• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಕ್ಷದಲ್ಲಿ 'ಅಧ್ಯಕ್ಷರೇ ಫೈನಲ್': ನಳಿನ್ ಕುಮಾರ್ ಕಟೀಲ್ ಟಾರ್ಗೆಟ್ ಮತ್ತೆ ಬಿಎಸ್ವೈ?

|
Google Oneindia Kannada News

ಬೀದರ್, ಫೆ 20: ಕರ್ನಾಟಕ ಬಿಜೆಪಿ ಘಟಕದಲ್ಲಿ ಸುಪ್ರೀಂ ಯಾರು? ರಾಜ್ಯಾಧ್ಯಕ್ಷರೋ ಅಥವಾ ರಾಜಾಹುಲಿಯೋ ಎನ್ನುವ ಗೊಂದಲ, ಪಕ್ಷದ ಹಿರಿಯ ಮುಖಂಡರಿಂದ ಹಿಡಿದು, ಸಾಮಾನ್ಯ ಕಾರ್ಯಕರ್ತರಿಗೂ ಇದೆ.

ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮುನ್ನ, ಯಡಿಯೂರಪ್ಪನವರ ಅಭಿಪ್ರಾಯವನ್ನು ಅಮಿತ್ ಶಾ ಪಡೆದುಕೊಂಡಿರಲಿಲ್ಲ ಎನ್ನುವ ಮಾತು ಆ ವೇಳೆ ಚಾಲ್ತಿಯಲ್ಲಿತ್ತು.

"ಕಾದು ನೋಡಿ" ಎಂದು ಮಾರ್ಮಿಕವಾಗಿ ನುಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

ಇದಾದ ನಂತರ, ನಳಿನ್ ಕಟೀಲ್ ಮತ್ತು ಯಡಿಯೂರಪ್ಪನವರ ನಡುವಿನ ಸಂಬಂಧ ಅಷ್ಟಕಷ್ಟೇ ಎನ್ನುವುದಕ್ಕೆ ಹಲವು ಉದಾಹರಣೆಗಳು ಎದುರಾಗಿದ್ದವು. ಒಂದು ಹಂತದಲ್ಲಿ ಯಡಿಯೂರಪ್ಪ, ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದರು.

ಕುಮಾರಸ್ವಾಮಿ ಕಣ್ಣೀರು ಹಾಕುವ ಸಿಎಂ, ಸಿದ್ದರಾಮಯ್ಯ? ಕಟೀಲ್ ವ್ಯಂಗ್ಯಕುಮಾರಸ್ವಾಮಿ ಕಣ್ಣೀರು ಹಾಕುವ ಸಿಎಂ, ಸಿದ್ದರಾಮಯ್ಯ? ಕಟೀಲ್ ವ್ಯಂಗ್ಯ

ಆ ವೇಳೆ, ನಯವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದ ನಳಿನ್ ಕಟೀಲ್, "ನೀವೇ ಕ್ಯಾಪ್ಟನ್, ನಾವೆಲ್ಲಾ ಪ್ಲೇಯರ್ಸ್" ಎನ್ನುವ ಮೂಲಕ, ಯಡಿಯೂರಪ್ಪನವರ ಸಿಟ್ಟನ್ನು ಕಮ್ಮಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈಗ ಬೀದರ್ ನಲ್ಲಿ, ನಾನೇ ಫೈನಲ್ ಎನ್ನುವ ಮಾತನ್ನು ಕಟೀಲ್ ಆಡಿದ್ದಾರೆ.

18 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ

18 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಬಿಜೆಪಿ ಸಾಂಸ್ಥಿಕ ಚುನಾವಣೆಗಳ ಪದ್ಧತಿಯಂತೆ, 18 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ನೂತನ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನಳಿನ್ ಕಟೀಲ್ ಭಾಗವಹಿಸುತ್ತಿದ್ದಾರೆ. ಬೀದರ್ ಕಾರ್ಯಕ್ರಮದಲ್ಲಿ ಕಟೀಲ್ ಆಡಿರುವ ಮಾತು, ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡಿದಂತಿದೆ.

