ವರ್ತೂರ್ ಸಂತೋಷ್ಗೆ ಸನ್ಮಾನಿಸಿದ್ದ ಎಸ್ಐ ರಾತ್ರೋರಾತ್ರಿ ಎತ್ತಂಗಡಿ : ಕಾರಣವೇನು?
ಬೆಂಗಳೂರು, ಫೆಬ್ರವರಿ 10: ಇತ್ತೀಚೆಗೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಹಳ್ಳಿಕಾರ್ ವರ್ತೂರು ಸಂತೋಷ್ ಅವರ ಹವಾ ಸ್ವಲ್ಪ ಹೆಚ್ಚೇ ಆಗಿದೆ. ಹೊರ ಬಂದ ಬಳಿಕ ವರ್ತೂರು ಸಂತೋಷ್ ಒಡೆಯನನ್ನು ಸನ್ಮಾನ ಮಾಡಲು ಬಂದಿದ್ದ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಇದೀಗ ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನ ಮಾಡಿದ್ದ ಸಬ್ ಇನ್ಸ್ಪೆಕ್ಟರ್ ಅವರನ್ನು ರಾತ್ರೋರಾತ್ರಿ ವಗಾರ್ವಣೆ ಮಾಡಲಾಗಿದೆ. ವರ್ತೂರು ಠಾಣೆ ಎಸ್ಐ ಆಗಿದ್ದ ತಿಮ್ಮರಾಯಪ್ಪ ಅವರನ್ನು ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ವರ್ತೂರ್ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬಿಗ್ ಬಾಸ್ ನಿಂದ ಬಂದ ಬಳಿಕ ನೇರ ಮಾತಿನಿಂದ ಹೆಚ್ಚು ಸುದ್ದಿಯಾಗುತ್ತಿರುವ ವರ್ತೂರ್ ಸಂತೋಷ್ ಅವರನ್ನ ಎಸ್ಐ ತಿಮ್ಮರಾಯಪ್ಪ ಅವರು ಸನ್ಮಾನ ಮಾಡಿ ಅಭಿನಂದನೆ ತಿಳಿಸಿದ್ದರು. ಇದರ ಬೆನ್ನಲ್ಲೇ ಎಸ್ಪಿ ಅವರನ್ನು ವರ್ಗಾವಣೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನೂ ವರ್ತೂರು ಸಂತೋಷ್ ಅವರ ನಿವಾಸಕ್ಕೆ ತೆರಳಿ ಎಸ್ಐ ತಿಮ್ಮರಾಯಪ್ಪ ಅವರು ಸನ್ಮಾನ ಮಾಡಿದ್ದರು. ಈ ವೇಳೆ ಪೊಲೀಸ್ ಸಮವಸ್ತ್ರ ಧರಿಸಿದ್ದರು. ಇನ್ನೂ ಈ ವೇಳೆ ಸಬ್ ಇನ್ಸ್ ಪೆಕ್ಟರ್ ಅವರೊಂದಿಗೆ ಕೆಲ ಕ್ರೈಂ ಸಿಬ್ಬಂದಿಗಳು ಸನ್ಮಾನದ ವೇಳೆ ಹಾಜರಿದ್ದರು.
ಇನ್ನೂ ಜೈಲಿಗೆ ಹೋಗಿ ಬಂದ ಆರೋಪಿಗೆ ಎಸ್ಐ ತಿಮ್ಮರಾಯಪ್ಪ ಸಮವಸ್ತ್ರದಲ್ಲಿ ಅವರಿದ್ದ ಸ್ಥಳಕ್ಕೆ ಹೋಗಿ ಸನ್ಮಾನ ಮಾಡುವ ಅಗತ್ಯವೇನಿತ್ತು ಎಂದು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹುಲಿ ಉಗುರು ವಿಚಾರವಾಗಿ ಜೈಲಿಗೆ ಹೋಗಿ ಬಂದಿದ್ದ ವರ್ತೂರ್ ಸಂತೋಷ್ ಅವರ ವಿಚಾರ ಗೊತ್ತಿದ್ದರು ಸಹ ಪೊಲೀಸರು ಯೂನಿಫಾರ್ಮ್ ನಲ್ಲಿಯೇ ಸನ್ಮಾನ ಮಾಡಿದ್ದು ಎಷ್ಟು ಸರಿ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ.












Click it and Unblock the Notifications