ಸರ್ಕಾರದ ವಿರುದ್ಧ ಅಪಪ್ರಚಾರದ ಪೋಸ್ಟ್ ಹಾಕಿದರೆ ಬೀಳುತ್ತೆ ಕೇಸ್! ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಬೆಂಗಳೂರು, ಜುಲೈ 24: ರಾಜ್ಯ ಸರ್ಕಾರದ ವಿರುದ್ದ ಅಪಪ್ರಚಾರದ ಫೋಸ್ಟ್ ಹಾಗೂ ಸುಳ್ಳು ಸುದ್ದಿಗಳನ್ನ ಹಾಕಿದರೆ, ಕಾನೂನು ಮೂಲಕವೇ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಹೌದು, ಸುಳ್ಳು ಸುದ್ದಿಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಸಮಾಜದಲ್ಲಿ ದ್ವೇಷ ಹರಡುವವರ ಹೆಡೆಮುರಿ ಕಟ್ಟಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಅಲ್ಲದೇ ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನ ಹಾಕುವ ಮೂಲಕ ಜನರ ದಾರಿ ತಪ್ಪಿಸುವ ಮುಂದಾಗಿದ್ರೆ ಹಾಗೂ ಸರ್ಕಾರದ ಬಗ್ಗೆ ತಪ್ಪು ಸಂದೇಶ ರವಾನೆ ಮಾಡುವ ಕೆಲಸ ಮಾಡಿದ್ರೆ ಅಂತಹ ವಿಚಾರಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಇನ್ನೂ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ವಿರುದ್ದ ಹಲವು ವಿಚಾರಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ದ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿವೆ. ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲೂ ಸಹ ಸುಳ್ಳು ಸುದ್ದಿಗಳು ಹೆಚ್ಚಾಗಿದ್ದು, ಗೃಹ ಲಕ್ಷ್ಮೀ ಯೋಜನೆಯಡಿ ಮನೆಯ ಒಡತಿಗೆ 2000 ನೀಡುವ ಯೋಜನೆಯನ್ನ ಸರ್ಕಾರ ಈಗಾಗಲೇ ಜಾರಿಗೊಳಿಸಿದ್ದು, ಗೃಹ ಲಕ್ಷ್ಮೀ ಯೋಜನೆಯ ನಕಲಿ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಗಮನ ಹರಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ.
ಮಾನ್ಯ ಮಾಧ್ಯಮ ಮಿತ್ರರು ಈ ರೀತಿ ಕಪೋಲಕಲ್ಪಿತ ವರದಿ ಮಾಡುವ ಮುನ್ನ ದಯಮಾಡಿ ನನ್ನನ್ನಾಗಲಿ ಅಥವಾ ಶ್ರೀ ಸತೀಶ್ ಜಾರಕಿಹೊಳಿಯವರನ್ನಾಗಲಿ ಸಂಪರ್ಕಿಸಿ ಪ್ರತಿಕ್ರಿಯೆ ಪಡೆದಿದ್ದರೆ ಈ ರೀತಿ ಜನರಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವ ಸುದ್ದಿ ಹರಡುತ್ತಿರಲಿಲ್ಲ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 23, 2023
ನಾನು ಸದಾ ಕೇವಲ ಒಂದು ಫೋನ್ ಕಾಲ್ ದೂರದಲ್ಲಿದ್ದೇನೆ. ನನ್ನ ಕಚೇರಿ ಅಥವಾ ಮಾಧ್ಯಮ… pic.twitter.com/O0TDpFQ0FB
ಫ್ಯಾಕ್ಸ್ ಚೆಕ್ ಘಟಕ ತೆರೆಯಲು ಸಿದ್ದತೆ
ಸರ್ಕಾರರ ರಚನೆಯಾದ ಬಳಿಕ ಸರ್ಕಾರದ ವಿರುದ್ದ ನಕಲಿ ಪೋಸ್ಟ್ ಗಳ ಹಾವಳಿ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಸ್ಟ್ ನಿಂದ ಜನರು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ನಕಲಿ ಪೋಸ್ಟ್ ಹಾವಳಿಯನ್ನ ತಡೆಗಟ್ಟುವ ಉದ್ದೇಶದಿಂದಲೇ ಫ್ಯಾಕ್ಸ್ ಚೆಕ್ ಘಟಕವನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎನ್ನಲಾಗಿದೆ.
