ಹಾಸನ ಕ್ಷೇತ್ರದಿಂದ ಶುರುವಾಯ್ತು ಗೌಡರ ಕುಟುಂಬದಲ್ಲಿ ಆಂತರಿಕ ಕಲಹ; ಅಂದು ಟಿಕೆಟ್ ಬಿಕ್ಕಟ್ಟು, ಇಂದು ವಿಡಿಯೋ ಇಕ್ಕಟ್ಟು
ಹಾಸನ, ಮೇ 01: ಹಾಸನ ಜಿಲ್ಲೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರಿಗೆ ಪ್ರತಿಷ್ಠೆಯ ಕ್ಷೇತ್ರ. ದೊಡ್ಡ ಗೌಡರಿಗೆ ಹೆಸರು, ಉಸಿರು ಕೊಟ್ಟಂತಾಹ ಈ ಕ್ಷೇತ್ರದಿಂದಲೇ..ಆದರೆ, ಹಾಸನ ಕ್ಷೇತ್ರದಿಂದಲೇ ಗೌಡರ ಕುಟುಂಬದಲ್ಲಿ ಆಂತರಿಕ ಕಲಹಗಳಿಗೆ ಕಾರಣವಾಗಿದ್ದು, ಲೋಕಸಭಾ ಚುನಾವಣೆ ಹೊತ್ತಲಿ ಪಕ್ಷದ ನೆಲೆ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದ ಹೊತ್ತಲೇ ದೊಡ್ಡ ಇಕ್ಕಟ್ಟಿಗೆ ದೇವೇಗೌಡರ ಕುಟುಂಬ ಸಿಲುಕಿದೆ.
ಹೌದು, ದೇವೇಗೌಡರ ಕುಟುಂಬದಲ್ಲಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣ ಸೇರಿದಂತೆ ಎಲ್ಲಾರು ರಾಜಕೀಯದಲ್ಲಿದ್ದವರೇ. ಆದರೆ, ಕಳೆದ 18 ವರ್ಷಗಳಿಂದ ಟಿಕೆಟ್ ಗಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹಿರಿಯ ಸೊಸೆ ಹಾಗೂ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಪ್ರಯತ್ನ ಪಟ್ಟರು ಟಿಕೆಟ್ ಮಾತ್ರ ಸಿಗಲಿಲ್ಲ. 18 ವರ್ಷಗಳಿಂದಲೂ ವಿಧಾನಸೌಧ ಮೆಟ್ಟಿಲೇರಲು ಪ್ರಯತ್ನ ಪಡುತ್ತಿರುವ ಭವಾನಿ ರೇವಣ್ಣ ಅವರ ಕನಸು ಕನಸಾಗಿಯೇ ಉಳಿದಿದೆ.

18 ವರ್ಷಗಳಿಂದ ಟಿಕೆಟ್ ಗಾಗಿ ಪ್ರಯತ್ನ ಪಡುತ್ತಿರುವ ಭಾವನಿ ರೇವಣ್ಣ 2023 ರ ವಿಧಾನಸಭಾ ಚುನಾವಣೆಯಲ್ಲಿ ಶತ ಪ್ರಯತ್ನ ಮಾಡಿಯಾದರೂ ಈ ಬಾರೀ ಸ್ಪರ್ಧಿಸಲೇ ಬೇಕು ಎಂದು ಪಣ ತೊಟ್ಟಿದ್ದು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿತ್ತು. ಕುಟುಂಬ ರಾಜಕಾರಣದ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಘೋಷಣೆಗೂ ಮೊದಲೇ ಹಾಸನಕ್ಕೆ ನಾನೇ ಅಭ್ಯರ್ಥಿ ಎಂದು ಭಾವನಿ ರೇವಣ್ಣ ಹೇಳಿಕೆಯ ಕೊಟ್ಟ ಬಳಿಕ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಕೊನೆಗೂ ಕೊನೆ ಕ್ಷಣದಲ್ಲಿ ಕುಟುಂಬ ರಾಜಕಾರಣ ಎಂಬ ಕಾರಣ ನೀಡಿ ಭಾವನೆ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಯ್ತು. ಅಂದು ಹಾಸನ ವಿಧಾನಸಭಾ ಚುನಾವಣಾ ಟಿಕೆಟ್ ಗಾಗಿ ದೊಡ್ಡ ಗೌಡ ಕುಟುಂಬದಲ್ಲಿ ಆಂತರಿಕ ಕಲಹ ಏರ್ಪಟ್ಟಿದ್ದು, ಸ್ವರೂಪ್ ರೇವಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು.
2023 ರ ವಿಧಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ವಿಧಾನಸಭಾ ಚುನಾವಣಾಯ ಸಂದರ್ಭದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ವಿಚಾರದಲ್ಲಿ ಉಂಟಾದ ಆಂತರಿಕ ಕಲಹ ಏರ್ಪಟ್ಟಿದ್ದು, ಈ ಕಲಹ ಮಾಸುವ ಮುನ್ನವೇ ದೇವೇಗೌಡ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಡಿಯೋ ಪ್ರಕರಣದಿಂದಾಗಿ ಮತ್ತೆ ದೇವೇಗೌಡರ ಕುಟುಂಬದಲ್ಲಿ ಆಂತರಿಕ ಕಲಹ ಏರ್ಪಡುಂತೆ ಮಾಡಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಅವರ ಜರ್ಮನಿಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಬಲ್ಯ ಆರೋಪದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನ ಜೆಡಿಎಸ್ ನಿಂದ ಅಮಾನತು ಮಾಡಿ ಅಧಿಕೃತವಾಗಿ ಜೆಡಿಎಸ್ ರಾಜ್ಯ ಘಟಕ ಆದೇಶ ಹೊರಡಿಸಿದ್ದು, ಮತ್ತೆ ಗೌಡರ ಕುಟುಂಬದಲ್ಲಿ ಆಂತರಿಕ ಕಲಹ ಹೆಚ್ಚಾಗುವಂತೆ ಮಾಡಿದೆ.












Click it and Unblock the Notifications