ಹಿಂದೂ ವಿರೋಧಿ ಎನ್ನುವುದು ಕಾಂಗ್ರೆಸ್‌ನ ರಕ್ತದ ಕಣ ಕಣದಲ್ಲಿದೆ: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ, ಜುಲೈ14: ಹಿಂದೂ ವಿರೋಧಿ ಎನ್ನುವುದು ಕಾಂಗ್ರೆಸ್‌ನ ರಕ್ತದ ಕಣ ಕಣದಲ್ಲಿದೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆರ್.ಎಸ್.ಎಸ್. ಸಂಸ್ಥೆಗಳಿಗೆ ಕೊಟ್ಟ‌ ಜಾಗ ತಡೆ ಹಿಡಿದಿದ್ದು ಸರಿಯಲ್ಲ ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧಿಯಾಗಿದೆ. ಹಿಂದುತ್ವದ ಎಲ್ಲವನ್ನೂ ವಿರೋಧಿಸುತ್ತಾರೆ. ಆರ್‌ಎಸ್.ಎಸ್‌ಗೆ ಭೂಮಿ‌ ನೀಡಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು ಅದು ಗೋ ಶಾಲೆ ಮಾಡಲು ತೆಗೆದುಕೊಂಡಿದ್ದಾರೆ ಆರ್‌ಎಸ್‌ಎಸ್‌ಗೆ ಸೇರಿದ ಸಂಸ್ಥೆ ಅಂತಾ ತಡೆ ಹಿಡಿದಿದ್ದಾರೆ.

Pramod Muthalik

ನಾಗರಕಟ್ಟೆ ಸ್ವಚ್ಛ ಮಾಡಿ ಪವಿತ್ರ ಸ್ಥಾನ ಮಾಡಿದ್ದು ಪುನೀತ್ ಕೆರೆಹಳ್ಳಿ ಅವರ ಬಳಗ ಆದರೆ ಅವರಿಗೆ ಪೂಜೆ ಮಾಡಲು ತಡೆ ಹಾಕುತ್ತಿದ್ದಾರೆ ಇದಕ್ಕೆ ಅನುಮತಿ ಪಡೆಯಿರಿ ಅಂತಾರೆ. ನಿತ್ಯ ಐದು ಸಲ ನಮಾಜ್ ಮಾಡ್ತಾರಲ್ಲವಾ? ಅದಕ್ಕೆ ಅನುಮತಿ ಇದೆಯಾ? ಎಂದು ವಾಗ್ದಾಳಿ ನಡೆಸಿದರು.

ಜಾಗಕ್ಕೆ ತಡೆ ಹಿಡಿದಿದ್ದು ತಪ್ಪು. ಆ ತಡೆ ವಾಪಸ್ ಪಡೆಯಬೇಕು ಕಾಂಗ್ರೆಸ್ ಅವಧಿಯಲ್ಲಿ ಯಾವ ಯಾವ ಜಮೀನು ಯಾರಿಗೆ ಕೊಟ್ಟಿದ್ದಾರೆ ಬಹಿರಂಗ ಪಡಿಸಿ. ಎಷ್ಟು ಮಸೀದಿ, ದರ್ಗಾ, ಮದರಸಾಗಳಿಗೆ ಇವರು ಭೂಮಿ ಕೊಟ್ಟಲ್ಲವಾ? ಗೋ ಶಾಲೆ‌ ಮಾಡಲು ಜಮೀನು ತೆಗೆದುಕೊಂಡರೆ ಅದರಲ್ಲಿ ಏನು ಲಾಭದ ವ್ಯವಹಾರ ಇದೆ ಎಂದರು‌.

ಏಕರೂಪ‌ ನಾಗರಿಕ ಸಂಹಿತೆ ಜಾರಿ ವಿಚಾರವಾಗಿ ಮಾತನಾಡಿ, ಸಮಾನ ನಾಗರಿಕ ಸಂಹಿತೆಗೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಮುತಾಲಿಕ್ ಅವರು,ಇದು ಜಾರಿಗೆ ಬರಬೇಕು. ಇದಕ್ಕಾಗಿ ಜುಲೈ 18 ರಿಂದ ಸಹಿ ಅಭಿಯಾನ ಆರಂಭಿಸಿತ್ತೇವೆ. ಅವತ್ತು ಇಡೀ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಆರಂಭ ವಾಗುತಿದ್ದು,ಐದು ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ.

