PM Modi in Dharwad Live: ಅವಳಿ ನಗರದಲ್ಲಿ ಮೋದಿ ಹವಾ, ಧಾರವಾಡ ಪೇಡಾವನ್ನು ಹೊಗಳಿದ ಮೋದಿ
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತದಾರರ ಮನಗೆಲ್ಲಲು ರಾಜ್ಯ ಭೇಟಿ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಇಂದು (ಮಾರ್ಚ್ 12) ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ ಅವರು ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಭೇಟಿ ನೀಡಲಿದ್ದಾರೆ.
ಮುಖ್ಯವಾಗಿ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಉದ್ಘಾಟನೆ ಸೇರಿದಂತೆ ಸುಮಾರು 16,000 ಕೋಟಿ ರೂ. ಮೌಲ್ಯದ ಯೋಜನೆಗಳ ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರು-ಕುಶಾಲನಗರ 4 ಲೇನ್ ಹೆದ್ದಾರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲಿದ್ದು ಮೋದಿ ಆಗಮನದ ಹಿನ್ನಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಕೇಸರಿಮಯವಾಗಿದೆ.

ಮಂಡ್ಯ ಭೇಟಿ ನಂತರ ಧಾರವಾಡಕ್ಕೆ ತೆರಳಲಿರುವ ಪ್ರಧಾನಿಮೋದಿ ಅವರು, 5 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:15ರ ಸುಮಾರಿಗೆ ಧಾರವಾಡದಲ್ಲಿ ಐಐಟಿ ಕಟ್ಟಡ, ಜಲಜೀವನ ಯೋಜನೆ, ಜಯದೇವ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬೆಣ್ಣೆನಗರಿಯಲ್ಲಿ ಮೋದಿ ಮೇನಿಯಾ
ಮೋದಿ ನೋಡಲು ನೆರೆದ ಜನಸಾಗರ
ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರ ಆಗಮನಕ್ಕೆ ಕ್ಷಣಗಣನೆ...
— BJP Karnataka (@BJP4Karnataka) March 25, 2023
ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ದಾವಣಗೆರೆಯಲ್ಲಿ ನೆರೆದ ಜನಸಾಗರ. #ModiInMahaSangama #VijayaSankalpaYatre #BJPYeBharavase pic.twitter.com/yqnxLaPE98
ವಿಜಯ ಸಂಕಲ್ಪ ಯಾತ್ರೆ ಮಹಾಸಂಗಾಮ
'ನಾವು ಮಹತ್ತರವಾದುದನ್ನು ಸಾಧಿಸಿ ತೋರಿಸಬಲ್ಲೆವು' ಮೋದಿ
ಡಬಲ್ ಎಂಜಿನ್ ಸರ್ಕಾರವನ್ನು ಹೊಗಳಿದ ಮೋದಿ
ಕರ್ನಾಟಕದ ಪ್ರಗತಿಗೆ ದೊಡ್ಡ ಕಾಣಿಕೆ ಬಿಜೆಪಿ ನೀಡಿದೆ- ಮೋದಿ
'ಧಾರವಾಡ ಬಯಲು ಸೀಮೆ ಮಲೆನಾಡಿನ ಗೇಟ್ ವೇಯಂತಿದೆ'
'ಕನ್ನಡನಾಡಿನ ಸ್ನೇಹದ ಋಣ ನನ್ನ ಮೇಲಿದೆ'
'ಅಂದು ನಾನೇ ಐಐಟಿ ಅಡಿಗಲ್ಲು ಹಾಕಿದ್ದೆ' ಮೋದಿ
ಧಾರವಾಡ ಪೇಡಾವನ್ನು ಹೊಗಳಿದ ಮೋದಿ
ವಿದ್ಯಾಕಾಶಿ ಧಾರವಾಡದಲ್ಲಿ ವಿಶ್ವದರ್ಜೆಯ IIT ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಶ್ರೀ @narendramodi ಅವರಿಗೆ ಸಿದ್ದಾರೂಢ ಸ್ವಾಮೀಜಿಯ ಮೂರ್ತಿ, ಕಲಘಟಗಿ ತೊಟ್ಟಿಲು ಧಾರವಾಡ ಪೇಡಾವನ್ನು ಉಡುಗೊರೆ ನೀಡಿ ಹಾವೇರಿಯ ಏಲಕ್ಕಿ ಮಾಲೆ ಹಾಕಿ ಸನ್ಮಾನಿಸಲಾಯಿತು. #BJPYeBharavase pic.twitter.com/gjbmIvr2AS
— BJP Karnataka (@BJP4Karnataka) March 12, 2023
ಧಾರವಾಡ: ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ
ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಧಾರವಾಡದಲ್ಲಿ ಕಸೂತಿ ಶಾಲು, ಏಲಕ್ಕಿ ಹಾರ, ಏಲಕ್ಕಿ ಪೇಟ ನೀಡಿ ಮೋದಿಗೆ ಸನ್ಮಾನ
ದಣಿವರಿಯದ ಜಗ ಮೆಚ್ಚಿದ ಪ್ರಧಾನಿ ಶ್ರೀ @narendramodi ಅವರು ಧಾರವಾಡದಲ್ಲಿ ಪರಿಸರಸ್ನೇಹಿ IIT ಕ್ಯಾಂಪಸ್ ಉದ್ಘಾಟನೆ ಮಾಡಿದರು. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಿಸಲಾಗಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಪ್ರಧಾನಿ ಶ್ರೀ ನರೇಂದ್ರ ಮೋದಿ. #BJPYeBharavase pic.twitter.com/LskDATVp58
— BJP Karnataka (@BJP4Karnataka) March 12, 2023
'ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ಮೋದಿ' ಕಾಂಗ್ರೆಸ್
ನೆರೆ ಬಂದಾಗ ಬರಲಿಲ್ಲ,
— Karnataka Congress (@INCKarnataka) March 12, 2023
ಬರ ಬಂದಾಗ ಬರಲಿಲ್ಲ,
ಕರ್ನಾಟಕಕ್ಕೆ
ಆಕ್ಸಿಜನ್ ಕೊಡಲಿಲ್ಲ,
ವ್ಯಾಕ್ಸಿನ್ ನೀಡಲಿಲ್ಲ,
GST ಪಾಲು ಸಿಗಲಿಲ್ಲ.@BSYBJP ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ.
ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ @narendramodi ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ.#ModiMosa pic.twitter.com/hpfmtvejNv
ಧಾರವಾಡದ ಐಐಟಿಯ ಕ್ಯಾಂಪಸ್ ಉದ್ಘಾಟಿಸಿದ ಮೋದಿ
'ಭ್ರಷ್ಟರಿಗೆ ತ್ವರಿತಗತಿಯಲ್ಲಿ ಜಾಮೀನು ಕೊಡಿಸಿದ ಬಿಜೆಪಿ'
ಮಹಿಳೆಯರು ಮತ್ತು ಮಕ್ಕಳ ಅಪರಾಧ ಪ್ರಕರಣಗಳ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯ ಸ್ಥಾಪಿಸುತ್ತೇವೆ ಎಂದಿತ್ತು @BJP4Karnataka.
— Karnataka Congress (@INCKarnataka) March 12, 2023
ಆದರೆ ಮಾಡಿದ್ದೇನು?
ಭ್ರಷ್ಟರಿಗೆ ತ್ವರಿತಗತಿಯಲ್ಲಿ ಜಾಮೀನು ಸಿಗುವ ವ್ಯವಸ್ಥೆ!
ಬಿಜೆಪಿ ಶಾಸಕರು, ಸರ್ಕಾರದ ಸಚಿವರೇ ಮಹಿಳಾ ಪೀಡಕರಾಗಿರುವಾಗ ಮಕ್ಕಳು ಮಹಿಳೆಯರಿಗೆ ನ್ಯಾಯ ಸಿಗುವುದೇ.#nimhatraidyauttara pic.twitter.com/JMpZ175lEO
'ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ ತುಂಬಾ ಅಚ್ಚುಮೆಚ್ಚು' ಕಾಂಗ್ರೆಸ್ ಟ್ವೀಟ್
ಮೋದಿಯವರೆಂದರೆ
— Karnataka Congress (@INCKarnataka) March 12, 2023
ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು!#BJPRowdyMorcha ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ!@narendramodi ಅವರೇ, @BJP4Karnataka ಪಕ್ಷದ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗ
ಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ?#ModiMosa pic.twitter.com/lpEusvuAQT
ಧಾರವಾಡ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಭಾಗಿ
'ಐಐಟಿ ನಮ್ಮ ಕನಸಿನ ಕೂಸು' ಬಿಜೆಪಿ- ಕಾಂಗ್ರೆಸ್ ಕಾದಾಟ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ
400 ಬಾಣಸಿಗರಿಂದ ಊಟದ ವ್ಯವಸ್ಥೆ
ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯದಲ್ಲಿ ಬೃಹತ್ ಗಾತ್ರದ ರಂಗೋಲಿ
ಧಾರವಾಡ ಐಐಟಿ ಬಗ್ಗೆ-
ಹುಬ್ಬಳ್ಳಿಯತ್ತ ನರೇಂದ್ರ ಮೋದಿ
ಕೆಲವೇ ಕ್ಷಣಗಳಲ್ಲಿ ಧಾರವಾಡದ ಐಐಟಿ ಉದ್ಘಾಟನೆ
ಹುಬ್ಬಳ್ಳಿಯಲ್ಲಿಂದು ಹೈಟೆಕ್ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ
ಮೋದಿ ಟೀ ಶರ್ಟ್ ತೆಗೆದುಕೊಳ್ಳಲು ಮುಗಿಬಿದ್ದ ಜನ
ಮಂಡ್ಯ ಬಳಿಕ ಧಾರವಾಡದತ್ತ ಮೋದಿ ಪ್ರಯಾಣ
ಇದು ಸ್ಥಳೀಯ ಜನರ ಬದುಕು ಕಸಿಯುವ ಹೆಮ್ಮಾರಿ- ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ!
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 12, 2023
ಕರ್ನಾಟಕ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ!!
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ.
ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು.15/15
'ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ' ಎಚ್ಡಿಕೆ
ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಮಾನ್ಯ ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದನ್ನು. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎನ್ನುವುದು ನನ್ನ ಕಳಕಳಿ.13/15
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 12, 2023












Click it and Unblock the Notifications