ಅಧ್ಯಕ್ಷರ ಮಾತೇ ಅಂತಿಮವಾಗುತ್ತದೆಯೇ ಹೊರತು ಜನಪ್ರತಿನಿಧಿಗಳದಲ್ಲ

ಅಧ್ಯಕ್ಷರ ಮಾತೇ ಅಂತಿಮವಾಗುತ್ತದೆಯೇ ಹೊರತು ಜನಪ್ರತಿನಿಧಿಗಳದಲ್ಲ

"ನಮ್ಮ ಪಕ್ಷದೊಳಗಿನ ವಿಚಾರದಲ್ಲಿ ಅಧ್ಯಕ್ಷರ ಮಾತೇ ಅಂತಿಮವಾಗುತ್ತದೆಯೇ ಹೊರತು ಜನಪ್ರತಿನಿಧಿಗಳದಲ್ಲ. ಅಧ್ಯಕ್ಷರು ಹೇಳಿದ ಮಾತನ್ನು ಎಲ್ಲರೂ ಗೌರವಿಸಿ ಅದನ್ನು ಪಾಲಿಸಬೇಕಾಗುತ್ತದೆ. ಆ ಮೂಲಕ, ಪಕ್ಷ ಬಲವೃದ್ದನೆಗೆ ಅಧ್ಯಕ್ಷರಿಗೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಬೇಕು" ಎನ್ನುವ ಮಾತನ್ನು ಕಟೀಲ್ ಹೇಳಿದ್ದಾರೆ.

ರಾಜ್ಯದ ಜವಾಬ್ದಾರಿಯನ್ನು ನಮ್ಮ ವರಿಷ್ಠರು ನೀಡಿರುತ್ತಾರೆ

ರಾಜ್ಯದ ಜವಾಬ್ದಾರಿಯನ್ನು ನಮ್ಮ ವರಿಷ್ಠರು ನೀಡಿರುತ್ತಾರೆ

"ರಾಜ್ಯಾಧ್ಯಕ್ಷರಿಗೆ ಆಯಾಯ ರಾಜ್ಯದ ಜವಾಬ್ದಾರಿಯನ್ನು ನಮ್ಮ ವರಿಷ್ಠರು ನೀಡಿರುತ್ತಾರೆ. ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದು ಅಧ್ಯಕ್ಷರ ಕೆಲಸವಾಗಿರುತ್ತದೆ. ಜನಪ್ರತಿನಿಧಿಗಳ ಗೌರವವನ್ನು ಉಳಿಸುವ ಕೆಲಸವನ್ನು ಪಕ್ಷ ಮಾಡಬೇಕು. ಹಾಗೆಯೇ, ಅಧ್ಯಕ್ಷರು ಹೇಳಿದ ಮಾತನ್ನು ಎಲ್ಲರೂ ಕೇಳಬೇಕು" ಎಂದು ಕಟೀಲ್ ಹೇಳಿರುವುದು, ಯಾರನ್ನು ಟಾರ್ಗೆಟ್ ಮಾಡಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಯಡಿಯೂರಪ್ಪನವ ಹಿಡಿತವನ್ನು ತಪ್ಪಿಸುವ ಕಾರಣ

ಯಡಿಯೂರಪ್ಪನವ ಹಿಡಿತವನ್ನು ತಪ್ಪಿಸುವ ಕಾರಣ

ಕರ್ನಾಟಕದಲ್ಲಿ ಪಕ್ಷದ ಮೇಲೆ ಯಡಿಯೂರಪ್ಪನವ ಹಿಡಿತವನ್ನು ತಪ್ಪಿಸುವ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್​ ಕರಾವಳಿ ಭಾಗದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎನ್ನುವ ಮಾತು ಹಿಂದೆ ಚಾಲ್ತಿಯಲ್ಲಿತ್ತು.

English summary
President Decision Is Final Not Party Leaders: Karnataka BJP President Nalin Kumar Kateel Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X