ಚೈತ್ರ ಕುಂದಾಪುರ, ಪ್ರಮೋದ್ ಮುತಾಲಿಕ್ ಬಗ್ಗೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ
ಹುಬ್ಬಳ್ಳಿ, ಸೆಪ್ಟಂಬರ್ 22: ಬಿಜೆಪಿಗೂ ಮತ್ತು ಬಂಧಿತೆ ಚೈತ್ರಾ ಕುಂದಾಪುರ್‌ಗೆ ಯಾವ ಸಂಬಂಧವು ಇಲ್ಲ. ಅವರು ಬಿಜೆಪಿಯಲ್ಲಿ ಇರಲಿಲ್ಲ, ಅಲ್ಲದೇ ಅವರು ನಮ್ಮ ಪಕ್ಷದ ಸ್ಟಾರ್ ಪ್ರಚಾರಕರು ಅಲ್ಲ.ಅವರನ್ನು ನಾನು ಹಲವು ವರ್ಷಗಳಿಂದ ಅವರನ್ನು ನೋಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಚೈತ್ರಾ ಕುಂದಾಪುರ (Chaitra Kundapur) ಇದೊಂದು ಸ್ಟ್ರೇ ಕೇಸ್ ಎಲ್ಲಲ್ಲೋ ಯಾರ ಹೆಸರಲ್ಲಿ ಟೋಪಿ ಹಾಕುತ್ತಾರೆ. ಅಲ್ಲದೇ ದೊಡ್ಡವರ ಹೆಸರು ಹೇಳಿದ್ದಾರೆ. ಈ ವಿಚಾರವನ್ನು ಒಂದು ಪಕ್ಷಕ್ಕೆ ತಳುಕಿ ಹಾಕಿ ಮಾತನಾಡುವುದು ಸರಿಯಲ್ಲ ಎಂದರು.

ಇನ್ನೂ ಚೈತ್ರ ಕುಂದಾಪುರ ಪ್ರಕರಣ ಕುರಿತು ಕಾಂಗ್ರೆಸ್ ಇಲ್ಲಸಲ್ಲದ್ದನ್ನು ಮಾನತಾಡಿದೆ. ಕಾಂಗ್ರೆಸ್‌ನವರು ಮೊದಲು ಮಾರ್ಗರೇಟ್ ಆಳ್ವಾ ಅವರು ಕೆಲವೇ ವರ್ಷದ ಹಿಂದೆ ಟಿಕೆಟ್ ಮಾರಾಟಕ್ಕಿವೆ ಎಂದು ಹೇಳಿದ್ದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಲಿ ಎಂದು ಕಾಂಗ್ರೆಸ್‌ಗೆ ಅವರು ತಿರುಗೇಟು ನೀಡಿದರು.
ಕಾಂಗ್ರೆಸ್‌ನಲ್ಲಿ ಟಿಕೆಟ್ ಮಾರಾಟವಾಗಿದೆ?
ಸದ್ಯ ಚೈತ್ರಾ ಕುಂದಾಪುರ ಪ್ರಕರಣವನ್ನು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಒಂದಿಬ್ಬರಿಗೆ ಅವರು ಹಣ ವಂಚಿಸಿ ಟೋಪಿ ಹಾಕಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಕಾಂಗ್ರೆಸ್ ಹಿಂದಿನಿಂದಲೂ ತಲ ತಲಾಂತರದಿಂದ ಟಿಕೆಟ್ ಮಾರಾಟ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಅಲ್ಲದೇ ಬಿಜೆಪಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಪ್ರಕರಣದಲ್ಲಿ ಹೆಸರು ಕೇಳಿ ಬಂದ ದೊಡ್ಡ ಉದ್ಯಮಿಗೆ ಬುದ್ಧಿ ಇರಲಿಲ್ಲವಾ, ಅಷ್ಟೊಂದು ಹಣವನ್ನು ಕ್ಯಾಷ್ ಕೊಡುವುದೆಂದರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದರು.
ಪೊಲೀಸರ ವಶದಲ್ಲಿರುವ ಬಂಧಿತೆ ಚೈತ್ರಾ ಕುಂದಾಪುರ ಮೇಲೆ ಅನುಕಂಪ ಇಲ್ಲ. ಅವರಿಗೆ ಸೂಕ್ತ ಶಿಕ್ಷೆಯಾಗಲಿ. ಜೊತೆಗೆ ಅವರಿಗೆ ಐದು ಕೋಟಿ ರೂಪಾಯಿ ಹಣ ಕೊಟ್ಟವರ ಮೇಲೂ ತನಿಖೆ ಆಗಲಿದೆ. ಕುಕ್ಕರ್ ಕೊಟ್ಟಿದ್ದು ಕೂಡ ಭ್ರಷ್ಟಾಚಾರ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ವಿಚಾರ ಬಗ್ಗೆ ಜೋಶಿ ಪ್ರತಿಕ್ರಿಯೆ
ಕರ್ನಾಟಕವು CWMA ನಲ್ಲಿ 2,500 ಕೂಸೆಕ್ ನೀರು ಬಿಡುವುದಕ್ಕೆ ತಯಾರಿದೆ ಎಂದು ಸರ್ಕಾರ ತಿಳಿಸಿದೆ. ತಮಿಳುನಾಡು 12,500 ಕೇಳಿದ್ದರೆ ನೀವು 2500 ಅಂದಾಗ ಒಂದು ತಂಡ ಕಳಿಸಿದ್ದರು. ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ಬಿಡಬೇಕೆಂದು ಹೇಳಿದೆ. ಸದ್ಯ ಕಾವೇರಿ ನೀರು ಹಂಚಿಕೆ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ ಎಂದು ತಿಳಿಸಿದರು.
ಕಾವೇರಿ ವಿಚಾರಣದಲ್ಲಿ ರಾಜಕಾರಣ ಸರಿಯಲ್ಲ. ಎಲ್ಲ ವಿಷಯ ಆನ್ ರೆಕಾರ್ಡ್ ಹೇಳುವುದಕ್ಕೆ ಬರಲ್ಲ. ನಾವು ಎಲ್ಲ ಸಹಕಾರ ಕೊಟ್ಟಿದ್ದೇವೆ, ನಾವು ಸಹ ಕೇಂದ್ರದ ಜಲಶಕ್ತಿ ಮಂತ್ರಿಗಳಿಗೆ ವಿನಂತಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದೇವೆ.
ಅನೇಕರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ
ಭಜರಂಗದಳ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ವಿರುದ್ಧ ಏನು ಪ್ರಕರಣ ದಾಖಲಾಗಿದ್ದಾರೆ ಎಂಬುದು ತಿಳಿದಿಲ್ಲ. ಅವರನ್ನು ಗಡಿಪಾರು ಮಾಡಬೇಕು, ಅವರ ಮೇಲೆ ಎಫ್‌ಐಆರ್ ಹಾಕುವುದು ಸರಿಯಲ್ಲ. ಅನೇಕರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications