ರಾಜ್ಯದ ಎಲ್ಲೆಲ್ಲಿ ಮುಂಗಾರು ಪೂರ್ವ ಮಳೆ?

Written By:
Subscribe to Oneindia Kannada

ಬೆಂಗಳೂರು, ಮೇ 30: ಮುಂಗಾರು ಪೂರ್ವ ಮಳೆ ತನ್ನ ಅಬ್ಬರವನ್ನು ರಾಜ್ಯದ ಹಲವೆಡೆ ಮುಂದುವರಿಸಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ರಾಯಚೂರು ಜಿಲ್ಲೆಯ ಕೆಲವು ಕಡೆ ಶನಿವಾರ ಮತ್ತು ಭಾನುವಾರ ಮಳೆಯಾಗಿದೆ.

ಬಳ್ಳಾರಿಯಲ್ಲಿ ಭರ್ಜರಿ ಮಳೆ ಯಾಗಿದ್ದು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಬೃಹತ್ ಮರಗಳು ಧರೆಗೆ ಉರುಳಿದ್ದರಿಂದ ಕೆಲ ವಾಹನಗಳು ಮತ್ತೆ ಮನೆ ಜಖಂ ಗೊಂಡಿವೆ.[ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ]

rain

ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ತೊಂಡೆಭಾವಿಯಲ್ಲಿ 9 ಸೆಂ.ಮೀ ಮಳೆಯಾಗಿದೆ. ಬಂಟ್ವಾಳ, ಚಿಂತಾಮಣಿ 7, ಮಧುಗಿರಿ 6, ಧರ್ಮಸ್ಥಳ, ಭರಮಸಾಗರ, ಪಾವಗಡದಲ್ಲಿ 5 ಸೆಂ.ಮೀ ಮಳೆಯಾಗಿದೆ.

ಉಳಿದಂತೆ ಶ್ರವಣಬೆಳಗೋಳ, ಗುಂಡ್ಲುಪೇಟೆ, ಚಾಮರಾಜನಗರ, ಸುಬ್ರಹ್ಮಣ್ಯ, ನಾಗೇಹಳ್ಳಿ, ಹೋಸಕೋಟೆ, ದೇವನಹಳ್ಳಿ, ನರಸಿಂಹಪುರ, ಮಡಿಕೇರಿ, ರಾಯಲ್ಪಾಡು ನಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 41.5 ಉಷ್ಣತೆ ದಾಖಲಾಗಿದೆ.[ಭಾರೀ ಮಳೆ ತಂದ ಅವಾಂತರ ಚಿತ್ರಗಳು]

ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳಣಾಡಿನಲ್ಲಿ ಸಾಧಾರಣ ಮಳೆಯಾಗುವ ಸಂಭವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಸಂಜೆ ವೇಳೆ ಸಾಧಾರಣ ಮಳೆ ಸುರಿಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rainfall occurred at many places over Coastal Karnataka & South Interior Karnataka and at isolated places over North Interior Karnataka. Heavy rainfall amounts (cm): Mani (Dakshina Kannada dt), Thondebhavi (Chikkaballapura dt) 9 each; Bantwal (Dakshina Kannada dt), Chintamani 7 each.
Please Wait while comments are loading...