POLSTRAT Exit Poll Survey: ಅಧಿಕ ಸ್ಥಾನ ಪಡೆದರೂ 'ಕೈ'ಗಿಲ್ಲ ಬಹುಮತ; ಕರ್ನಾಟಕದಲ್ಲಿ ಮತ್ತೆ ಅತಂತ್ರ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು (ಬುಧವಾರ, ಮೇ 10) ಮತದಾನ ನಡೆದಿದ್ದು, ರಾಜ್ಯದಲ್ಲಿ ಸುಮಾರು ಶೇ.70ರಷ್ಟು ಮತದಾನವಾಗಿದೆ.
ಮತದಾನದ ನಂತರ ಕರ್ನಾಟಕ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳು ಒಂದರ ಹಿಂದೆ ಒಂದು ಬಿಡುಗಡೆಯಾಗಿದ್ದು, ಪೋಲ್ ಸ್ಟಾರ್ಟ್ ಸಮೀಕ್ಷೆಯಲ್ಲಿ ಹಾಲಿ ವಿಪಕ್ಷ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಪಡೆಯಲಿದೆ. ಆದರೆ, ಆಡಳಿತರೂಢ ಬಿಜೆಪಿ ಅಧಿಕಾರ ಕಳೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

ಕಾಂಗ್ರೆಸ್ 99ರಿಂದ 109 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪೋಲ್ ಸ್ಟಾರ್ಟ್ ಸಮೀಕ್ಷೆ ತಿಳಿಸಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ. ಇನ್ನು ಬಿಜೆಪಿ ಪಕ್ಷ 88ರಿಂದ 98 ಸ್ಥಾನಗಳಿಗೆ ತೃಪ್ತಿಪಡಲಿದೆ. ಇನ್ನು ಜೆಡಿಎಸ್ 21ರಿಂದ 26 ಸ್ಥಾನಗಳಲ್ಲಿ ಗೆಲುವು ಕಾಣಲಿದೆ. ಇದೆ ವೇಳೆ ಪಕ್ಷೇತರರು 0ರಿಂದ 4 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಲಾಗಿದೆ.
ಹೀಗಾಗಿ ಪೋಲ್ ಸ್ಟಾರ್ಟ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 109 ಸ್ಥಾನಗಳನ್ನು ಪಡೆದರೆ, ಪಕ್ಷೇತರರನ್ನು ಸೇರಿಸಿಕೊಂಡು ಸ್ವತಂತ್ರ ಸರ್ಕಾರ ರಚಿಸುವ ಸಮೀಪದಲ್ಲಿದೆ. ಕರ್ನಾಟಕ ವಿಧಾನಸಭೆ ಮ್ಯಾಜಿಕ್ ನಂಬರ್ 113 ಆಗಿದೆ.
ಭಾರತೀಯ ಜನತಾ ಪಕ್ಷವು ಎಲ್ಲಾ 224 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ 223 ಅಸೆಂಬ್ಲಿ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ 208 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ.
ಕರ್ನಾಟಕ ಚುನಾವಣಾ ಕಣದಲ್ಲಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ತಮ್ಮ ಗೆಲುವಿನ ವಿಶ್ವಾಸವನ್ನು ಹೊಂದಿವೆ.












Click it and Unblock the Notifications