ವಕ್ಫ್ ಬೋರ್ಡ್ ವಿವಾದ ಬಗ್ಗೆ ಪ್ರಹ್ಲಾದ ಜೋಶಿ ಸ್ಫೋಟಕ ಹೇಳಿಕೆ !
Waqf Board Controversy: ಕರ್ನಾಟಕದಲ್ಲಿ ವಕ್ಫ್ ಆಸ್ತಿ ಹಾಗೂ ರೈತರ ನಡುವೆ ವಾದ - ವಿವಾದ ಶುರುವಾಗಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಫೋಟಕ ಹೇಳಿಕೆ ಕೊಟ್ಟಿದದ್ದಾರೆ. ಈ ನಡುವೆ ಮಹಾರಾಷ್ಟ್ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ನಾಯಕರು ವಿನಾಕಾರಣ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಭಾರತದಲ್ಲಿ ವಕ್ಫ್ ಕಾನೂನು ಮಾಡಿದ್ದೇ ತಪ್ಪು. ಮೊದಲಿದನ್ನು ತೆಗೆದು ಹಾಕುವುದೇ ಸೂಕ್ತ. ನೆಹರು ಕಾಲದಲ್ಲಿ ಕಾಂಗ್ರೆಸ್ ಅದೇಕೆ ವಕ್ಫ್ ಕಾನೂನು ಮಾಡಿತೋ, ಗೊತ್ತಿಲ್ಲ. ಆದರೆ, 2013ರಲ್ಲಿ ವಕ್ಫ್‌ಗೆ ಮತ್ತೆ ಅಪರಿಮಿತ ಅಧಿಕಾರ ಕೊಟ್ಟಿದ್ದೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ವಕ್ಫ್ ಕಾನೂನು ಮಾಡಿದ್ದೇ ಮೊದಲ ತಪ್ಪು. ಈಗಿರುವಾಗ ಸುಪ್ರೀಂಕೋರ್ಟ್ ಸಹ ಪ್ರಶ್ನಿಸದಂತಹ ಪ್ರಶ್ನಾತೀತ ಅಧಿಕಾರವೇ? ಎಂದು ಪ್ರಶ್ನಿಸಿದ್ದಾರೆ. ಮೊದಲು ಇದನ್ನು ತೆಗೆದು ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಕ್ಫ್ ಕಾನೂನು ತಿದ್ದುಪಡಿ ಅಗತ್ಯ: ಈಗಿನ ಬೆಳವಣಿಗೆ ನೋಡಿದರೆ ಕಡೇ ಪಕ್ಷ ವಕ್ಫ್ ಕಾನೂನು ತಿದ್ದುಪಡಿ ತರುವ ಅವಶ್ಯಕತೆಯಿದೆ. ಅಲ್ಲಾನ ನೆಪದಲ್ಲಿ ವಕ್ಫ್ ಮೂಲಕ ಭೂ ಕಬಳಿಸುವವರಿಗೆ ಕಡಿವಾಣ ಹಾಕಬೇಕಿದೆ ಎಂದಿದ್ದಾರೆ ಪ್ರಹ್ಲಾದ ಜೋಶಿ.
ದೇಶದಲ್ಲಿ ವಕ್ಫ್ ಬೋರ್ಡ್‌ಗೆ ಪರಿಮಿತಿಯೇ ಇಲ್ಲದಾಗಿದೆ. ಜಗತ್ತಿನ ಯಾವ ದೇಶದಲ್ಲೂ ಈ ರೀತಿ ವಕ್ಫ್ ಕಾನೂನು ಇಲ್ಲ. ಹಿಂದೂಗಳು, ರೈತರು ಎಚ್ಚೆತ್ತುಕೊಳ್ಳಬೇಕು. ಮುಂದೊಂದು ದಿನ ನಾವಿರುವ ಮನೆ, ನಿಂತ ನೆಲವನ್ನೇ ವಕ್ಫ್ ತನ್ನ ಆಸ್ತಿ ಎಂದರೂ ಅಚ್ಚರಿಯಿಲ್ಲ. ಅಷ್ಟೊಂದು ಅಪರಿಮಿತ ಅಧಿಕಾರ ಕೊಟ್ಟು ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲಾ ಏನು ಭಾರತದವನೇ?
ಭಾರತದ ನೆಲವನ್ನು ಅಲ್ಲಾನ ಆಸ್ತಿ ಎನ್ನಲು ಅಲ್ಲಾ ಏನು ಭಾರತದವನೇ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಅಲ್ಲದೇ ಅಲ್ಲಾನನ್ನು ಮುಂದಿಟ್ಟು ಆಸ್ತಿ ಕಬಳಿಸುತ್ತಿದೆ ವಕ್ಫ್ ಬೋರ್ಡ್ ಮಾಡುತ್ತಿದೆ ಎಂದಿದ್ದಾರೆ. ಮುಂದುವರಿದು ರಾಜ್ಯದಲ್ಲಿ ರೈತರ ಜಾಮೀನು, ಮಠ, ದೇವಸ್ಥಾನ ಮತ್ತು ಬಡ ಮುಸ್ಲಿಮರ ಆಸ್ತಿಯನ್ನು ವಕ್ಫ್ ಮೂಲಕ ಕಬಳಿಸಲು ಸಚಿವ ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಪಕ್ಷ ಸಹ ಕುಮ್ಮಕ್ಕು ನೀಡಿದೆ ಎಂದು
ಗಂಭೀರ ಆರೋಪವನ್ನು ಮಾಡಿದ್ದಾರೆ.
ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿದ ತಹಶೀಲ್ದಾರ್ ಮತ್ತು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತ್ತು ಪಡಿಸಬೇಕು. ವಕ್ಫ್ ಆಸ್ತಿ ಎಂದಿರುವ ಪಗಣಿಗಳನ್ನು ಜಿಲ್ಲಾಧಿಕಾರಿ ಕೂಡಲೇ ಸರಿಪಡಿಸಬೇಕು. ರೈತರು ದಾಖಲೆ ಸಲ್ಲಿಸಲಿ ಎನ್ನುತ್ತಿದ್ದಾರೆ. ವಕ್ಫ್ ಹೆಸರು ನಮೂದು ಮಾಡುವಾಗ ದಾಖಲೆ ಕೇಳಿದ್ದರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ತಕ್ಷಣವೇ ಯಾವುದೇ ಸಬೂಬು ನೀಡದೆ, ಕೇಳದೆ ನೋಟಿಸ್ ಹಿಂಪಡೆದು ಪಹಣಿ ಸರಿಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ.ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಎಲ್ಲೆಡೆ ಹಿಂದೂಗಳಿಗೆ ಕಿಮ್ಮತ್ತು ಇಲ್ಲದಾಗಿದೆ. ದಯಮಾಡಿ ಯಾರೂ ಕಾಂಗ್ರೆಸ್ ಉಚಿತ ಸ್ಕೀಂಗಳಿಗೆ ಮರುಳಾಗಿ ಮತ ಕೊಡಬೇಡಿ. ಮುಸ್ಲಿಂ ತುಷ್ಟೀಕರಣದ ಕಾಂಗ್ರೆಸ್ ಅನ್ನು ಬೆಂಬಲಿಸಿ ಕೊನೆಗೆ ಹೀಗೆ ಸ್ವಂತ ಮನೆ-ಮಠ, ಜಮೀನು ಕಳೆದುಕೊಳ್ಳಬೇಡಿ ಎಂದು ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications