Property E-Asset: ಪ್ರಾಪರ್ಟಿಗಳ ನಮೂನೆ 11ಎ & ನಮೂನೆ 11ಬಿ ಎಂದರೇನು, ಇದನ್ನು ಪಡೆಯುವುದು ಹೇಗೆ ?
ಪ್ರಾಪರ್ಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವು ಮಹತ್ವದ ಬದಲಾವಣೆಗಳನ್ನು ತಂದಿದೆ. ಇದೀಗ ನಮೂನೆ 11ಎಗೆ ಸಂಬಂಧಿಸಿದಂತೆ ಮಹತ್ವದ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಆನ್‌ಲೈನ್ ಮೂಲಕ ನಮೂನೆ 11ಎ ಪಡೆಯಲು ಅವಕಾಶ ನೀಡಲಾಗಿದೆ. ಹಾಗಾದರೆ ಏನಿದು ನಮೂನೆ 11ಎ, ಆಸ್ತಿಗಳಲ್ಲಿ ಇದು ಯಾಕೆ ತುಂಬಾ ಮುಖ್ಯವಾಗಿದೆ, ಪ್ರಾಪರ್ಟಿದಾರರು ನಮೂನೆ 11ಎ ಆನ್‌ಲೈನ್‌ನ ಮೂಲಕ ಪಡೆದುಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ನಮೂನೆ 11ಎ ಪಡೆಯಲು ಇ-ಸ್ವತ್ತು 2.0 ತಂತ್ರಾಂಶದ ವೆಬ್‌ಸೈಟ್‌ನ ಬಗ್ಗೆ ಅಪ್ಡೇಟ್ ನೀಡಲಾಗಿದೆ. ಇದರೊಂದಿಗೆ ನಮೂನೆ 11ಎ ಎಂದರೇನು ಎನ್ನುವುದನ್ನೂ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವರಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದು, ಪ್ರಕರಣ 199ಬಿ ಸೇರಿಸಲಾಗಿರುತ್ತದೆ. ಅದರನ್ವಯ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025' ಅನ್ನು ಜಾರಿಗೊಳಿಸಲಾಗಿದೆ. ಈ ನಿಯಮಗಳ ಅನ್ವಯ 15 ವರ್ಗೀಕರಣದಡಿಯಲ್ಲಿ ಆಸ್ತಿಗೆ ನಮೂನೆ 11ಎ ಪಡೆಯಬಹುದು.
ನಮೂನೆ 11ಎ ಎಂದರೇನು ?
ನಮೂನೆ 11ಎ ಎಂದರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಮಿ ಪರಿವರ್ತಿಸಿ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಬಡಾವಣೆ ಅನುಮೋದನೆ ಪಡೆದಿರುವ ಆಸ್ತಿಗಳ ತೆರಿಗೆ ಬೇಡಿಕೆಯ ಉದ್ಭತ ಭಾಗವಾಗಿದೆ.
ನಮೂನೆ 11ಎ ಪಡೆಯುವುದು ಹೇಗೆ
ಆನ್‌ಲೈನ್ ಮೂಲಕ ನಮೂನೆ 11ಎ ಪಡೆಯಲು ಇ-ಸ್ವತ್ತು 2.0 ತಂತ್ರಾಂಶದ https://eswathu.karnataka.gov.in ನಲ್ಲಿ ಅರ್ಜಿ ಸಲ್ಲಿಸಿ. ಇ-ಸ್ವತ್ತು ಕುರಿತಾದ ತಾಂತ್ರಿಕ & ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ 9483476000ಗೆ ಕರೆಮಾಡಬಹುದಾಗಿದೆ. ಇ - ಸ್ವತ್ತು 2.0 ತಂತ್ರಾಂಶ ಬಳಸಿ, ಆನ್‌ಲೈನ್‌ನಲ್ಲಿ ನಮೂನೆ 11ಎ ಪಡೆದುಕೊಳ್ಳಬಹುದಾಗಿದೆ.
ನಮೂನೆ 11 ಬಿ ಎಂದರೇನು ?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದು, ಪ್ರಕರಣ 199ಸಿ ಅನ್ನು ಸೇರಿಸಲಾಗಿರುತ್ತದೆ. ಅದರನ್ವಯ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025' ಅನ್ನು ಜಾರಿಗೊಳಿಸಲಾಗಿದೆ. ಸದರಿ ನಿಯಮಗಳನ್ವಯ 5 ವರ್ಗೀಕರಣದಡಿಯಲ್ಲಿ ಆಸ್ತಿಗೆ ನಮೂನೆ 11ಬಿ ಪಡೆಯಬಹುದು.
ನಮೂನೆ 11ಬಿ ಎಂದರೇನು?
— Panchayat Raj Commissionerate - Karnataka (@CommrPR) January 12, 2026
ಆನ್‌ಲೈನ್ ಮೂಲಕ ನಮೂನೆ 11ಎ ಪಡೆಯಲು ಇ-ಸ್ವತ್ತು 2.0 ತಂತ್ರಾಂಶದ https://t.co/nsvbDpYj2y ನಲ್ಲಿ ಅರ್ಜಿ ಸಲ್ಲಿಸಿ. ಇ-ಸ್ವತ್ತು ಕುರಿತಾದ ತಾಂತ್ರಿಕ & ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ 9483476000ಗೆ ಕರೆಮಾಡಿ.@PriyankKharge @rdprgok @mopr_goi @MoRD_GoI @rdwsd_gok pic.twitter.com/gq9gqwN5ph
ನಮೂನೆ 11 ಬಿ ಪಡೆಯುವುದು ಹೇಗೆ
ನಮೂನೆ 11ಬಿ ಎಂದರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂಪರಿವರ್ತಿಸದೆ ಮನೆ ನಿರ್ಮಿಸಿಕೊಂಡಿರುವುದು ಅಥವಾ ಬಡಾವಣೆ ಅನುಮೋದನೆ ಪಡೆಯದೆ ಅಭಿವೃದ್ಧಿ ಪಡಿಸಿರುವ ನಿವೇಶನ ಹಾಗೂ ಕಟ್ಟಡಗಳಿಗೆ ತೆರಿಗೆ ಸಂಗ್ರಹಿಸಲು ನೀಡುವ ತೆರಿಗೆ ಬೇಡಿಕೆಯ ಉಧೃತ ಭಾಗವಾಗಿದೆ.












Click it and Unblock the Notifications