ಗೌರಿ ಹತ್ಯೆ ಆರೋಪಿ ಪರುಶುರಾಮ್ ಬಗ್ಗೆ ಗೊತ್ತಿಲ್ಲ: ಮುತಾಲಿಕ್
ಬೆಂಗಳೂರು, ಜೂನ್ 16: "ಶ್ರೀರಾಮಸೇನೆಗೂ ಪರಶುರಾಮ್ ಗೂ ಯಾವುದೇ ಸಂಬಂಧವಿಲ್ಲ. ಆತ ಎಸ್ ಇಟಿ ಬಳಿ ಏನು ಹೇಳಿದ್ದಾನೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
"ನನ್ನೊಂದಿಗೆ ಸಾಕಷ್ಟು ಜನ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ, ನನ್ನೊಂದಿಗಿನ ಚಿತ್ರವಿದೆ ಎಂದ ಮಾತ್ರಕ್ಕೆ ಅವರಿಗೂ ಶ್ರೀರಾಮಸೇನೆಗೂ, ನನಗೂ ಸಂಬಮಧವಿದೆ ಎನ್ನುವುದಕ್ಕಾಗುವುದಿಲ್ಲ" ಎಂದು ಸಹ ಅವರು ಹೇಳಿದ್ದರು. ಗೌರಿ ಹತ್ಯೆ ಪ್ರಕರಣದ ಆರೋಪಿಯಾಗಿ ಬಂಧಿತನಾದ ಪರಶುರಾಮ್ ವಾಘ್ಮೊರೆ ಎಂಬಾತ, ಮುತಾಲಿಕ್ ಜೊತೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಫೋಟೋವನ್ನು ನೋಡಿ ನಮಗೂ ಅವರಿಗೂ ಸಂಬಮಧವಿದೆ ಎನ್ನುವುದು ತಪ್ಪು, ನನ್ನೊಂದಿಗೆ ಹಲವರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಅವರಲ್ಲಿ ಎಷ್ಟೋ ಜನ ನನಗೆ ಪರಿಚಯವೇ ಇರುವುದಿಲ್ಲ' ಎಂದು ಅವರು ಹೇಳಿದ್ದಾರೆ.

2017 ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಅವರ ಮನೆಯಲ್ಲೆ ಗುಂಡಿಕ್ಕಿ ಕೊಲೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ದಳ(SIT)ವನ್ನು ಸರ್ಕಾರ ರಚಿಸಿತ್ತು. ತನಿಖೆ ನಡೆಸಿದ SIT ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಸಫಲವಾಗಿದ್ದು, ಪರುಶುರಾಮ್ ವಾಘ್ಮೋರೆ ಎಂಬ ಪ್ರಮುಖ ಆರೋಪಿ ಜೊತೆ ಇನ್ನೂ ಹಲವರು ಈ ಹತ್ಯೆ ಪ್ರಕರಣದಲ್ಲಿ ಬಮಧಿತರಾಗಿದ್ದಾರೆ.












Click it and Unblock the Notifications