ಇನ್ನೂ ದೇಶದಲ್ಲಿ ಸರ್ಕಾರದ ಕಡೆಯಿಂದ ಸುಳ್ಳು ಸುದ್ದಿಗಳ ಪತ್ತೆ ಕಾರ್ಯ ನಡೆಯುತ್ತಿರುವುದು ಕೇವಲ ಶೇ.18.5 ರಷ್ಟು ಮಾತ್ರ. ಇನ್ನೂ ಕರ್ನಾಟಕದಲ್ಲಿ ಇದು ಇನ್ನೂ ಕಡಿಮೆ ಇದೆ. ಶೇ.60 ರಷ್ಟು ಜನತೆ ಸುಳ್ಳು ಸುದ್ದಿಗಳನ್ನು ನಂಬಿ, ಅದನ್ನೇ ಇತರರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾರೆ ಎಂದು ಅಧ್ಯಯನದ ಮೂಲಲಕ ತಿಳಿದು ಬಂದಿದೆ.
ನಕಲಿ ಸುದ್ದಿ ಕುರಿತು ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ನಕಲಿ, ಸುಳ್ಳು ಸುದ್ದಿ ಹಾಗೂ ಸುಳ್ಳು ಪೋಸ್ಟ್ ಗಳ ವಿರುದ್ದ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಲಿದ್ದೇವೆ. ಇನ್ನೂ ಸರ್ಕಾರದ ವಿರುದ್ದ ತಪ್ಪು ಅಭಿಪ್ರಾಯ ಜನರಲ್ಲಿ ಮೂಡಬಾರದು ಎನ್ನುವ ದೃಷ್ಠಿಯಿಂದ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ತಿಳಿಸಿದ್ದು, ಮಾಧ್ಯಮ ಮಿತ್ರರು ಈ ರೀತಿ ಕಪೋಲಕಲ್ಪಿತ ವರದಿ ಮಾಡುವ ಮುನ್ನ ದಯಮಾಡಿ ನನ್ನನ್ನಾಗಲಿ ಅಥವಾ ಶ್ರೀ ಸತೀಶ್ ಜಾರಕಿಹೊಳಿಯವರನ್ನಾಗಲಿ ಸಂಪರ್ಕಿಸಿ ಪ್ರತಿಕ್ರಿಯೆ ಪಡೆದಿದ್ದರೆ ಈ ರೀತಿ ಜನರಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವ ಸುದ್ದಿ ಹರಡುತ್ತಿರಲಿಲ್ಲ ಎಂದು ಎಚ್ಚರಿಸಿದ್ದಾರೆ.
ನಾನು ಸದಾ ಕೇವಲ ಒಂದು ಫೋನ್ ಕಾಲ್ ದೂರದಲ್ಲಿದ್ದೇನೆ. ನನ್ನ ಕಚೇರಿ ಅಥವಾ ಮಾಧ್ಯಮ ಸಂಯೋಜಕರನ್ನಾದರೂ ಸಂಪರ್ಕಿಸಿದ್ದರೆ ನಾವೇ ಸ್ಪಷ್ಟೀಕರಣ ನೀಡುತ್ತಿದ್ದೆವು. ನಮ್ಮ ಸರ್ಕಾರದ ಎಲ್ಲಾ ಸಚಿವರು ಕಾನೂನುಬದ್ಧವಾಗಿಯೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇವಲ "?" ಬಳಸಿ ಹೆಡ್ ಲೈನ್ ಹಾಕಿ ಈ ರೀತಿ ಸುಳ್ಳು ಸುದ್ದಿಗೆ ಯಾರೂ ಮುಂದಾಗಬಾರದು. ಮಾಧ್ಯಮಗಳು ತಮ್ಮ ವರದಿಗಾರಿಕೆಯಲ್ಲಿ ಸ್ಪಷ್ಟವಾಗಿ ಸತ್ಯಾಂಶವನ್ನು ಪರಿಗಣಿಸಿ ವರದಿ ಮಾಡುವಂತೆ ಈ ಮೂಲಕ ಕೋರಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications