ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ ಮನೆಗೆ ದ್ರೌಪದಿ ಮುರ್ಮು ಭೇಟಿ: ರಾಷ್ಟ್ರಪತಿ ಚುನಾವಣೆಗೆ ಜೆಡಿಎಸ್ ಬೆಂಬಲ ಕೋರಿಕೆ

|
Google Oneindia Kannada News

ಬೆಂಗಳೂರು, ಜು.11: ಎನ್‌ಡಿಎ ಬೆಂಬಲಿತ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ದ್ರೌಪದಿ ಮುರ್ಮು ಜು.10ರಂದು ಬೆಂಗಳೂರಿಗೆ ಭೇಟಿ ನೀಡಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಜೆಡಿಎಸ್ ಬೆಂಬಲ ಕೋರಿದರು.

Recommended Video

ದೇವೇಗೌಡರ ಮನೆಯ ತುಳಸಿ ಕಟ್ಟೆಗೆ ನಮಸ್ಕರಿಸಿದ ದ್ರೌಪದಿ ಮುರ್ಮು | *Politics | OneIndia Kannda

ರಾಷ್ಟ್ರಪತಿ ಚುನಾವಣೆ: ಕರ್ನಾಟಕಕ್ಕೆ ಬಂದ ದ್ರೌಪದಿ ಮುರ್ಮು ಸ್ವಾಗತಿಸಿದ ಸಿಎಂ ಬೊಮ್ಮಾಯಿರಾಷ್ಟ್ರಪತಿ ಚುನಾವಣೆ: ಕರ್ನಾಟಕಕ್ಕೆ ಬಂದ ದ್ರೌಪದಿ ಮುರ್ಮು ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ನಿವಾಸಕ್ಕೆ ಭಾನುವಾರ ಬಂದಿದ್ದ ದ್ರೌಪದಿ ಮುರ್ಮು ಅವರು ಕೆಲ ಕಾಲ ಮಾತುಕತೆ ನಡೆಸಿ ಬೆಂಬಲ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಇದ್ದರು.

Presidential Election: Draupadi Murmu seeks JDS support

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕಿಶನ್ ರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತಿತರರ ಜತೆ ಮಾತುಕತೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಹಾಜರಿದ್ದರು.

Presidential Election: Draupadi Murmu seeks JDS support

ಇದೇ ವೇಳೆ ದೇವೇಗೌಡ, ಚನ್ನಮ್ಮ ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ಅವರು ಸೇರಿ ಇಡೀ ಕುಟುಂಬದ ಸದಸ್ಯರೆಲ್ಲರೂ ಮುರ್ಮು ಅವರಿಗೆ ಆತಿಥ್ಯ ನೀಡಿ ಆತ್ಮೀಯವಾಗಿ ಗೌರವಿಸಿದರು.

ತುಳಸಿ ಕಟ್ಟೆಗೆ ನಮನ:

ದ್ರೌಪದಿ ಮುರ್ಮು ಅವರು ದೇವೇಗೌಡರ ನಿವಾಸ ಪ್ರವೇಶಿಸುತಿದ್ದಂತೆ ಎದುರಾದ ತುಳಸಿ ಕಟ್ಟೆಗೆ ನಮಿಸಿದರು. ತಮ್ಮ ಪಾದರಕ್ಷೆಗಳನ್ನು ಕಳಚಿದ ದ್ರೌಪದಿ ಮುರ್ಮು ಅವರು ತುಳಸಿ ಕಟ್ಟೆಗೆ ನಮಿಸಿ ಆರತಿ ಬೆಳಗಿದರು. ಮಾತುಕತೆ ಮುಗಿಸಿ ತೆರಳಿದ ದ್ರೌಪದಿ ಮುರ್ಮು ಅವರನ್ನು ಶ್ರೀಮತಿ ಚನ್ನಮ್ಮ ದೇವೇಗೌಡರು ಕಾರಿನವರೆಗೂ ಬಂದು ಬೀಳ್ಕೊಟ್ಟರು.

Presidential Election: Draupadi Murmu seeks JDS support

ಚರ್ಚಿಸಿ ಬೆಂಬಲ ನಿರ್ಧಾರ:

ಮಾತುಕತೆ ನಂತರ ಜೆಡಿಎಸ್‌ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

English summary
NDA-Supporting presidential election candidate Draupadi Murmu visited Bangalore on June 10 and sought JDS support to support her in the presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X