ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಪತಿ ಆತ್ಮಹತ್ಯೆ : ಐಜಿಪಿ ಪ್ರಣಬ್‌ ಮೊಹಾಂತಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜುಲೈ 18 :'ಎಂ.ಕೆ.ಗಣಪತಿ ಅವರಿಗೆ ನಾನು ಯಾವುದೇ ರೀತಿಯ ಕಿರುಕುಳ ಕೊಟ್ಟಿಲ್ಲ. ತಮ್ಮ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಮಡಿಕೇರಿ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ' ಎಂದು ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ ಹೇಳಿದರು.

ಸೋಮವಾರ ಸಂಜೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಣಬ್ ಮೊಹಾಂತಿ ಅವರು, 'ನಾನು ಯಾವ ಅಧಿಕಾರಿಯ ಜೊತೆಗೂ ಒಂದು ಲೋಟ ಕಾಫಿ ಕುಡಿದಿಲ್ಲ. ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ. ಎಲ್ಲಾ ಆರೋಪಗಳಿಂದ ಮುಕ್ತನಾಗುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.[ಗಣಪತಿ ಆತ್ಮಹತ್ಯೆ, ಎಡಿಜಿಪಿ ಎ.ಎಂ.ಪ್ರಸಾದ್ ಸ್ಪಷ್ಟನೆ]

Pranab Mohanty

ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿದ್ದರು. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

ಈ ಆರೋಪ ಬಂದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪ್ರಣಬ್ ಮೊಹಾಂತಿ ಅವರು, 'ಎಂ.ಕೆ.ಗಣಪತಿ ಅವರಿಗೆ ನಾನು ಯಾವುದೇ ರೀತಿಯ ಕಿರುಕುಳ ಕೊಟ್ಟಿಲ್ಲ. ಅವರು ಮಾಡಿರುವ ಆರೋಪದಿಂದ ಮುಕ್ತನಾಗುತ್ತೇನೆ ಎಂಬ ಭರವಸೆ ಇದೆ' ಎಂದರು. [ಗಣಪತಿ ಸಾವಿನ ಪ್ರಕರಣದ Timeline]

ಎ.ಎಂ.ಪ್ರಸಾದ್ ಸ್ಪಷ್ಟನೆ ಕೊಟ್ಟಿದ್ದರು : 'ಎಂ.ಕೆ.ಗಣಪತಿ ಅವರು ನನ್ನ ಕೈ ಕೆಳಗೆ ಕೆಲಸ ಮಾಡಿರುವುದು ಸತ್ಯ. ನಾನು ಅವರಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಗಣಪತಿ ಅವರ ಆತ್ಮಹತ್ಯೆ ನನಗೆ ದುಃಖ ತಂದಿದೆ. ತನಿಖೆಯ ವಿಚಾರದಲ್ಲಿ ಸರ್ಕಾರವೇ ತೀರ್ಮಾನ ಮಾಡುತ್ತದೆ' ಎಂದು ಎಡಿಜಿಪಿ ಎ.ಎಂ.ಪ್ರಸಾದ್ ಅವರು ಕಳೆದ ವಾರ ಸ್ಪಷ್ಟನೆ ಕೊಟ್ಟಿದ್ದರು. [ಜಾರ್ಜ್ ವಿರುದ್ಧ FIR : ಯಾರು, ಏನು ಹೇಳಿದರು?]

ಜುಲೈ 7ರಂದು ಮಂಗಳೂರು ಐಜಿ ಕಚೇರಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ಕಳೆದ ವಾರ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೆ, ಪ್ರತಿಪಕ್ಷಗಳು ಸಿಬಿಐ ತನಿಖೆಗಾಗಿ ಪಟ್ಟು ಹಿಡಿದಿವೆ.

English summary
IGP (Lokayukta) Pranab Mohanty decided to file an appeal in the High Court against Madikeri JMFC court order that allowed to file FIR against him in DySP MK Ganapathi suicide case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X