ಡಿಕೆಶಿ ಹಾಗೂ ಆಪ್ತರಿಗೆ ಇಡಿ ಕೇಸಲ್ಲಿ ಕೋರ್ಟಿನಿಂದ ಸಿಹಿ ಕಹಿ ಸುದ್ದಿ

Recommended Video

      DK Shivakumar : ಡಿಕೆಶಿ ಹಾಗೂ ಆಪ್ತರಿಗೆ ಕೋರ್ಟಿನಿಂದ ಸಿಹಿ ಕಹಿ ಸುದ್ದಿ

      ಬೆಂಗಳೂರು, ಸೆ. 17: ಮನಿಲಾಂಡ್ರಿಂಗ್ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ನೀಡಿರುವ ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಾಲ್ವರು ಆಪ್ತರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಅದರೆ ನಾಲ್ವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿ ಮಧ್ಯಂತರ ಆದೇಶ ಹೊರಡಿಸಲಾಗಿದೆ.

      ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್ ನಲ್ಲಿ ಸಿಕ್ಕ 8.69 ಕೋಟಿ ರು ಬಗ್ಗೆ ಪ್ರಶ್ನಿಸಲು ಇಡಿ ಮುಂದಾಗಿದ್ದು ಈ ಕುರಿತಂತೆ ಸಮನ್ಸ್ ನೀಡಲಾಗಿದೆ. ಸದ್ಯ ಇಡಿ ಬಂಧನದಲ್ಲಿರುವ ಡಿಕೆಶಿ ಅವರ ಜಾಮೀನು ಅರ್ಜಿ ವಿಚಾರಣೆಯೂ ದೆಹಲಿಯ ವಿಶೇಷ ನ್ಯಾಯಾಲಯದಲ್ಲಿ ಜಾರಿಯಲ್ಲಿದೆ.

      ಕರ್ನಾಟಕ ಹೈಕೋರ್ಟ್ ನಲ್ಲಿಂದು ನ್ಯಾ. ಅಭಯ್ ಎಸ್ ಓಕಾ ಅವರಿದ್ದ ಏಕಸದಸ್ಯ ಪೀಠವು ಡಿಕೆ ಶಿವಕುಮಾರ್ ಹೊರತುಪಡಿಸಿ ಉಳಿದ ನಾಲ್ವರಿಗೆ ಒಂದು ತಿಂಗಳವರೆಗೂ ಬಂಧನ ಮಾಡದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿ ಮಧ್ಯಂತರ ಆದೇಶ ನೀಡಿದೆ.

      PMLA Case: HC rejects DK Shivakumar and others pleas to quash ED summons

      ಆದರೆ ಸಮನ್ಸ್​ ಜಾರಿಯಲ್ಲಿರುವುದರಿಂದ ತನಿಖಾ ಸಂಸ್ಥೆ ವಿಚಾರಣೆಗಾಗಿ ಕರೆದರೆ, ವಿಚಾರಣೆ ಎದುರಿಸಿ, ತನಿಖೆಗೆ ಸಹಕರಿಸುವಂತೆ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ಹನುಮಂತಯ್ಯ ಅವರಿಗೆ ಸೂಚಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+