ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಆದ್ಯತೆ: ಬಸವರಾಜ ಬೊಮ್ಮಾಯಿ

ಕೆಲವರು ಸ್ವಾರ್ಥಕ್ಕಾಗಿ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಆದರೆ ಬೆಂಗಳೂರು ನಮಗೆ ಅನ್ನ ಕೊಡುತ್ತಿದೆ. ಎಷ್ಟೊ‌ ಜನರಿಗೆ ಉದ್ಯೋಗ, ಅನ್ನ ನೀಡಿದೆ. ಇದಕ್ಕೆ ಒಳ್ಳೆ ಹೆಸರು ತರಲು ಶ್ರಮಿಸಬೇಕೆ ಹೊರತಾಗಿ ಕೆಟ್ಟ ಹೆಸರು ತರಬಾರದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೆಂಗಳೂರು, ಫೆಬ್ರವರಿ 16: ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕುರಿತು ಗುರುವಾರ ಮಾತನಾಡಿದ ಅವರು, ಭಾರತದಲ್ಲಿ ಅತಿ‌ ಹೆಚ್ಚು ಸಮ್ಮೇಳನಗಳು, ವಿಚಾರಸಂಕಿರಣಗಳು ನಡೆಯುವ ಸ್ಥಳ ಬೆಂಗಳೂರು. ಇಂಡಿಯಾ ಎನರ್ಜಿವೀಕ್, ಏರ್ ಶೊ, ಜಿ20 ಸಭೆಗಳು ಬೆಂಗಳೂರಿನಲ್ಲಿಯೇ ನಡೆಯುತ್ತಿವೆ. 15 ಕ್ಕೂ ಹೆಚ್ಚು ಸಮಾವೇಶಗಳು ಆಗುತ್ತಿವೆ ಇದಕ್ಕೆ ಬೆಂಗಳೂರಿನ ಬ್ರ್ಯಾಂಡ್ ಕಾರಣ. ಮುಂದೆಯೂ ಬೆಂಗಳೂರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಕಿ ಶಾಶ್ವತವಾಗಿ ಉಳಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಕೆಲವರು ಸ್ವಾರ್ಥಕ್ಕಾಗಿ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಆದರೆ ಬೆಂಗಳೂರು ನಮಗೆ ಅನ್ನ ಕೊಡುತ್ತಿದೆ. ಎಷ್ಟೊ‌ ಜನರಿಗೆ ಉದ್ಯೋಗ, ಅನ್ನ ನೀಡಿದೆ. ಇದಕ್ಕೆ ಒಳ್ಳೆ ಹೆಸರು ತರಲು ಶ್ರಮಿಸಬೇಕೆ ಹೊರತಾಗಿ ಕೆಟ್ಟ ಹೆಸರು ತರಬಾರದು ಎಂದರು.

Priority Is Being Given To Provide a Permanent Solution To The Problems Of Bangalore Bommai said

ಸಮಸ್ಯೆಗಳನ್ನು ಬಗೆಹರಿಸಲು ಅನುದಾನ ನೀಡಿ ನಿರ್ದಿಷ್ಟ ಯೋಜನೆಗೆ ಅನುಮೋದನೆ ನೀಡಿ, . ಬೆಂಗಳೂರಿನ ಸಂಚಾರ, ರಸ್ತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಪ್ರತಿ ದಿನ ಎರಡು ಲಕ್ಷ ಜನರು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ 125 ಲಕ್ಷ ಜನರಿದ್ದಾರೆ. 1.25 ಕೋಟಿ ವಾಹನಗಳಿವೆ. ಪ್ರತಿ ದಿನ 5000 ವಾಹನಗಳು ರಸ್ತೆಗಿಳಿಯುತ್ತವೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಗೆಲುವು ಮತ್ತು ಅಭಿವೃದ್ಧಿಯ ವೇಗವಿದೆ. ವಿ.ಸೋಮಣ್ಣ ಅವರು ಅತ್ಯಂತ ಕ್ರಿಯಾಶಿಲ ವ್ಯಕ್ತಿ, ಅವರು ತಮ್ಮ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ‌ ನೀಡಿದ್ದಾರೆ ಎಂದರು.

ಬೆಂಗಳೂರಿನ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಶಾಸಕರು ಬೆಂಗಳೂರಿನಲ್ಲಿ ಸಮಸ್ಯೆಗಳ ಸುಧಾರಣೆಗೆ ಇನ್ನಷ್ಟು ಹಣಕಾಸಿನ ಅಗತ್ಯವಿದೆ ಎಂದು ಹೇಳಿದಾಗ 6000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಜಕಾಲುವೆಗಳ ಮರು ನಿರ್ಮಾಣ, 21 ಆಧುನಿಕ‌ ಶಾಲೆ ನಿರ್ಮಾಣ, ಅಮೃತ ಯೋಜನೆಯಲ್ಲಿ 72 ಕೆರೆ ಹಾಗೂ ಉದ್ಯಾನವನಗಳನ್ನು ಅಭಿವೃದ್ದಿ ಮಾಡಲಾಗಿದೆ, 75 ಕೊಳಗೇರಿಗಳ ಅಭಿವೃದ್ಧಿಯನ್ನು ಕೈಗೊಂಡು ಬ್ರಾಂಡ್ ಬೆಂಗಳೂರು ಉಳಿಸಲು ಕ್ರಮ ಕೈಗೊಂಡಿದೆ ಎಂದರು.

Priority Is Being Given To Provide a Permanent Solution To The Problems Of Bangalore Bommai said

ಗೋವಿಂದರಾಜನಗರದಲ್ಲಿ ಅದ್ಭುತವಾದ ಆಸ್ಪತ್ರೆ ನಿರ್ಮಾಣ ವಾಗಿದ್ದು 25 ಕೋಟಿ ರೂ.ಗಳನ್ನು ಉಪಕರಣಗಳನ್ನು ಒದಗಿಸಲಾಗಿದೆ. ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ಸಹಾಯಕವಾಗಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+