ಸ್ವಾಮೀಜಿ, ವಕೀಲರು, ವೈದ್ಯರು ಸೇರಿ ಅನೇಕ ಗಣ್ಯ ನಾಗರಿಕರಿಂದ ಉದ್ಘಾಟನೆ ಮಾಡಲಾಗುವುದು. ಸಂವಿಧಾನದ 44ನೇ ಕಲಂ ಸಮಾನತೆ ಕಾನೂನು ಉಲ್ಲೇಖ ಮಾಡುತ್ತದೆ ಆದರೆ ದೇಶಕ್ಕೆ 72 ವರ್ಷವಾದರೂ ಸಮಾನ ಕಾನೂನು ಬಂದಿಲ್ಲ. ಇದಕ್ಕೆಲ್ಲ ಕಾಂಗ್ರೆಸ್ ನ ಮುಸ್ಲಿಂ ತುಷ್ಠೀಕರವೇ ಕಾರಣ. ಸುಮಾರು 20 ವರ್ಷಗಳಿಂದ ಹೈಕೋರ್ಟ್, ಸುಪ್ರಿಂಕೋರ್ಟ್ ಸಹ ಇದರ ಜಾರಿ ಬಗ್ಗೆ ಹೇಳುತ್ತ ಬಂದಿವೆ.

ಯಾವ ದೇಶದಲ್ಲಿಯೂ ಎರಡು ಕಾನೂನು ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಎರಡು ರೀತಿಯ ಕಾನೂನು ನಡೆಯುತ್ತಿದೆ, ಇವತ್ತು ಇಡೀ ದೇಶದಲ್ಲಿ ಈ ಕಾನೂನಿನ ಬಗ್ಗೆ ಸಕಾರಾತ್ಮಕ ಚರ್ಚೆ ಶುರುವಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಶಹಬಾನು ಕೇಸ್‌ನಲ್ಲಿಯೂ ಕೋರ್ಟ್ ಈ ಬಗ್ಗೆ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಆಕೆಗೆ ಜೀವನಾಂಶ ಕೊಡುವ ತೀರ್ಪು ನೀಡಿತ್ತು ಆಗ ಇಡೀ ಮುಸ್ಲಿಂರು ತೀರ್ಪಿನ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಆಗ ರಾಜೀವ ಗಾಂಧಿ ಮುಸ್ಲಿಂರಿಗೆ ಅನುಕೂಲ ಆಗುವ ಕಾನೂನು ಪಾಸು ಮಾಡಿದ್ದರು.

ಷರಿಯಾ ಕಾನೂನು ಪ್ರಕಾರ ಜೀವನಾಂಶ ಸಾಧ್ಯವಿಲ್ಲ ಅಂತಾ ಕಾನೂನು ಮಾಡಿದರು. ಆಗ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದರು, ಆಗ ಹಿಂದೂಗಳನ್ನು ಓಲೈಸುವ ಕಾರ್ಯವನ್ನೂ ರಾಜೀವ ಗಾಂಧಿ ಮಾಡಿದ್ದರು. ರಾಮ ಜನ್ಮಭೂಮಿ ಮಂದಿರದ ಶಿಲಾನ್ಯಾಸಕ್ಕೆ ಅವಕಾಶ ‌ಕೊಟ್ಟಿದ್ದರು‌.‌ಶಹರಾ ಬಾನು ಕೇಸ್‌ನಲ್ಲಿಯೂ ರಾಜೀವ ಗಾಂಧಿ ಮಾಡಿದ ಕಾನೂನು ಅಡ್ಡಿ ಬಂದಿತ್ತು ಕಾರಣ ಅಸಮಾನತೆ ಇವತ್ತು ಎದ್ದು ಕಾಣುತ್ತಿದೆ

