Get Updates
Get notified of breaking news, exclusive insights, and must-see stories!

ಪ್ರಧಾನಿ ನರೇಂದ್ರ ಮೋದಿ ಮೆಂಟಲಿ ವೀಕ್‌ ಇದ್ದಾರೆ ಎಂದ ಅಬಕಾರಿ ಸಚಿವ ತಿಮ್ಮಾಪುರ

ಬೆಂಗಳೂರು, ಜೂನ್‌ 26: ಪ್ರಧಾನಿ ನರೇಂದ್ರ ಮೋದಿ ಅವರು ಮೆಂಟಲಿ ವೀಕ್‌ ಇದ್ದಾರೆ. ದೇಶದಲ್ಲಿ ಅವರೊಬ್ಬರೇ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಹೇಳಿದ್ದಾರೆ.

ದೇಶದಲ್ಲಿ ಇಷ್ಟೊಂದು ದುರ್ಬಲ ಪ್ರಧಾನಿ ಮೋದಿ ಅವರೊಬ್ಬರೆ ಎಂದ ಅವರು ಮೋದಿ ಯಾವತ್ತಾದರೂ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದ್ದಾರಾ? ಪ್ರೆಸ್‌ ಮೀಟ್‌ ಮಾಡಿದ್ದಾರಾ? ಯಾಕೆಂದರೆ ಅವರಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿ ಇಲ್ಲ ಎಂದು ಹೇಳಿದ್ದಾರೆ.

Excise Minister Thimmapura

ಮೋದಿ ಅವರ ಇಮೇಜ್‌ ಡೆವಲಪ್‌ ಮಾಡಲು ಕಸರತ್ತು ನಡೆಯುತ್ತಲೇ ಇದೆ, ಆದರೆ ಅವರ ಇಮೇಜ್‌ ಬಹಳ ಕುಗ್ಗಿದೆ. ಇದು ಕರ್ನಾಟಕದ ಬಿಜೆಪಿಯವರಿಗೆ ಇನ್ನೂ ಗೊತ್ತಾಗುತ್ತಿಲ್ಲ. ಯಾವಾಗ ಬಡವರ ಅನ್ನಕ್ಕೆ ಕನ್ನ ಹಾಕಿದರೂ, ಯಾವಾಗ ಬಡವರ ಅನ್ನಕ್ಕೆ ತಡೆಯೊಡ್ಡಿದರೂ, ಯಾವಾಗ ಅಂಬಾನಿ, ಅದಾನಿ ಸಾಲ ಮನ್ನಾ ಆಯಿತು. ಚೀನಾ ನಮ್ಮ ಅಕ್ರಮಣ ಮಾಡಿದಾಗಲೇ ಅವರ ಇಮೇಜ್‌ ಕುಸಿಯುತ್ತಾ ಬಂದಿತು. ಈ ಚುನಾವಣೆಯಲ್ಲಿ ಅವರು ಎಷ್ಟು ಓಡಾಡಿದರು. ಆದರೆ ಕೊನೆ ಏನಾಯಿತು ನೀವು ನೋಡಬಹುದು ಎಂದು ಹೇಳಿದರು.

ಇನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್‌ ತಂಗಡಗಿ ಕೂಡ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿ ಅವರು ಇನ್ನು ಎಷ್ಟು ದಿನ ಅಂತ ಈ ದೇಶದ ಜನತೆ ಸುಳ್ಳು ಹೇಳುತ್ತಾರೆ. ಎಲ್ಲೆಲ್ಲಿ ಮೋದಿ ಅವರು ಭಾಷಣ ಮಾಡಿ ಹೋಗಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್‌ ಪಕ್ಷ ಜಯ ಗಳಿಸಿದ. ಅವರದು ಐರನ್‌ ಲೆಗ್‌. ಅದು ಸಿಂಧನೂರು ಬಂದರು. ನಾವು ರಾಯಚೂರು ಮತ್ತು ಕೊಪ್ಪಳ ಎರಡು ಜಿಲ್ಲೆಗಳನ್ನು ಗೆದ್ದೆವು. ಮೋದಿ ಚಿತ್ರದುರ್ಗಕ್ಕೂ ಹೋದರು ಅಲ್ಲೂ ನಾವು ಗೆಲುವು ಸಾಧಿಸಿದೆವು ಎಂದು ಹೇಳಿದರು.

ಅವರೂ ಬಳ್ಳಾರಿಗೂ ಹೋಗಿ ಪ್ರಚಾರ ಮಾಡಿದರೂ ಆದರೆ ಅಲ್ಲೂ ನಾವು ಪೂರ್ಣ ಗೆದ್ದೆವು. ಕಲಬುರಗಿ, ಹೈದರಾಬಾದ್‌ ಕರ್ನಾಟಕ, ಮೈಸೂರು, ದಾವಣಗೆರೆ ಇಲ್ಲೆಲ್ಲಾ ಅವರು ಹೋಗಿದ್ದರು. ಆದರೆ ಅಲ್ಲೆಲ್ಲಾ ನಾವು ಗೆಲುವು ಕಂಡಿದ್ದೇವೆ, ಕಳೆದ 9 ವರ್ಷಗಳಿಂದ ಅವರು ಸುಳ್ಳನ್ನೇ ಸತ್ಯವೆಂದು ಹೇಳುತ್ತಾ ಬಂದಿದ್ದಾರೆ. ಚುನಾವಣೆಯಲ್ಲಿ ಚಾಣಕ್ಯನ ತಂತ್ರ ಏನಾಯಿತು. ಬಹಳಷ್ಟು ದಿನ ಇದೆಲ್ಲಾ ನಡೆಯಲ್ಲ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+