Priyank Kharge: ಅಮಿತ್ ಶಾ ಅವರಿಗೆ ಹುಚ್ಚು ನಾಯಿ ಕಚ್ಚಿದೆ: ಪ್ರಿಯಾಂಕ್‌ ಖರ್ಗೆ

ಕಲಬುರಗಿ, ಡಿಸೆಂಬರ್‌ 21: ಅಮಿತ್ ಶಾ ಅವರಿಗೆ ಹುಚ್ಚ ನಾಯಿ ಕಚ್ಚಿದೆ. ದೇವರ ಹೆಸರು ನೂರು ಸಾವಿರ ಜಪ ಮಾಡಿದ್ರೆ ಮುಂದಿನ ಏಳು ಜನ್ಮಕ್ಕೆ ಸ್ವರ್ಗ ಸಿಗುತ್ತೆ ಇಲ್ವೋ ಗೋತ್ತಿಲ್ಲ ನನಗೆ. ಅಂಬೇಡ್ಕರ್ ಹೆಸರು ಜಪ ಮಾಡಿದ್ರೆ ಈ ಜನ್ಮದಲ್ಲೆ ನನಗೆ ಸಮಾಜಿಕ ಆರ್ಥಿಕ ಸ್ವಾಭೀಮಾನದ ಬದುಕು ಸಿಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏನೇ ಸಮಸ್ಯೆ ಅಂದ್ರೆ ಇವರ ಆಲೋಚನೆಯಲ್ಲಿ ಅಂಬೇಡ್ಕರ್ ಇಲ್ಲ ಸಾಮಾಜಿಕ ಸಮಾನತೆ ಇಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನ ಖಂಡಿಸುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Priyank Kharge A Scathing Attack On Union Minister Amit Shah

ಸಿಟಿ ರವಿ ಅವರದ್ದು ಜಾಮೀನುರಹಿತ ಕೇಸ್, ಅದಕ್ಕೆ ಮುಖಭಂಗ ಯಾಕೆ ? ಒಂದು ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಇದು ಮನುಸ್ಮೃತಿ , ಆರ್ ಎಸ್ ಎಸ್ ಶಾಖಾ ತರಬೇತಿ ಅಂತಾ ತೋರಿಸುತ್ತೆ ಎಂದು ಸಿ ಟಿ ರವಿ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

ಸುಳ್ಳನ್ನ ಸತ್ಯ ಹೇಗ ಮಾಡಬಹುದು ಅಂತಾ ಅವರಿಂದ ಕಲಿಯಬೇಕು. ಬಿಜೆಪಿಯವರು ಮನೆಗೆ ದೀಪ ಹಚ್ಚುವ ಕೆಲಸ ಮಾಡಿಲ್ಲ ಬೆಂಕಿ ಹಚ್ಚುವ ಕೆಲಸ ಮಾಡಿರೋದು. ಎಫ್ ಎಸ್ ಎಲ್ ರಿಪೋರ್ಟ್ ಬರಲಿ ನೋಡೊಣ. ಸಿಟಿ ರವಿ ಪದ ಬಳಕೆಯಿಂದ ಬಿಜೆಪಿ ಒಗ್ಗಾಟ್ಟಾಗಿದ್ದರೆ. ಎಲ್ಲರು ಹಾಳು ಬುದ್ದಿಯವರೆ ಅಂತಾ ತೋರಿಸುತ್ತದೆ. ಒಬ್ಬರಾದ್ರು ಖಂಡಿಸಿದ್ರಾ. ಇದನ್ನ ನೋಡಿದ್ರೆ ಎಲ್ಲರು ದುಶ್ಯಾಸನರು ಅಲ್ಲಾ.? ಯಡಿಯೂರಪ್ಪ , ಮುನಿರತ್ನ ಸಲುವಾಗಿ ಒಂದಾದ್ರ ಇವರು, ಇವರಿಗೆ ಒಂದೆ ಒಂದು ನೋಟಿಸ್ ಕೂಡ ನೀಡುವುದಿಲ್ಲ ಎಂದು ಕಿಡಿಕಾರಿದರು.

ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ಹೇಳಿರುವುದು ಹರಕಲು ಬಾಯಿ, ಸಿರಿಯಲ್ ಅಫೆಂಡರ್ ಇದ್ದಾರೆ ಎಂದು. ಇಂತಹವರಿಗೆ ಸದನದಲ್ಲಿ ಅವಕಾಶ ಕೊಡಬಾರದು ಅಂತಾ ಹೇಳಿದ್ದಾರೆ. ಒಬ್ಬ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.‌ ಉಳಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಅಲ್ಲಿ ಏನ್ ಕೆಲಸ.? ಕಾನೂನು ಪ್ರಕಾರ ಮಾಡಿದ್ರೆ ಇವರಿಗೆ ಯಾಕೆ ನೋವು. ದರ್ಶನ್ ಕೇಸ್ ನೋಡಿ ಮೊಬೈಲ್ ಅದು ಬಿಟ್ಟಿರೋದಕ್ಕೆ ಬೇಲ್ ಗಾಗಿ ಇನ್ನೂ ಓಡಾಡ್ತಿದ್ದಾರೆ ಎಂದರು.

ಸಿಟಿ ರವಿ ನೂರು ಹೇಳ್ತಾರೆ, ಬಳೆ ತೊಟ್ಟವರ ಮೇಲೆ ಹೀಗೆ ಮಾಡಿದ್ದಿರಲ್ಲ , ಪ್ರಶ್ನೆ ಇರೋದು ನೀವು ಬಳೆ ತೊಟ್ಟಿರೋದಲ್ಲ.‌ಬಳೆ ತೊಟ್ಟಿರೋದವರ ಮೇಲೆ ನೀವು ಮಾಡಿದ್ರಲ್ಲ. ಬಳೆ ತೊಟ್ಟಿಲ್ಲ , ಸೀರೆ ಉಟ್ಟುಕೊಂಡಿಲ್ಲ ಏನ್ ಮಾತಿದು. ರಾಜ್ಯಧ್ಯಕ್ಷ ಮಾತಾಡೋ ಮಾತಾ ಇದು. ಒಬ್ಬ ರಾಜ್ಯಧ್ಯಕ್ಷ ಏನಾಗಿದೆ ಅಂತಾ ಪರಿಶೀಲನೆ ಮಾಡುತ್ತಾನೆ ಅಂತಾ ಹೇಳಬೇಕಾಗಿತ್ತು. ಇನ್ನೂ ಹತ್ತು ವರ್ಷ ಆದ್ರು ಇವರು ಅಧಿಕಾರಕ್ಕೆ ಬರಲ್ಲ.

ಇವರೇನು ನೋಡಿಕೊಳ್ಳತ್ತಾರೆ. ರಿವೇಂಜ್ ಪಾಲಿಟಿಕ್ಸ್ ಅಂದ್ರೆ ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಆಸ್ತಿ ಪಾಸ್ತಿ ಏನಾದ್ರು ಮಾಡಿದ್ದಿವಾ?. ಮಹಿಳೆ ದೂರು ಕೊಟ್ಟಿರೋದಕ್ಕೆ ಎಫ್ ಐ ಆರ್ ಆಗಿದೆ. ಆ ಮೇಲೆ ಇವರು ದೂರು ಕೊಟ್ಟಿದ್ದಾರೆ. ಈ ಘಟನೆ ಆಗಿರೋದು ಯಾರ ಕಡೆಯಿಂದ, ನಾಲಿಗೆ ಮೇಲೆ ಹಿಡಿತ ಇಲ್ಲದೆ ಇರೋದಕ್ಕೆ ಆಗಿರೋದು. ಅವರ ದೂರು ಕೊಟ್ಟರೆ ಅದನ್ನು ಕೂಡ ಪರಿಶೀಲನೆ ಮಾಡ್ತೆವೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+