ಪ್ರಣಬ್ ಮುಖರ್ಜಿ ಕರ್ನಾಟಕ ಭೇಟಿ, ಕಾರ್ಯಕ್ರಮಗಳು
ಬೆಂಗಳೂರು, ಜುಲೈ 27 : ಎರಡು ದಿನಗಳ ಭೇಟಿಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮೈಸೂರು, ಬೀದರ್, ಕಲಬುರಗಿ ಮತ್ತು ಬೆಂಗಳೂರಿಗೆ ರಾಷ್ಟ್ರಪತಿಗಳು ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಗಳ ಆಗಮನದ ಹಿನ್ನಲೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮಗಳಲ್ಲಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಕಲಬುರಗಿಗೆ ಭೇಟಿ ನೀಡಲಿದ್ದಾರೆ.

ರಾಷ್ಟ್ರಪತಿಗಳ ಕಾರ್ಯಕ್ರಮಗಳ ವಿವರ ಇಲ್ಲಿದೆ
* ಸೋಮವಾರ 2 ಗಂಟೆಗೆ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಆಗಮನ
* ಚಾಮುಂಡಿ ಬೆಟ್ಟಕ್ಕೆ ಭೇಟಿ
* 3.30 ಮೈಸೂರು ವಿವಿ ಶತಮಾನೋತ್ಸವದಲ್ಲಿ ಭಾಗಿ [ನೂರು ವರ್ಷದ ಸಂಭ್ರಮದಲ್ಲಿರುವ ಮೈಸೂರು ವಿವಿ]
* 5 ಗಂಟೆಗೆ ಯಲಹಂಕ ವಾಯುನೆಲೆಗೆ ಆಗಮನ
* 5.45ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಎಫ್‌ಕೆಸಿಸಿಐ ಶತಮಾನೋತ್ಸವದಲ್ಲಿ ಭಾಗಿ
* ರಾಜಭವನದಲ್ಲಿ ವಾಸ್ತವ್ಯ
ಮಂಗಳವಾರದ ಕಾರ್ಯಕ್ರಮಗಳು
* ಬೆಳಗ್ಗೆ 8.35ಕ್ಕೆ ಬೀದರ್‌ಗೆ ಪ್ರಯಾಣ
* 5 ಗಂಟೆ ನಿಮ್ಹಾನ್ಸ್ ಮ್ಯೂಸಿಯಂ ಉದ್ಘಾಟನೆ
* 6.35 ದೆಹಲಿಗೆ ಪ್ರಯಾಣ












Click it and Unblock the Notifications