12 ಸಾವಿರ ಖಾಸಗಿ ಬಸ್‌ ಸಾರಿಗೆ ಇಲಾಖೆಗೆ ಒಪ್ಪಿಸಿದ ಮಾಲೀಕರು

ಬೆಂಗಳೂರು, ಅಕ್ಟೋಬರ್ 07: ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಖಾಸಗಿ ಬಸ್‌ಗಳ ಮಾಲೀಕರು ತೆರಿಗೆ ಕಟ್ಟುವುದು ಹೇಗೆ? ಎಂದು ಚಿಂತಿಸುತ್ತಿದ್ದಾರೆ. ತೆರಿಗೆಯಿಂದ ಪಾರಾಗಲು ನಾಲ್ಕು ತಿಂಗಳಿನಲ್ಲಿ 12 ಸಾವಿರಕ್ಕೂ ಅಧಿಕ ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈಗ ಸರ್ಕಾರಿ ಬಸ್‌ಗಳ ಸಂಚಾರ ಪುನಃ ಆರಂಭವಾಗಿದೆ. ಆದರೆ, ಎಲ್ಲಾ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿಲ್ಲ.

ಇದರಿಂದಾಗಿ ಖಾಸಗಿ ಬಸ್ ಮಾಲೀಕರಿಗೆ ನಷ್ಟ ಉಂಟಾಗುತ್ತಿದೆ. ಬಸ್‌ಗಳನ್ನು ರಸ್ತೆಗೆ ಇಳಿಸದಿದ್ದರೂ ತೆರಿಗೆ ಕಟ್ಟಬೇಕಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾರಿಗೆ ಇಲಾಖೆಗೆ ಬಸ್‌ಗಳನ್ನು ಹಸ್ತಾಂತರ ಮಾಡುತ್ತಿದ್ದಾರೆ.

ಬಸ್‌ಗಳ ಸಂಚಾರಕ್ಕೆ ಕೋವಿಡ್ ಮಾರ್ಗಸೂಚಿ ಅಡ್ಡಿ ಪಡಿಸುತ್ತಿದೆ. ಶೇ 50ರಷ್ಟು ಸೀಟುಗಳನ್ನು ಭರ್ತಿ ಮಾಡಬೇಕು ಎಂಬ ಮಾರ್ಗಸೂಚಿಗೆ ಪಾಲನೆ ಮಾಡಿದರೆ ಖಾಸಗಿ ಬಸ್ ಮಾಲೀಕರಿಗೆ ನಷ್ಟವಾಗಲಿದೆ. ಆದಕ್ಕಾಗಿ ಬಸ್‌ಗಳನ್ನು ಇನ್ನೂ ರಸ್ತೆಗೆ ಇಳಿಸಿಲ್ಲ.

ಪ್ರಯಾಣಿಕರ ಕೊರತೆ

ಪ್ರಯಾಣಿಕರ ಕೊರತೆ

ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಿದೆ. ಆದರೆ, ಪ್ರಯಾಣಿಕರ ಕೊರತೆಯ ಕಾರಣ ಬಸ್‌ ಮಾಲೀಕರಿಗೆ ಆದಾಯ ಬರುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಉಂಟಾದ ನಷ್ಟದಿಂದಲೇ ಇನ್ನೂ ಅವರು ಹೊರ ಬಂದಿಲ್ಲ.

ಬಸ್ ಸಾರಿಗೆ ಇಲಾಖೆಗೆ

ಬಸ್ ಸಾರಿಗೆ ಇಲಾಖೆಗೆ

ಸಾರಿಗೆ ಇಲಾಖೆಗೆ ಬಸ್ ಒಪ್ಪಿಸಿದರೆ ಮೂರು ತಿಂಗಳಿಗೆ ಒಮ್ಮೆ ಪಾವತಿ ಮಾಡಬೇಕಾದ 48 ಸಾವಿರದಿಂದ 2 ಲಕ್ಷದ ವರೆಗಿನ ತೆರಿಗೆ ಉಳಿಯುತ್ತಿದೆ. ಆದ್ದರಿಂದ, 4 ತಿಂಗಳಿನಲ್ಲಿ 12 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಇಲಾಖೆಗೆ ಒಪ್ಪಿಸಲಾಗಿದೆ.

ದಾಖಲೆಗಳನ್ನು ಕೊಡಬೇಕು

ದಾಖಲೆಗಳನ್ನು ಕೊಡಬೇಕು

ಸಾರಿಗೆ ಇಲಾಖೆಗೆ ಬಸ್ ಒಪ್ಪಿಸುವಾಗ ಬಸ್‌ಗಳ ಸಂಚಾರ ನಿಲ್ಲಿಸಲಾಗಿದೆ ಎಂದು ದಾಖಲೆ ಕೊಡಬೇಕು. ಬಸ್ ನೋಂದಣಿ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಖಾಸಗಿ ಬಸ್ ಮಾಲೀಕರು ನೀಡಬೇಕಾಗುತ್ತದೆ.

Recommended Video

    ಒನ್‌ ಇಂಡಿಯಾ ಫಲಶ್ರುತಿ: ನೀಗಿತು ಹಾಸ್ಮಿನಗರ ಬಡಾವಣೆ ಜನರ ಬವಣೆ.. ವಿದ್ಯುತ್ ಕಂಬ, ತಂತಿಗಳ ತ್ವರಿತ ದುರಸ್ತಿ
    ಇಂಧನ ವೆಚ್ಚವೂ ಆಗುತ್ತಿಲ್ಲ

    ಇಂಧನ ವೆಚ್ಚವೂ ಆಗುತ್ತಿಲ್ಲ

    ಕರ್ನಾಟಕ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಲ ಈ ಕುರಿತು ಮಾತನಾಡಿದ್ದು, "ಕೋವಿಡ್ ಕಾರಣದಿಂದಾಗಿ ಅಪಾರ ನಷ್ಟ ಅನುಭವಿಸಿದ್ದೇವೆ. ಬಸ್ ಒಪ್ಪಿಸುವುದು ಬಿಟ್ಟು ಬೇರೆ ದಾರಿ ಆಗುತ್ತಿಲ್ಲ. 8 ಸಾವಿರ ಸಂಪಾದನೆ ಮಾಡುತ್ತಿದ್ದ ಬಸ್‌ಗಳಲ್ಲಿ 4 ಸಾವಿರವೂ ಆಗುತ್ತಿಲ್ಲ. ಇಂಧನ ವೆಚ್ಚಕ್ಕೆ ಆಗುವಷ್ಟು ಸಂಗ್ರಹವಾಗುತ್ತಿಲ್ಲ" ಎಂದು ಹೇಳಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+