ಪ್ರಜ್ವಲ್ ರೇವಣ್ಣ ಮದುವೆ ಯಾವಾಗ? ಇಲ್ಲಿದೆ ಉತ್ತರ!
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಈಗ, ಕನ್ನಡ ನಾಡಿನ ಮಾನ & ಮರ್ಯಾದಿ ತೆಗೆಯುತ್ತಿದೆ. ನೂರಾರು ಜನರ ಜೊತೆಗೆ ಪ್ರಜ್ವಲ್ ರೇವಣ್ಣ ಲೈಂಗಿಕ ಕ್ರಿಯೆ ನಡೆಸಿದ್ದಾರೆಂಬ ಆರೋಪ ಇರುವ, ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಗಂಭೀರ ಆರೋಪಗಳ ನಡುವೆ ಇದೀಗ ಪ್ರಜ್ವಲ್ ರೇವಣ್ಣ ಮದುವೆ ಯಾವಾಗ? ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆಗೆ, ಸ್ವತಃ ಪ್ರಜ್ವಲ್ ರೇವಣ್ಣ ಅವರೇ ಉತ್ತರ ನೀಡಿದ್ದಾರೆ!
ಪ್ರಜ್ವಲ್ ರೇವಣ್ಣ ಮಾಡಿಕೊಂಡ ಎಡವಟ್ಟಿಗಾಗಿ ಇದೀಗ, ಕರ್ನಾಟಕದ ಮಾನ ಜಗತ್ತಿನ ಮೂಲೆ ಮೂಲೆಯಲ್ಲೂ ಹರಾಜು ಆಗಿದೆ ಹಾಸನ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯು ಪ್ರಸಾರ ಆಗುತ್ತಿದೆ. ಮತ್ತೊಂದು ಕಡೆ ಈ ಕುರಿತಾಗಿ ತೀವ್ರ ಆಕ್ರೋಶ ಕೂಡ ಮೊಳಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನ ಛೀ ಛೀ ಅಂತಿದ್ದಾರೆ. ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಮದುವೆ ಬಗ್ಗೆ ಅವರೇ ಮಾತನಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ. ಹಾಗಾದರೆ ಪ್ರಜ್ವಲ್ ರೇವಣ್ಣ ಮದುವೆ ಯಾವಾಗ? ಆ ವಿಡಿಯೋ ನೋಡಲು ಮುಂದೆ ಓದಿ.

ಪ್ರಜ್ವಲ್ ರೇವಣ್ಣ ಮದುವೆ ಯಾವಾಗ?
ಹೌದು ಪ್ರಜ್ವಲ್ ರೇವಣ್ಣಗೆ ಸೇರಿದ್ದು ಎಂದು ಆರೋಪ ಮಾಡಿರುವ ಅಶ್ಲೀಲ ವಿಡಿಯೋಗಳ ರಾಶಿ ಹಾಸನದ ಹಾದಿ & ಬೀದಿಗಳಲ್ಲಿ ಸಿಕ್ಕಿವೆ. ಈ ಕುರಿತು ವಿಶೇಷ ತಂಡ ರಚನೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸುತ್ತಿದೆ. ಆದ್ರೆ ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಮದುವೆ ಆಗಿರಲಿಲ್ವಾ? ಅನ್ನೋ ಪ್ರಶ್ನೆ ಬಗ್ಗೆ ಕೂಡ ಜನ ಚರ್ಚೆ ನಡೆಸುತ್ತಿದ್ದಾರೆ. ಅಸಲಿಗೆ ಪ್ರಜ್ವಲ್ ರೇವಣ್ಣ ಅವರಿಗೆ ಮದುವೆ ಆಗಿರಲಿಲ್ಲ, ಆದರೆ ಪ್ರಜ್ವಲ್ ತಮ್ಮ ಮದುವೆಯ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಕೆಲವು ದಿನಗಳ ಹಿಂದಷ್ಟೇ ಪ್ರಜ್ವಲ್ ರೇವಣ್ಣ, ತಮ್ಮ ಮದುವೆ ಕುರಿತು ಮಾತನಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.
'ರೂಮ್ ಒಳಗೆ ಬನ್ನಿ...'
ನೋಡಿದ್ರಲ್ಲ ಬಿಗ್‌ಬಾಸ್ ಪ್ರಥಮ್ ಅವರು ಪ್ರಜ್ವಲ್ ರೇವಣ್ಣಗೆ, ಅವರ ಮದುವೆ ಕುರಿತಾಗಿ ಪ್ರಶ್ನೆ ಕೇಳಿದಾಗ. 'ಮೈಕ್ ಬಿಟ್ಟು ಬನ್ನಿ. ರೂಮ್ ಒಳಗೆ ಬನ್ನಿ ಕೇಳಿ, ಆವಾಗ ಹೇಳ್ತೀನಿ!' ಅಂತಾ ಉತ್ತರ ನಿಡಿದ್ದಾರೆ ಎಂಬ ಆರೋಪ ಕೂಡ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬರುತ್ತಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆದ್ರೆ ಈ ವಿಡಿಯೋದಲ್ಲಿ ಇರುವಂತಹ ಧ್ವನಿ ಪ್ರಜ್ವಲ್ ರೇವಣ್ಣ ಅವರದ್ದೇನಾ? ಅನ್ನೋ ಪ್ರಶ್ನೆ ಕೂಡ ಕಾಡ್ತಾ ಇದೆ. ಏಕೆಂದರೆ ಈ ವಿಡಿಯೋ ಎಡಿಟ್ ಮಾಡಲಾಗಿದ್ದು, ಪ್ರಶ್ನೆ ಕೂಡ ಎದ್ದಿದೆ. ಅಲ್ಲದೆ ಪ್ರಜ್ವಲ್ ರೇವಣ್ಣ ಬಗ್ಗೆ, ಈ ವಿಡಿಯೋ ವಿಚಾರವಾಗಿ ಕೂಡ ಬಿಸಿಬಿಸಿ ಚರ್ಚೆ ಆರಂಭ ಆಗಿದೆ.












Click it and Unblock the Notifications