ಶಿರಸಿಯ ಕಾನಡೆಯವರ ಮಗಳ ಮದುವೆಗೆ ಮೋದಿ ಶುಭಾಶಯ

ಶಿರಸಿ, ಮೇ 22: ಪ್ರಧಾನಿ ಕಚೇರಿ ಎಂಬುದು ಇರುತ್ತದೆ ಎಂಬುದು ದೇಶದ ಜನರಿಗೆ ಗೊತ್ತಿತ್ತೇ ಹೊರತು ಅದು ತುಂಬ ಚಟುವಟಿಕೆಯಿದ ಸಾರ್ವಜನಿಕರ ಪತ್ರ, ಅಹವಾಲು ಹಾಗೂ ಆಹ್ವಾನಕ್ಕೆ ಈ ಪರಿಯಲ್ಲಿ ಸ್ಪಂದಿಸುತ್ತದೆ ಎಂಬುದು ಗೊತ್ತಿರಲಿಲ್ಲ. ಈಗ ನೋಡಿ ಮದುವೆ ಆಹ್ವಾನ ಪತ್ರಿಕೆ ಕಳುಹಿಸಿದರೂ ಅದಕ್ಕೆ ಪ್ರತಿಕ್ರಿಯೆ ಬರುತ್ತಿದೆ.

ಅಂದಹಾಗೆ ಆಗಿದ್ದೇನು ಗೊತ್ತಾ? ಶಿರಸಿಯ ಬಾಪೂಜಿನಗರದ ಶ್ಯಾಮಸುಂದರ ಕಾನಡೆ ಅವರು ತಮ್ಮ ಮಗಳ ಮದುವೆಗೆ ಆಹ್ವಾನ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಮೋದಿ ಶುಭ ಕೋರಿ ಪತ್ರ್ ಬರೆದಿದ್ದಾರೆ. ಕಾನಡೆ ಅವರ ಮಗಳ ಮದುವೆಯು ಅಂಕೋಲಾದ ಸತೀಶ್ ಎಂಬುವವರ ಜತೆಗೆ ಮೇ ಎಂಟರಂದು ಶಿರಸಿಯಲ್ಲಿ ನಿಗದಿಯಾಗಿತ್ತು.[ಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವು]

PM Modi wishes Sirsi Kanade's daughter on her wedding

ಆ ಮದುವೆಗೆ ಪ್ರಧಾನಿಗೆ ಆಹ್ವಾನ ನೀಡಿದ್ದರು ಕಾನಡೆ. ಈ ಪ್ರೀತಿಯನ್ನು ಗುರುತಿಸಿ, ಪ್ರಧಾನಿ ಕಚೇರಿಯಿಂದ ಮೋದಿ ಅವರ ಸಹಿ ಒಳಗೊಂಡ ಶುಭಾಶಯ ಪತ್ರ ರವಾನೆಯಾಗಿದೆ. ಇದರಿಂದ ಬಹಳ ಸಂತೋಷಗೊಂಡಿರುವ ಕಾನಡೆ ಅವರು, ನವವಿವಾಹಿತರಿಗೆ ಸ್ವತಃ ಪ್ರಧಾನಿ ಶುಭ ಕೋರಿರುವುದು ಸಂತಸದ ಸಂಗತಿ ಎಂದಿದ್ದಾರೆ.

ನಮ್ಮಂತಹ ಜನ ಸಾಮಾನ್ಯರಿಗೂ ಈ ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಸ್ಪಂದಿಸುತ್ತಾರೆ ಎಂಬುದು ಅಚ್ಚರಿಗೆ ಕಾರಣವಾಗಿದೆ ಎಂದಿದ್ದಾರೆ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+