E-Swathu: ಪ್ರಾಪರ್ಟಿ ಇ - ಸ್ವತ್ತು ಗುಡ್‌ನ್ಯೂಸ್: ಡಿಜಿಟಲ್ ದಾಖಲೆ ಮೊಬೈಲ್‌ನಲ್ಲೇ ಲಭ್ಯ & ಉಚಿತ!
E-Swathu: ರಾಜ್ಯ ಸರ್ಕಾರವು ಇ ಸ್ವತ್ತಿನ ಆಸ್ತಿಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಭಾಗದಲ್ಲಿ ಇರುವ ಆಸ್ತಿದಾರರಿಗೆ ಭರ್ಜರಿ ಸುದ್ದಿಯನ್ನು ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರುವ ಮನೆ, ನಿವೇಶನ ಇಲ್ಲವೇ ಖಾಲಿ ಜಾಗಗಳ ಇ-ಸ್ವತ್ತಿನ ಪ್ರಮುಖ ದಾಖಲೆಗಳನ್ನು ನೀವು ಕಚೇರಿಗೆ ಅಲೆಯದೆ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯುವುದು ಹೇಗೆ ಎನ್ನುವ ವಿವರ ನೋಡೋಣ.
ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿ ವಿಚಾರವಾಗಿ ಗುಡ್‌ನ್ಯೂಸ್ ನೀಡುತ್ತಿದೆ. ಈಗಾಗಲೇ ಬಿ ಖಾತಾ ನೋಂದಣಿ ಅವಧಿಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿರುವ ಆಸ್ತಿಗೆ ಇ ಸ್ವತ್ತು ಪಡೆಯುವ ವಿಧಾನವನ್ನು ಇನ್ನಷ್ಟು ಸರಳೀಕರಣ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ, ನಿವೇಶನ ಅಥವಾ ಖಾಲಿ ಜಾಗ ಇರುವ ಪ್ರತಿ ಸಾರ್ವಜನಿಕರು ತಮ್ಮ ಆಸ್ತಿಯ ಡಿಜಿಟಲ್ ದಾಖಲೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಇದೀಗ ಪಂಚಾಯತ್ ರಾಜ್ ಇಲಾಖೆಯ e-Swathu ವೆಬ್ ಪೋರ್ಟಲ್ ಮೂಲಕ ನೀವು ನಿಮ್ಮ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ನೀವು ಪಡೆದುಕೊಳ್ಳಬಹುದಾಗಿದೆ.

ಇ - ಸ್ವತ್ತು ವಿಧಾನ ಸರಳೀಕರಣ: e-Swathu ಎನ್ನುವುದು ರಾಜ್ಯ ಸರ್ಕಾರವು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುವ ಖಾಸಗಿ ಆಸ್ತಿಗಳ ನೋಂದಣಿ, ಮಾಲೀಕತ್ವದ ವಿವರಗಳು ಹಾಗೂ ಆಸ್ತಿಗಳಲ್ಲಿನ ನಿರ್ದಿಷ್ಟ ಬದಲಾವಣೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಸರ್ಕಾರದ ಅಧಿಕೃತ ತಂತ್ರಾಂಶ ಆಗಿದೆ. ಇನ್ನು ಇ ಸ್ವತ್ತನ್ನು ಮೊಬೈಲ್‌ನ ಮೂಲಕ ಪಡೆದುಕೊಳ್ಳುವುದು ಹೇಗೆ ಎಂದು ನೋಡೋಣ.
ಇ-ಸ್ವತ್ತಿನ ಡಿಜಿಟಲ್ ದಾಖಲೆ ಪಡೆಯುವ ಆನ್‌ಲೈನ್ ಸರಳ ವಿಧಾನ ಇಲ್ಲಿದೆ: ರಾಜ್ಯ ಸರ್ಕಾರವು ಇ ಸ್ವತ್ತು ಪರಿಚಯಿಸಿದೆಯಾದರೂ. ಈ ಸ್ವತ್ತಿನ ಡಿಜಿಟಲ್ ದಾಖಲೆಗಳನ್ನು ಕಚೇರಿಗಳಲ್ಲಿ ಪಡೆಯುವುದು ಕಷ್ಟವಾಗುತ್ತಿತ್ತು. ಆದರೆ ಇನ್ಮುಂದೆ ಸರಳವಾಗಿ ನಿಮ್ಮ ಮೊಬೈಲ್‌ನಲ್ಲೇ ಲಭ್ಯವಾಗಲಿದೆ. ಮೊಬೈಲ್‌ನಲ್ಲಿ ಹೇಗೆ ಪಡೆಯಬೇಕು ಎನ್ನುವ ವಿಧಾನವನ್ನು ನೋಡೋಣ.
* ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್‌ನಲ್ಲಿ ಮೊದಲಿಗೆ ಈ ನಿರ್ದಿಷ್ಟ ಲಿಂಕ್‌ನ ಮೇಲೆ ಕ್ಲಿಕ್ ಮಾಡಿಕೊಳ್ಳಿ. https://eswathu.karnataka.gov.in/Issue0fForm9/Frm_PublicSearchForm9.aspx / e-Swathu Property ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಮುಖ್ಯಪುಟದಲ್ಲಿ ಆಸ್ತಿಗಳ ಶೋಧನೆ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
* ಮುಂದುವರಿದು Search By ಎನ್ನುವ ವಿಭಾಗದಲ್ಲಿ ನಿಮ್ಮ ಆಸ್ತಿಗೆ ಸಂಬಂಧಿಸಿದ ಯಾವ ದಾಖಲೆಯನ್ನು ಹುಡುಕುತ್ತಿದ್ದೀರೋ ಅದರ ಮೇಲೆ ಆಯ್ಕೆ ಮಾಡಿ. Form-9 (ಮಾಲೀಕತ್ವ ದಾಖಲೆ) Form-11 (ಬಳಕೆ ವಿವರ) → Survey Number ಆಯ್ಕೆಗಳು ಕಾಣಿಸಲಿವೆ.
* ಇದಾದ ಮೇಲೆ ನಿಮ್ಮ ಜಿಲ್ಲೆ - ತಾಲ್ಲೂಕು - ಗ್ರಾಮ ಪಂಚಾಯತಿ - ಹಳ್ಳಿ ಎನ್ನುವ ಖಾಲಿ ಜಾಗಗಳಲ್ಲಿ ಆಯ್ಕೆ ಮಾಡಿ.
* ಕೊನೆಯದಾಗಿ ಶೋಧನೆ/Search ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗ್ರಾಮದಲ್ಲಿನ ಆಸ್ತಿಗಳ ಪಟ್ಟಿ (e-Swathu ID, ಮಾಲೀಕರ ಹೆಸರು ಇತ್ಯಾದಿ) ವಿವರ ಅದರಲ್ಲಿ ಕಾಣಿಸಲಿದೆ.
* ಅಂತಿಮವಾಗಿ ನಿಮ್ಮ ಆಸ್ತಿಗೆ ಸಂಬಂಧಿತ ದಾಖಲೆಗಳ ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಇಲ್ಲವೇ ಅಲ್ಲೇ ಪ್ರಿಂಟ್ಔಟ್ ತೆಗೆದುಕೊಳ್ಳುವುದಕ್ಕೂ ಅವಕಾಶವಿದೆ. ಇನ್ನು ಇದೆಲ್ಲವೂ ಸಂಪೂರ್ಣವಾಗಿ ಉಚಿತವಾಗಿರಲಿದೆ.












Click it and Unblock the Notifications