ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ಗಳಿಗೆ ಹೆಚ್ಚು ಹಣ ಕೊಟ್ಟು ಸಾಕಾಗಿದೆಯೇ?: ಇಲ್ಲಿದೆ ಸಿಹಿ ಸುದ್ದಿ
ಬೆಂಗಳೂರು, ಏಪ್ರಿಲ್. 12: ಹಬ್ಬ ಮತ್ತು ರಜೆಯ ಸಮಯಗಳಲ್ಲಿ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೋಗುವುದು ದೊಡ್ಡ ಸವಾಲಿನ ಕೆಲಸವೇ ಸರಿ. ಕೆಲಸದ ನಿಮ್ಮಿತ್ತ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡಿರುವವರು ಕೋಟ್ಯಾಂತರ ಮಂದಿಯಿದ್ದಾರೆ. ಹಬ್ಬ ಹರಿದಿನಗಳಲ್ಲಿ ಇವರೆಲ್ಲಾ ತಮ್ಮ ಸ್ವಂತ ಮನೆಗಳತ್ತ ಪಯಣ ಬೆಳೆಸುತ್ತಾರೆ. ಇದನ್ನೇ ಖಾಸಗಿ ಬಸ್‌ಗಳು ಬಂಡವಾಳ ಮಾಡಿಕೊಂಡಿವೆ.
ರಜೆ ಆರಂಭವಾಗುತ್ತಿದ್ದಂತೆ ಬಸ್ ಪ್ರಯಾಣ ದರವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗುತ್ತದೆ. ಇದರ ಬಗ್ಗೆ ಪ್ರಯಾಣಿಕರು ಹಲವು ಬಾರಿ ದೂರು ನೀಡಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ, ಖಾಸಗಿ ಬಸ್ ಪ್ರಯಾಣ ದರ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿದೆ.

ಹೆಚ್ಚುವರಿ ಬಸ್‌ಗಳ ಖರೀದಿಗೆ ಸರ್ಕಾರ ನಿರ್ಧಾರ
ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ದುಪ್ಪಟ್ಟು ದರ ಏರಿಕೆ ಮಾಡುತ್ತಿರುವ ಕಾರಣ ಅದಕ್ಕೆ ಕಡಿವಾಣ ಹಾಕಲು ಸರ್ಕಾರವೇ ಸಾರಿಗೆ ನಿಗಮಗಳ ಮೂಲಕ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಬಸ್ ಸಂಚಾರ ಅಧಿಕವಾದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಖರೀದಿ ಮಾಡಲು ತೀರ್ಮಾನಿಸಿದೆ.
ಪ್ರಯಾಣಿಕರಿಗೆ ಅನುಕೂಲ ಮಾಡುವ ಪ್ರಯತ್ನದ ಸಲುವಾಗಿ ಸಾರಿಗೆ ಇಲಾಖೆ ಯುಗಾದಿ ಹಬ್ಬದ ಪ್ರಯುಕ್ತ ಹೊಸ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ. ಹಬ್ಬದ ಸಂದರ್ಭದಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರು ಹೆಚ್ಚಾಗಿ ಹವಾನಿಯಂತ್ರಿತ ಹಾಗೂ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಪ್ರಯಾಣಿಸಲು ಆಸಕ್ತಿ ತೋರುತ್ತಿದ್ದಾರೆ.
ಆದರೆ, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಾರಿಗೆ ಸಂಸ್ಥೆಯಲ್ಲು ಬಸ್‌ಗಳು ಇಲ್ಲವಾಗಿದೆ. ಇದರಿಂದ ಪ್ರಯಾಣಿಕರ ಬೇಡಿಕೆಯಂತೆ ಎಸಿ ಹಾಗೂ ಸ್ವೀಪರ್ ಕೋಚ್ ಬಸ್‌ಗಳನ್ನು ಖರೀದಿ ಮಾಡಲು ಸರ್ಕಾರ ಉದ್ದೇಶಿಸಿದೆ. ಹಬ್ಬ ಹರಿದಿನಗಳ ಸಮಯದಲ್ಲಿ ಕೆಎಸ್‌ಆರ್‌ಟಿಸಿ 2 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಡಲಾಗುತ್ತದೆ. ಆದರೆ, ಪ್ರಯಾಣಿಕರು ಹೆಚ್ಚು ಸ್ಲೀಪರ್ ಬಸ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್ಚುವರಿ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ಕೂಡ ಮುಂದಾಗುತ್ತಿದೆ.

ದೂರದ ಊರುಗಳಿಗೆ ತೆರಳುವವರು ಅಧಿಕವಾಗಿರುವ ಕಾರಣ ಹಗಲು ಪ್ರಯಾಣ ಮಾಡುವವರು ಹವಾನಿಯಂತ್ರಿತ ಬಸ್‌ಗಳಿಗೆ ಆದ್ಯತೆ ನೀಡುತ್ತಾರೆ. ರಾತ್ರಿ ಪ್ರಯಾಣ ಮಾಡುವವರು ಸ್ಲೀಪರ್ ಬಸ್‌ಗಳಿಗೆ ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಈ ಬಸ್‌ಗಳನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಹೊಸ ಬಸ್‌ಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications