ಪದವಿ ಓದಲು ಆರ್ಥಿಕ ಸಹಾಯ ಬೇಕೆ? ಈ ಪರೀಕ್ಷೆ ಬರೆಯಿರಿ

ಬೆಂಗಳೂರು, ಜ. 23: ನಗರದ ಪ್ರೇರಣಾ ಸಂಘಟನೆಯು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪೋಷಣೆ ಅರ್ಹತೆ ಪರೀಕ್ಷೆಯನ್ನು ಹಮ್ಮಿಕೊಂಡಿದೆ. 6,000 ರು. ಗಳಿಗಿಂತ ಕಡಿಮೆ ಶಾಲಾ ಶುಲ್ಕ ಹೊಂದಿರುವ ಅಗತ್ಯವುಳ್ಳ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದು.

ಜ. 25ರಂದು ಬೆಂಗಳೂರಿನ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಬಾಪು ಬಾಲಿಕಾ ಪ್ರೌಢಶಾಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಗವಿಪುರಂನ ಕೆಂಪೇಗೌಡ ನಗರದ ಚೌಲ್ಟ್ರಿಯ ಎದುರು ಇರುವ ಉದಯಭಾನು ಕಲಾ ಸಂಘದ ಕಚೇರಿಯಲ್ಲಿ ಬೆಳಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. [ಪಿಯುಸಿ ಪರೀಕ್ಷೆಗೆ ಬ್ಲೋ ಅಪ್ ಸಿಲೆಬಸ್]

ಇವರು ಪರೀಕ್ಷೆ ಬರೆಯಲು ಅರ್ಹರು...

  • 9ನೇ ತರಗತಿಯಲ್ಲಿ ಕನಿಷ್ಠ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.
  • ಪೋಷಕರ ವಾರ್ಷಿಕ ಆದಾಯ 2 ಲಕ್ಷ ರು.ಗಳಿಗಿಂತ ಕಡಿಮೆ ಇರಬೇಕು. [ಬೆಂಗಳೂರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸ್ಕಾಲರ್ ಶಿಪ್]
  • ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸುವ ಸಾಮರ್ಥ್ಯವಿರಬೇಕು.

ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಆರ್ಥಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ನಿರ್ವಹಣೆಯ ಆಧಾರದ ಮೇಲೆ ಪಿಯುಸಿ ಪ್ರಥಮ ವರ್ಷದಿಂದ ಪದವಿ ಮುಗಿಯುವವರೆಗೂ ಆರ್ಥಿಕ ಸಹಾಯ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಜ. 24ರೊಳಗೆ ಹೆಸರು ನೋಂದಾಯಿಸಬಹುದು. [ಅಮೆರಿಕಕ್ಕೆ ಹೊರಟ ಮಂಗಳೂರಿನ ಯುವ ವಿಜ್ಞಾನಿ]

ಪ್ರೇರಣಾ ಸಂಘಟನೆಯ ಕಚೇರಿ ವಿಳಾಸ : #2994, ಪ್ರೇಮಚಂದ್ರಾ ಪ್ರಥಮ ಮಹಡಿ, 2ನೇ ಮುಖ್ಯ ರಸ್ತೆ, 17ನೇ ಕ್ರಾಸ್, ಬನಶಂಕರಿ 2ನೇ ಹಂತ (ಉಮಾ ಮಹೇಶ್ವರ ದೇವಸ್ಥಾನದ ಹತ್ತಿರ), ಕೆ.ಆರ್. ರಸ್ತೆ, ಬೆಂಗಳೂರು - 560 070, ಇ ಮೇಲ್ : [email protected], ದೂ. ಸಂ. 080- 2676 1104 ಅಥವಾ 6533 7823.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+