ಕನ್ನಡದ ಕಂದ ಶಾಲ್ಮಲಿಯ ಸಂಗೀತ ಪ್ರತಿಭೆಗೆ ಮನಸೋತ ಪ್ರಧಾನಿ ಮೋದಿ

ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ರಾಜಕೀಯ ನಾಯಕರು ಬಿಡುವಿಲ್ಲದೇ ಓಡಾಡುವ ಸಂದರ್ಭದಲ್ಲಿ ಕೂಡ ಇಲ್ಲೊಬ್ಬ ಪುಟ್ಟ ಬಾಲಕಿ ತನ್ನ ಸಂಗೀತ ಪ್ರತಿಭೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದಾಳೆ. ಮಾತ್ರವಲ್ಲದೆ, ತನ್ನ ಅಸಾಧಾರಣ ಪ್ರತಿಭೆಗೆ ಮೋದಿಯಿಂದ ಮೆಚ್ಚುಗೆ ಪಡೆದುಕೊಂಡು ಭಾರಿ ಸುದ್ದಿಯಾಗಿದ್ದಾಳೆ.

ಕರ್ನಾಟಕದ ಬಾಲಕಿ ಶಾಲ್ಮಲಿ ಎನ್ನುವ ಪುಟ್ಟ ಹುಡುಗಿ ಕೆಎಸ್ ನರಸಿಂಹ್ವಾಮಿಯವರ ಹಾಡಿಗೆ ಸಿಂಥನೈಸರ್ ನುಡಿಸುವ ವಿಡಿಯೋವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, "ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು!" ಎಂದು ಹೇಳಿದ್ದಾರೆ.

 PM Narendra Modi Praises Karntaka Young Girl For Her Exceptional Music Talent

ಅನಂತಕುಮಾರ್ ಎನ್ನುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, "ಇದನ್ನು ಸಾಕಷ್ಟು ಬಾರಿ ಕೇಳಿದ್ದೇನೆ, ಹುಟ್ಟಿನಿಂದಲೇ ಎಂತಹ ಪ್ರತಿಭೆ" ಎಂದು ಹೇಳಿದ್ದರು. ಅನಂತಕುಮಾರ್ ಟ್ವೀಟ್ ಅನ್ನು ಹಂಚಿಕೊಂಡು ಮೋದಿ ಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಪಲ್ಲವಗಳ ಪಲ್ಲವಿಯಲಿ ಎಂಬ ಕವಿತೆಯ ಸಾಲುಗಳೊಂದಿಗೆ ವಿಡಿಯೋ ಆರಂಭವಾಗುತ್ತದೆ. ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ಅದನ್ನು ಹಾಡಿದರೆ, ಶಾಲ್ಮಲಿ ಅದನ್ನು ಸಿಂಥನೈಸರ್ ನಲ್ಲಿ ನುಡಿಸುತ್ತಾಳೆ, ನಂತರ ಪುಟ್ಟ ಶಾಲ್ಮಲಿ ಕೂಡ ಅದಕ್ಕೆ ದನಿಗೂಡಿಸುತ್ತಾಳೆ. ಈ ವಿಡಿಯೋ ಈಗ ನೋಡುಗರ ಮನಗೆದ್ದಿದೆ.

ಪಲ್ಲವಗಳ ಪಲ್ಲವಿಯಲಿ ಕವಿತೆಯನ್ನು ಕನ್ನಡದ ಹೆಸರಾಂತ ಕವಿ ಕೆ ಎಸ್ ನರಸಿಂಹ ಸ್ವಾಮಿಯವರು ಬರೆದಿದ್ದಾರೆ. ಮೂಲತಃ ಹಾಡನ್ನು ಶ್ರೀಮತಿ ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು, "ನಿಮ್ಮಲ್ಲಿ ಹಲವರು ಈ ಕವಿತೆಯ ಸಾಹಿತ್ಯದ ಬಗ್ಗೆ ಕೇಳಿದ್ದೀರಿ. ಇದು ಕನ್ನಡದಲ್ಲಿದೆ. ಖ್ಯಾತ ಕವಿ ಕೆ.ಎಸ್. ನರಸಿಂಗಸ್ವಾಮಿಯವರು ಬರೆದಿದ್ದಾರೆ. ಗೂಗಲ್ ಅನುವಾದಕವನ್ನು ಬಳಸಿಕೊಂಡು, ಅರ್ಥ ತಿಳಿದುಕೊಳ್ಳಬಹುದು" ಎಂದು ಹೇಳಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರರು ಇದನ್ನು ಮೆಚ್ಚಿಕೊಂಡಿದ್ದು, "ಆ ಹುಡುಗಿ ತುಂಬಾ ಮುಗ್ದಳು ಅವಳ ತಾಯಿಯ ಧ್ವನಿಯೂ ಕೂಡ ಅಷ್ಟೇ ಮೋಡಿ ಮಾಡುತ್ತದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+