Property Registration: ಉಪ ನೋಂದಣಿ ಕಚೇರಿ ಸಮಯದಲ್ಲಿ ಬದಲಾವಣೆ!
Property Registration: ಕರ್ನಾಟಕದಲ್ಲಿ ಆಸ್ತಿಗಳ ರಿಜಿಸ್ಟ್ರೇಷನ್ (ನೋಂದಣಿ) ಆಗಿದ್ದ ಸಮಸ್ಯೆ ಕೊನೆಗೂ ಬಗೆಹರಿದಿದೆ. ಕಳೆದ 15 ದಿನಗಳಿಂದಲೂ ರಾಜ್ಯದಲ್ಲಿ ಆಸ್ತಿಗಳ ರಿಜಿಸ್ಟ್ರೇಷನ್ ಹಾಗೂ ಇ - ಖಾತಾ ಸೇರಿದಂತೆ ವಿವಿಧ ಆಸ್ತಿಗಳ ವಿಚಾರದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಕೊನೆಗೂ ಈ ಸಮಸ್ಯೆಗೆ ಪರಿಹಾರವಾಗಿದ್ದು. ಇದರೊಂದಿಗೆ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ. ಕಳೆದ ಒಂದು ತಿಂಗಳಿನಿಂದಲೂ ಕಾವೇರಿ ತಂತ್ರಾಂಶ 2.0ನಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯಿಂದ ಆಸ್ತಿಗಳ ನೋಂದಣಿಯಲ್ಲಿ ಭಾರೀ ಸಮಸ್ಯೆ ಆಗಿತ್ತು. ಅಲ್ಲದೆ ಕೋಟ್ಯಾಂತರ ರೂಪಾಯಿ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ ಎನ್ನುವ ಆರೋಪವೂ ಕೇಳಿ ಬಂದಿತ್ತು.
ರಾಜ್ಯದಲ್ಲಿ ಕಾವೇರಿ ತಂತ್ರಾಂಶ ಕೈಕೊಟ್ಟು ಆಸ್ತಿಗಳ ವಿಚಾರದಲ್ಲಿ ನೋಂದಣಿಯಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿತ್ತು. ಕೊನೆಗೂ ಇದು ಸರಿ ಹೋಗಿದೆ. ಆದರೆ, ಕಳೆದ 15 ದಿನಗಳಿಂದ ಹಿನ್ನಡೆ ಆಗಿದ್ದು. ಇದೀಗ ಆಸ್ತಿಗಳ ನೋಂದಣಿ ಹಾಗೂ ಇ - ಖಾತಾ ಸೇರಿದಂತೆ ವಿವಿಧ ಆಸ್ತಿದಾರರ ಅನುಕೂಲಕ್ಕಾಗಿ ರಾಜ್ಯ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ಸಿಹಿಸುದ್ದಿಯನ್ನು ಕೊಟ್ಟಿದೆ.

ಕರ್ನಾಟಕ ಸರ್ಕಾರವು ಆಸ್ತಿ ವಿಚಾರದಲ್ಲಿ ಹಲವು ಸುಧಾರಣೆ ಕ್ರಮಗಳನ್ನು ತೆಗೆದುಕೊಂಡಿದೆ. ಆಸ್ತಿಗಳ ಸಂರಕ್ಷಣೆ ಹಾಗೂ ಆಸ್ತಿ ತೆರಿಗೆ ಸಂಗ್ರಹಣೆಗೆ ಮುಂದಾಗಿದೆ. ಆದರೆ, ಅದರ ಅನುಷ್ಠಾನದ ವಿಚಾರ ಎಡವಟ್ಟು ಮಾಡಿಕೊಂಡಿದೆ.
ಸಮಯ ವಿಸ್ತರಣೆ: ಆಸ್ತಿಗಳ ರಿಜಿಸ್ಟ್ರೇಷನ್ ಹಾಗೂ ಇ - ಖಾತಾ ಸೇರಿದಂತೆ ವಿವಿಧ ಆಸ್ತಿಗಳಲ್ಲಿ ನೋಂದಣೆ ಹಾಗೂ ತಿದ್ದುಪಡಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು. ಇದೇ ಕಾರಣಕ್ಕೆ ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಆಸ್ತಿದಾರರ ಗೊಂದಲಗಳನ್ನು ತಪ್ಪಿಸಲು ರಾಜ್ಯ ಸರ್ಕಾರವು ಮಹತ್ವದ ಕ್ರಮ ತೆಗೆದುಕೊಂಡಿದೆ. ಕಚೇರಿಯ ಅವಧಿಯನ್ನು ವಿಸ್ತರಿಸಲಾಗಿದೆ. ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ಎಲ್ಲಾ ಕಚೇರಿಗಳ ಸಮಯವನ್ನು ಬೆಳಿಗ್ಗೆ 10.30ರಿಂದ ಸಂಜೆ 6.30ರ ವರೆಗೆ ವಿಸ್ತರಿಸಿಕೊಂಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳ ಸಮಯವನ್ನು ವಿಸ್ತರಿಸಿರುವುದಾಗಿ ಹೇಳಿದೆ. ಮುಂದಿನ ಆದೇಶದ ವರೆಗೂ ಇದು ಜಾರಿಯಲ್ಲಿ ಇರಲಿದೆ ಎಂದು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಆದೇಶ ಮಾಡಿದೆ.
ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟ: ಇನ್ನು ರಾಜ್ಯ ಸರ್ಕಾರಕ್ಕೆ ಕಾವೇರಿ ತಂತ್ರಾಂಶದಲ್ಲಿನ ಸಮಸ್ಯೆಯಿಂದ ಅಂದಾಜು 4000 ಸಾವಿರದಿಂದ 5000 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆಸ್ತಿಯ ತೆರಿಗೆಯಲ್ಲಿ / ರಿಜಿಸ್ಟ್ರೇಷನ್ ಸಮಸ್ಯೆಯಿಂದ ಕಂದಾಯ ಇಲಾಖೆಗೆ ನಷ್ಟವಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಇದೀಗ ಅದನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಸಮಯ ವಿಸ್ತರಣೆ ಸಾಕಾಗಲ್ಲ: ಇನ್ನು ಸರ್ಕಾರದ ಸಮಯ ವಿಸ್ತರಣೆಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಯ ವಿಸ್ತರಣೆ ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ಕೆಲವರು ಮೆಚ್ಚುಗೆ ಸೂಚಿಸಿದ್ದರೆ. ಇನ್ನೂ ಕೆಲವರು ಕೇವಲ ಸಮಯ ವಿಸ್ತರಣೆಯಿಂದ ಸಮಸ್ಯೆ ಪರಿಹಾರವಾಗಲ್ಲ. ಬೇಗ ಕೆಲಸವನ್ನೂ ಮಾಡಬೇಕು ಎಂದು ಕೆಲವು ಆಸ್ತಿದಾರರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications