Darshan: ದರ್ಶನ್ ಫೋಟೋ ಹಿಡಿದು ಚಾಮುಂಡಿ ಬೆಟ್ಟಕ್ಕೆ ಬಂದ ಮಹಿಳೆ-ಮುಂದೇನಾಯ್ತು?
ಮೈಸೂರು, ಜುಲೈ 13: ಆಷಾಢಮಾಸದ ಶುಕ್ರವಾರ ಹಿನ್ನೆಲೆ ಇಂದು(ಶನಿವಾರ) ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಚಾಮುಡೇಶ್ವರಿ ಬೆಟ್ಟದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿದೇವತೆಯ ದರ್ಶನ ಪಡೆದರು. ಈ ವೇಳೆ ನಟ ದರ್ಶನ್ ಅವರ ಫೋಟೋ ಹಿಡಿದ ಮಹಿಳೆ ಎಲ್ಲಾರ ಗಮನವನ್ನ ಸೆಳೆದಿದ್ದಾರೆ.
ಆಷಾಡ ಶುಕ್ರವಾರದ ಪ್ರಯುಕ್ತ ಬೆಳಗಿನ ಜಾವ 3.30ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾದವು. ನಾಡ ದೇವತೆ ಚಾಮುಂಡಿಗೆ ಅಭಿಷೇಕ ಅರ್ಚನೆ, ಅಷ್ಟೋತ್ತರ ಪೂಜೆಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದ್ದು, ಭಕ್ತಾದಿಗಳು ದೇವಿ ದರ್ಶನಕ್ಕೆ ಬರುತ್ತಿದ್ದು, ನಟ ದರ್ಶನ್ ಅವರ ಫೋಟೋ ಹಿಡಿದು ಬಂದಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ನ ಕಟ್ಟಾ ಅಭಿಮಾನಿಗಳು ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನ ವ್ಯಕ್ತಪಸುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿದ್ದರು ನಟ ದರ್ಶನ್ ಅವರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವರು ದರ್ಶನ್ ಅವರ ಖೈದಿ ಸಂಖ್ಯೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಮಗುವಿಗೆ ಖೈದಿ ಸಂಖ್ಯೆ ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಧನುಷ್ ಎಂಬ ಅಭಿಮಾನಿ ದರ್ಶನ್ ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದಿದ್ದಾರೆ.
ಇನ್ನೂ ಇಲ್ಲೋಬ್ಬ ಮಹಿಳೆ ಆಷಾಢ ಮಾಸದ ಮೊದಲ ಶುಕ್ರವಾರವಾಗಿತ್ತು ಮತ್ತು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನೆರವೇರಿದವು. ತಾಯಿಯ ಸನ್ನಿಧಿಯಲ್ಲಿ ಮಹಿಳೆ ಮತ್ತು ಅವರ ಜೊತೆ ಬಂದಿದ್ದ ಇನ್ನೊಬ್ಬ ಮಹಿಳೆ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅಔರ ದೊಡ್ಡ ಪೋರ್ಟೇರ್ಟ್ ಹೊತ್ತು ಚಾಮುಂಡಿ ಸನ್ನಿಧಿಗೆ ಬಂದಿದ್ದರು.
ಚಾಮುಡೇಶ್ವರಿದೇವಸ್ಥಾನದ ಬಳಿ ಯಾವುದೇ ರೀತಿಯ ಗಲಾಟೆ ನಡೆಯದಂತೆ ನಿಗಾ ವಹಿಸಲು ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಫೋಟೋ ಒಳಗಡೆ ಒಯ್ಯುವಂತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ದರ್ಶನ್ ಫೋಟೋ ಹಿಡಿದ ಭಕ್ತೆಯರು ವಾದಕ್ಕಿಳಿದರು. ಆದರೆ, ಪೊಲೀಸ್ ಫೋಟೋ ಒಯ್ಯಕೂಡದು, ನಿಮ್ಮ ಹಠ ಸಾಧಿಸುವುದಾದರೆ ವಾಪಸ್ಸು ಹೋಗಿ ಅಂದಾಗ ಮಹಿಳೆಯರು ವಿಧಿಯಲ್ಲದೆ ಚಾಮುಡೇಶ್ವರ್ ದರ್ಶನ ಮಾಡದೆ ಹಿಂದಕ್ಕೆ ಹೋದರು.












Click it and Unblock the Notifications