ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Priyank Kharge : ಪ್ರಿಯಾಂಕ್ ಖರ್ಗೆ ನಾಪತ್ತೆ, ಚಿತ್ತಾಪುರದ ತುಂಬಾ ಪೋಸ್ಟರ್

|
Google Oneindia Kannada News

ಬೆಂಗಳೂರು, ನವೆಂಬರ್ 08; ಮಾಜಿ ಸಚಿವ, ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ನಾಪತ್ತೆಯಾಗಿದ್ದಾರೆ. ಈ ಕುರಿತು ಪೋಸ್ಟರ್‌ಗಳನ್ನು ಪ್ರಿಂಟ್ ಮಾಡಲಾಗಿದ್ದು, ಚಿತ್ತಾಪುರ ನಗರದ ತುಂಬಾ ಅಂಟಿಸಲಾಗಿದೆ.

ಶಾಸಕ ಪ್ರಿಯಾಂಕ್ ಖರ್ಗೆ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ನಾಯಕರು ಪೋಸ್ಟರ್ ಪಿಂಟ್ ಮಾಡಿಸಿದ್ದಾರೆ. ಇದನ್ನು ಚಿತ್ತಾಪುರದಲ್ಲಿ ಅಂಟಿಸಲಾಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.

ಬಿಜೆಪಿ ಸಚಿವರಿಗೆ ಶಾಸಕರು ಬ್ರೋಕರ್‌ಗಳು: ಪ್ರಿಯಾಂಕ್‌ ಖರ್ಗೆಬಿಜೆಪಿ ಸಚಿವರಿಗೆ ಶಾಸಕರು ಬ್ರೋಕರ್‌ಗಳು: ಪ್ರಿಯಾಂಕ್‌ ಖರ್ಗೆ

Priyank Kharge Missing Campaign By BJP

ಚಿತ್ತಾಪುರದ ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ್ ಈ ಪ್ರಕಟಣೆ ಹೊರಡಿಸಿದ್ದಾರೆ. ಶಾಸಕರು ಚಿತ್ತಾಪುರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಸೆಪ್ಟೆಂಬರ್ 18, 2022ರಂದು ಎಂದು ಪೋಸ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ.

 ಬಿಜೆಪಿ ಆಡಳಿತದಲ್ಲಿ ಹಣಕ್ಕೆ ಬೆಲೆಯಿದೆ, ಸಾವು-ನೋವಿಗಲ್ಲ: ಪ್ರಿಯಾಂಕ್ ಖರ್ಗೆ ಬಿಜೆಪಿ ಆಡಳಿತದಲ್ಲಿ ಹಣಕ್ಕೆ ಬೆಲೆಯಿದೆ, ಸಾವು-ನೋವಿಗಲ್ಲ: ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರು. ಬಿಜೆಪಿ ವಿರುದ್ದ ಅವರು ಸದಾ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡುತ್ತಿರುತ್ತಾರೆ. ಆದರೆ ಈಗ ಬಿಜೆಪಿ ಅವರ ವಿರುದ್ಧವೇ ಅಭಿಯಾನ ಆರಂಭಿಸಿದೆ.

ಕಾಂಗ್ರೆಸ್ ಉನ್ನತ ಸಮಿತಿ ರಚಿಸಿದ ಮಲ್ಲಿಕಾರ್ಜುನ ಖರ್ಗೆ: ರಾಜ್ಯದ ಮೂವರಿಗೆ ಸ್ಥಾನಕಾಂಗ್ರೆಸ್ ಉನ್ನತ ಸಮಿತಿ ರಚಿಸಿದ ಮಲ್ಲಿಕಾರ್ಜುನ ಖರ್ಗೆ: ರಾಜ್ಯದ ಮೂವರಿಗೆ ಸ್ಥಾನ

ಅರವಿಂದ್ ಚವ್ಹಾಣ್ ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಚಿತ್ತಾಪುರದ ಮಾನ್ಯ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ನಾಪತ್ತೆಯಾಗಿದ್ದು, ಇವರು ಯಾರಿಗಾದರೂ ಕಂಡುಬಂದಲ್ಲಿ ದಯವಿಟ್ಟು ಚಿತ್ತಾಪುರ ಕ್ಷೇತ್ರಕ್ಕೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಪೋಸ್ಟರ್‌ನಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಫೋಟೋ ಹಾಕಲಾಗಿದೆ. ಪ್ರಿಯಾಂಕ್ ಖರ್ಗೆ ಶಾಸಕರು, ಚಿತ್ತಾಪುರ. ಈ ವ್ಯಕ್ತಿಯನ್ನು ಚಿತ್ತಾಪುರ ಕ್ಷೇತ್ರದಲ್ಲಿ ಯಾರಾದಾರೂ ನೋಡಿದ್ದೀರಾ? ಎಂದು ಪ್ರಶ್ನಿಸಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಕೊನೆ ಬಾರಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, 18 ಸೆಪ್ಟೆಂಬರ್ 2022ರಲ್ಲಿ ಎಂದು ಪೋಸ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಇಂತಹ ನೂರಾರು ಪೋಸ್ಟರ್ ಪ್ರಿಂಟ್ ಮಾಡಲಾಗಿದ್ದು, ಚಿತ್ತಾಪುರ ಕ್ಷೇತ್ರದ ತುಂಬಾ ಅಂಟಿಸಲಾಗಿದೆ.

English summary
Chittapur Congress MLA Priyank Kharge missing campaign by BJP. Poster posted in Chittapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X