ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಬಿಎಸ್ವೈ ಭಿನ್ನಾಭಿಪ್ರಾಯದ ಬಗ್ಗೆ ಹೊಸ ಹುಳ ಬಿಟ್ಟ ಕುಮಾರಸ್ವಾಮಿ

|
Google Oneindia Kannada News

Recommended Video

ಮೋದಿಗೆ ಯಡಿಯೂರಪ್ಪನ ಕಂಡ್ರೆ ಆಗಲ್ಲ..? | HD kumarawamy | Oneindia Kannada

ಮೈಸೂರು, ಅ 4: "ನನ್ನ ಅವಧಿಯಲ್ಲಿ ಸರಿಯಾಗಿಯೇ ಸ್ಪಂದಿಸುತ್ತಿದ್ದ ಪ್ರಧಾನಮಂತ್ರಿಗಳು, ಅವರದ್ದೇ ಮುಖ್ಯಮಂತ್ರಿಗಳು ಇರುವಾಗ, ಈಗ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ" ಎನ್ನುವ ಹೊಸ ಪ್ರಶ್ನೆಯನ್ನು ಕುಮಾರಸ್ವಾಮಿ ಹೊರಗೆಡವಿದ್ದಾರೆ.

"ನೆರೆ ಪರಿಹಾರ ವಿಳಂಬದ ವಿಚಾರದಲ್ಲಿ ಒಂದಂತೂ ನನಗೆ ತೋಚಿದ್ದು ಏನೆಂದರೆ, ಯಡಿಯೂರಪ್ಪ ಮತ್ತು ಮೋದಿ ನಡುವೆ ಭಿನ್ನಾಭಿಪ್ರಾಯವಿದೆ" ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಬಳಿ ಹಣವಿಲ್ಲ: ಕೈಚೆಲ್ಲಿದ ಯಡಿಯೂರಪ್ಪಸರ್ಕಾರದ ಬಳಿ ಹಣವಿಲ್ಲ: ಕೈಚೆಲ್ಲಿದ ಯಡಿಯೂರಪ್ಪ

ಸಿಎಂ ಪುತ್ರ ವಿಜಯೇಂದ್ರ, ಕಳೆದ ಸರಕಾರ ಬೊಕ್ಕಸ ಖಾಲಿ ಮಾಡಿ ಹೋಗಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಸರಕಾರದ ಬೊಕ್ಕಸ ಖಾಲಿಯಾಗಿಲ್ಲ, ಬಹುಷಃ ಯಡಿಯೂರಪ್ಪನವರ ಪುತ್ರನ ಬೊಕ್ಕಸ ಖಾಲಿಯಾಗಿರಬಹುದು" ಎಂದು ಲೇವಡಿ ಮಾಡಿದರು.

PM Modi Was Responding Properly To Me, Why Not To Yediyurappa? HD kumarawamy Questions

ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ದ ಏಕವಚನದಲ್ಲಿ ಹರಿಹಾಯ್ಡ ಕುಮಾರಸ್ವಾಮಿ, "ನಿನ್ನೆ ಮೊನ್ನೆ ಬಂದವನಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಏನಿದೆ" ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, "ಖಾಲಿಯಾಗಿರುವುದು ಸರಕಾರದ ಬೊಕ್ಕಸನಾ ಅಥವಾ ಅವನ ಕುಟುಂಬದ ಬೊಕ್ಕಸನಾ" ಎಂದು ಕೆಂಡಕಾರಿದ್ದಾರೆ.

'ಸರ್ಕಾರದ ಬಳಿ ಹಣ ಎಲ್ಲಿದೆ, ರಾಜ್ಯ ಬೊಕ್ಕಸ ಖಾಲಿಯಾಗಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಇದನ್ನೇ ಬಿಎಸ್ವೈ ಪುತ್ರ ವಿಜಯೇಂದ್ರ ಪುನರುಚ್ಚಿಸಿದ್ದರು.

ಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರ

ರಾಜ್ಯ ಬೊಕ್ಕಸ ಖಾಲಿ ಆಗಿದೆ ಎಂದ ಯಡಿಯೂರಪ್ಪ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, 'ಬೊಕ್ಕಸ ಖಾಲಿ ಆಗಿದೆ ಎಂದು ಘೋಷಿಸಿದ ನಂತರ ಯಡಿಯೂರಪ್ಪ ಅವರು ಒಂದು ಕ್ಷಣವೂ ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು' ಎಂದು ಹಠ ತೊಟ್ಟಿವೆ.

English summary
Prime Minister Narendra Modi Was Responding Properly To Me, Why Not To CM Yediyurappa? Former HD kumarawamy Questions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X