ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಎಂ.ಕಲಬುರ್ಗಿ ಹತ್ಯೆ : ಸಿಐಡಿ ಪೊಲೀಸರ ತಂಡ ಕೊಲ್ಹಾಪುರಕ್ಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆ. 01 : ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿರುವ ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ. ಕೊಲೆಗಾರರನ್ನು ಹುಡುಕಿಕೊಂಡು ಒಂದು ಪೊಲೀಸರ ತಂಡ ಕೊಲ್ಹಾಪುರಕ್ಕೆ ತೆರಳಿದೆ.

ತನಿಖಾ ತಂಡದ ಅಧಿಕಾರಿಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ, ಬಾಡಿಗೆ ಹಂತಕರ ಮೂಲಕ ಈ ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. ವಿವಿಧ ಕೋನಗಳಿಂದ ತನಿಖೆ ನಡೆಸಲು ಪೊಲೀಸರು ಸಿಐಡಿ ಅಧಿಕಾರಿಗಳು 4 ತಂಡಗಳನ್ನು ರಚನೆ ಮಾಡಿದ್ದಾರೆ. [ಕಲಬುರ್ಗಿ ಹತ್ಯೆ, ಸಿಬಿಐ ತನಿಖೆಗೆ ನಿರ್ಧಾರ]

mm kalburgi

ಕೊಲ್ಹಾಪುರಕ್ಕೆ ಏಕೆ? : ಹತ್ಯೆಯ ನಂತರ ದುಷ್ಕರ್ಮಿಗಳು ಮಹಾರಾಷ್ಟ್ರಕ್ಕೆ ಪರಾರಿಯಾಗಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಕೊಲ್ಹಾಪುರಕ್ಕೆ ಸಿಐಡಿ ಅಧಿಕಾರಿಗಳು ತೆರಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಲಬುರ್ಗಿ ಅವರ ಮಾದರಿಯ ಹತ್ಯೆಗಳು ನಡೆದಿವೆ. ಆದ್ದರಿಂದ, ಅಲ್ಲಿನ ಪೊಲೀಸರಿಂದ ಮಾಹಿತಿ ಸಂಗ್ರಹಣೆ ಮಾಡಲು ತಂಡ ತೆರಳಿದೆ. [ಕಲಬುರ್ಗಿ ಹತ್ಯೆ, ಟ್ವಿಟ್ ಮಾಡಿದ್ದ ಯುವಕನ ಬಂಧನ]

ಉಳಿದ ತಂಡಗಳು ಕರ್ನಾಟಕದಲ್ಲಿಯೇ ತನಿಖೆಯನ್ನು ಮುಂದುವರೆಸಿವೆ. ಒಂದು ತಂಡ ಹತ್ಯೆಗೆ ಕೌಟುಂಬಿಕ ಕಾರಣಗಳೇನಾದರೂ ಇವೆಯೇ? ಎಂದು ತನಿಖೆಯನ್ನು ನಡೆಸಲಿವೆ. ಎಂ.ಎಂ.ಕಲಬುರ್ಗಿ ಅವರ ಪುತ್ರಿ ಈಗಾಗಲೇ ಕುಟುಂಬದಲ್ಲಿ ಆಸ್ತಿ ಕಲಹಗಳೇನು ಇರಲಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಂಧಿತನಿಗೆ ಜಾಮೀನು ಸಿಕ್ಕಿತು : ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಹತ್ಯೆಯನ್ನು ಸಮರ್ಥಿಸಿಕೊಂಡು ಟ್ವಿಟ್ ಮಾಡಿದ್ದ ಭವಿತ್ ಶೆಟ್ಟಿಗೆ ಜಾಮೀನು ಸಿಕ್ಕಿದೆ. ಬಂಟ್ವಾಳ ಪೊಲೀಸರು ಭವಿತ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದರು. ವಿಚಾರಣೆ ಬಳಿಕ ಆತನಿಗೆ ಜಾಮೀನು ನೀಡಲಾಗಿದೆ.

ಇತ್ತ ಕರ್ನಾಟಕ ಸರ್ಕಾರವೂ ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುವಂತೆ ಸಿಬಿಐಗೆ ಪತ್ರ ಬರೆದಿದೆ. ಸರ್ಕಾರ ಈಗಾಗಲೇ ಸಿಐಡಿ ತನಿಖೆಗೆ ಆದೇಶ ನೀಡಿದೆ. ಸಿಬಿಐ ತನಿಖೆಯನ್ನು ಕೈಗೊಳ್ಳುವ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

English summary
The CID which is probing the murder of Professor M.M.Kalburgi has formed four teams. One team is headed towards Kolhapur in Maharashtra as there are lurking doubts that some team from there could have hired people to execute this murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X