ಗಡಿದಾಟಿದರೆ, ನಾನು ನಮ್ಮ ಅಪ್ಪನಿಗೇ ಹುಟ್ಟಿಲ್ಲ ಅಂತ ಕರ್ಕೋತೀನಿ ಎಂದಿದ್ದಾನೆ.
ಅಲ್ಲದೇ ಇದೇ ಸಂದರ್ಭದಲ್ಲಿ ಎಲ್ಲೋದರು ಕನ್ನಡಪರ ಸಂಘಟನೆಗಳು, ಈಗ ಬನ್ರಿ ಪ್ರಶ್ನೆ ಮಾಡಿ. ಕನ್ನಡ ನಾಡಿನ ಮಗನೊಬ್ಬನನ್ನು ಈ ರೀತಿ ಹೀಯಾಳಿಸಲಾಗಿದೆ. ಉರ್ದುವಿನಲ್ಲಿ ಮಾತನಾಡಿ, ವರ್ಣ ಹಾಗೂ ಬಣ್ಣದಿಂದ ಹಂಗಿಸಲಾಗಿದೆ. ಸಂವಿಧಾನ ರಕ್ಷಕರು ಬೀದಿಗೆ ಬಂದು ಮಾತನಾಡಿ ಎಂದು ಸವಾಲು ಹಾಕಿದ್ದಾರೆ.
ಲೇ @BZZameerAhmedK @hd_kumaraswamy ಅವರನ್ನು ಕರಿಯಾ ಅಂದ ನೀನು ನನ್ನ ಈ ಮಾತುಗಳನ್ನು ಸರಿಯಾಗಿ ಕೇಳುಸ್ಕೋ pic.twitter.com/74kWJR2kUc
— Puneeth Kerehalli (@Puneeth74353549) November 11, 2024
ಬಹಿರಂಗ ಸಭೆಯಲ್ಲಿ ಒಬ್ಬರನ್ನು ಕರಿಯಾ ಎಂದು ಕರೆದರೆ ನಮಗೆ ಎಷ್ಟು ನೋವಾಗಬಾರದು ಎಂದಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ನೀವು ಒಕ್ಕಲಿಗರಿಗೂ ಕುಮಾರಸ್ವಾಮಿ ಅವರು ಸಹ ಒಕ್ಕಲಿಗರು. ಒಬ್ಬ ಗೌಡನಿಗೆ ಈ ರೀತಿ ಕರೆದರೆ ಹೇಗೆ ನೀವು ಸಹಿಸಿಕೊಳ್ಳುತ್ತೀರಿ ಅಂತಲೂ ಇದರಲ್ಲಿ ಪ್ರಶ್ನೆ ಮಾಡಲಾಗಿದೆ.












Click it and Unblock the Notifications