ಕಮಲ ಕಲಿಗಳಿಗೆ ಡವ ಡವ; ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆಗೆ ಎಸ್ ಐ ಟಿ ರಚನೆಗೆ ನಿರ್ಧಾರ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜೂನ್ 28: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಹಿಂದಿನ ಹಗರಣ ತನಿಖೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ರೀತಿಯಲ್ಲಿ ಹಗರಣಗಳು ನಡೆದಿವೆ. ಈ ಎಲ್ಲಾ ಹಗರಣಗಳ ತನಿಖೆಗೆ ಎಸ್ ಐ ಟಿ ರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಿರ್ಧರಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಸ್.ಐ ಟಿ ತಂಡ ರಚನೆ ಮಾಡುವ ವಿಚಾರವಾಗಿ ಇಂದಿನ ಸಂಪುಟ ಸಭೆಯಲ್ಲಿ ಈ ಕುರಿತಾದ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಕಳೆದ ಬಾರಿಯ ಕ್ಯಾಬಿನೆಟ್ ನಲ್ಲೇ ಚರ್ಚೆ ಅಗಿದೆ ಎಂದು ತಿಳಿಸಿದರು.

ಯಾವ ತಂಡ ರಚನೆ ಮಾಡಬೇಕು ಅಂತ ಈಗಾಗಲೇ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಚಿವರು ಚರ್ಚೆ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ. ತಂತ್ರಜ್ಞಾನ ಸ್ಕ್ಯಾಮ್ ಆಗಿದೆ, ಹಣಕಾಸು ಹಗರಣ ಆಗಿದೆ. ಬಿಟ್ ಕಾಯಿನ್ ಹಗರಣದಲ್ಲಿ ನಮಗೆ ಸೈಬರ್ ತಂತ್ರಜ್ಞರ ನೆರವು ಬೇಕಾಗುತ್ತದೆ. ತಂತ್ರಜ್ಞಾನ ತಿಳಿಸಬೇಕಾದ ಅಧಿಕಾರಿಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ಇನ್ನೂ ಗಂಗಾ ಕಲ್ಯಾಣ ಹಗರಣದಲ್ಲಿ ಇನ್ಕಮ್ ಟಾಕ್ಸ್ ರಿಟರ್ನ್ ಮರ್ಜ್ ಮಾಡಿದ್ದಾರೆ. ಕೆಲವು ಹಗರಣಗಳ ತನಿಖೆಗೆ ಎಸ್.ಐ. ಟಿಯ ಅಗತ್ಯತೆ ಇರಬಹುದು. ಮತ್ತೆ ಕೆಲವೊಂದು ಎಕ್ಸ್ಪರ್ಟ್ಸ್ ಗಳ ಅಗತ್ಯತೆ ಬೇಕಾಗುತ್ತದೆ. ಎಸಿಎಸ್ ಮಟ್ಟದಲ್ಲೂ ಕೆಲವು ಹಗರಣಗಳ ತನಿಖೆ ನಡೆಸುವ ಅವಶ್ಯಕತೆ ಇದೆ ಇಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು. ಅಧಿಕಾರಕ್ಕೆ ಬಂದರೆ ತನಿಖೆ ನಡೆಸುವ ಭರವಸೆ ನೀಡಿತ್ತು ಎಂದು ಹೇಳಿದರು.












Click it and Unblock the Notifications