ಈ ಏಕರೂಪ‌ ನಾಗರಿಕ ಸಂಹಿತೆ ಎಲ್ಲರೂ ಒಪ್ಪಬೇಕು ಎಎಪಿ ಮತ್ತು ಮಾಯಾವತಿ ಇದಕ್ಕೆ ಬೆಂಬಲ ನೀಡಿದ್ದಾರೆ ಆದರೆ ಉಳಿದ ಪಕ್ಷಗಳು ಬೆಂಬಲಿಸಿಲ್ಲ ಅವರೆಲ್ಲರು ಮುಸ್ಲಿಂ ತುಷ್ಠೀಕರಣಕ್ಕಾಗಿಯೇ ಬೆಂಬಲ ನೀಡುತ್ತಿಲ್ಲ, ಮುಸ್ಲಿಂ ಧರ್ಮ ಗುರುಗಳು ಇದಕ್ಕೆ ವಿರೋಧಿಸುತ್ತಿದ್ದು, ತಮ್ಮ ಹಿಡಿತದಲ್ಲಿ ಮುಸ್ಲಿಂ ಸಮಾಜ ಇರಬೇಕು ಅಂತಾ ವಿರೋಧ ಮಾಡುತ್ತಿದ್ದಾರೆ. ಇವರಿಗೆ ಸ್ವಾತಂತ್ರ್ಯ, ಸಮಾನತೆ ಬೇಡವಾಗಿದೆ ಎಂದು ಕಿಡಿಕಾರಿದರು.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಧರ್ಮಗುರುಗಳಿಗೆ ನನ್ನದೊಂದು ಪ್ರಶ್ನೆ ಇದೆ ಎಂದು ಕೇಳಿದ್ದು. ಷರಿಯಾ ಕಾನೂನು ಮುಖ್ಯ ಅಂತಾ ಇವರು ಹೇಳುತ್ತಾರೆ, ಷರಿಯಾ ಕಾನೂನು ಒಪ್ಪುವುದಾದರೆ ಸಂಪೂರ್ಣ ಶರಿಯಾ ಕಾನೂನು ಒಪ್ಪಬೇಕು. ಷರಿಯಾ ಕಾನೂನಿನಲ್ಲಿ ಕಳ್ಳತನ ಮಾಡಿದರೆ ಕೈ ಕತ್ತರಿಸಬೇಕು ಅಂತಾ ಇದೆ. ಇನ್ನು ಕೈ ಕತ್ತರಿಸುತ್ತಿರಾ? ಎಂದು ಪ್ರಶ್ನಿಸಿದರು.

ಅತ್ಯಾಚಾರ ಮಾಡಿದರೆ ಕಲ್ಲು ಎಸೆದು ಕೊಲ್ಲಬೇಕು ಅಂತಾ ಇದೆ. ಅದನ್ನು ಅನುಸರಣೆಗೆ ತರುತ್ತಿರಾ? ಬ್ಯಾಂಕ್ ವ್ಯವಸ್ಥೆ ಇಲ್ಲ, ರಕ್ತ ಕೊಡುವುದು ಇಲ್ಲ. ಆದರೆ, ಇದು ಯಾವುದು ಇವರಿಗೆ ಬೇಕಿಲ್ಲ ತಮಗೆ ಹೇಗೆ ಬೇಕೋ ಹಾಗೆ ಷರಿಯಾ ಬಳಸುತ್ತಿದ್ದಾರೆ ಇನ್ನು ಸಿನಿಮಾ, ಟಿವಿ, ಮೊಬೈಲ್ ಯಾವುದನ್ನೂ ಷರಿಯಾದಲ್ಲಿ ಇಲ್ಲ. ಮಹಿಳೆಯರು ಡ್ರೈವಿಂಗ್ ಮಾಡುವಂತಿಲ್ಲ. ಬ್ಯುಟಿ ಪಾರ್ಲರ್‌ಗೆ ಹೋಗುವಂತಿಲ್ಲ ಆಸ್ತಿ ಉತ್ತರಾದಿಕಾರಿಯಲ್ಲಿ ಮಹಿಳೆಯರ ಪಾತ್ರ ಇಲ್ಲ. ಏಕರೂಪ ನಾಗರಿಕ ಸಂಹಿತೆಯಿಂದ ಮುಸ್ಲಿಂರಿಗೆ ಲಾಭ ಇದೆ ಎಂದರು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+