ಚುನಾವಣೆ ಟಿ20 ಕ್ರಿಕೆಟ್ ಅಲ್ಲ, ಯೋಚಿಸಿ ಮತ ಚಲಾಯಿಸಿ: ಪ್ರಕಾಶ್ ರೈ

ಬೆಂಗಳೂರು, ಮೇ 12: ಬಿಜೆಪಿಯನ್ನು ಸೋಲಿಸಲೇ ಬೇಕೆಂದು ಜಸ್ಟ್ ಆಸ್ಕಿಂಗ್ ಅಭಿಯಾನ ಪ್ರಾರಂಭಿಸಿರುವ ಪ್ರಕಾಶ್ ರೈ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಗೆ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಪ್ರಕಾಶ್ ರೈ, ನಾವು ಈ ಮುಂಚೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಸಮಯ ಈಗ ಬಂದಿದೆ, ಜಾತಿ ಹೆಸರಲ್ಲಿ, ಹಣ ಪಡೆದು, ನಮ್ಮವ ಎಂಬ ಕಾರಣಕ್ಕೆ ಮತಹಾಕುವ ಪರಿಪಾಠ ಬಿಟ್ಟು ಉತ್ತಮ ಅಭ್ಯರ್ಥಿಗಾಗಿ ಈ ಬಾರಿ ಮತ ಹಾಕೋಣ ಎಂದು ಅವರು ಹೇಳಿದ್ದಾರೆ.

ಚುನಾವಣೆ ಟಿ20 ಪಂದ್ಯವಲ್ಲ, ಸತ್ಯದ ಬಗ್ಗೆ ಯೋಚನೆ ಮಾಡಿ, ಮನಃಸಾಕ್ಷಿಯಿಂದ ಕೆಲ ಕಾಲ ಕೂತು ಸುಮ್ಮನೆ ಯೋಚಿಸಿ ಆ ನಂತರ ನಿರ್ಧಾರ ಮಾಡಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ. ಇದು ಅತ್ಯಂತ ಜವಾಬ್ದಾರಿಯ ವಿಷಯ ಹಾಗಾಗಿ ಆತುರದ ನಿರ್ಧಾರ ಬೇಡ ಎಂದು ಅವರು ಹೇಳಿದ್ದಾರೆ.

Prakash Rai video message to Karnataka voters

ರಜೆ ಇದೆಯೆಂದು ಅಲ್ಲಿ-ಇಲ್ಲಿ ತೆರಳದೆ ತಪ್ಪದೆ ಮತ ಚಲಾಯಿಸಿ ಕರ್ನಾಟಕದ ಭವಿಷ್ಯವನ್ನು ನಿರ್ಧಾರ ಮಾಡಿ, ಉತ್ತಮ ಭವಿಷ್ಯವೇ ನಿಮ್ಮ ಆಯ್ಕೆ ಆಗಿರಲಿ ಎಂದು ಅವರು ಸಂದೇಶ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+