ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM Modi in Kalaburagi Live: ಕಲಬುರಗಿ, ಯಾದಗಿರಿ ಜಿಲ್ಲೆಗೆ ಆಗಮಿಸಿದ ಪ್ರಧಾನಿ ಮೋದಿ!

|
Google Oneindia Kannada News

ಕಲಬುರಗಿ ಜನವರಿ 19: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಗೆ ಇಂದು (ಜನವರಿ 19) ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲ್ಬುರ್ಗಿಯಲ್ಲಿ ಮೋದಿ ಹವಾ ಶುರುವಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಇಂದು ಬೃಹತ್‌ ಸಮಾವೇಶ ಆಯೋಜಿಸಲಾಗಿದ್ದು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿ ಹಕ್ಕುಪತ್ರ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುಮಾರು 50 ಸಾವಿರ ಕುಟುಂಬಗಳಿಗೆ ಭೂಮಿಯ ಹಕ್ಕು ಪತ್ರ ನೀಡಲಿದ್ದಾರೆ.

ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು. ಅಲ್ಲಿಂದ ಯಾದಗಿರಿ ಜಿಲ್ಲೆ ಹುಣಸಗಿ ತಲೂಕು ಕೊಡೆಕಲ್‌ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ. ಬೆಳಗ್ಗೆ 12ಕ್ಕೆ ಪ್ರಧಾನಿ ಮೋದಿ ಅವರು ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧೂನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ.

PM Modi Kalaburagi Visit

ಬಳಿಕ 1 ಗಂಟೆಗೆ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸರತ್‌ ಚೆನ್ನೈ ಎಕ್ಸ್‌ಪ್ರೆಸ್‌ ವೇ ಪ್ಯಾಕೇಜ್‌ 3ನೇ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಅಲ್ಲಿಂದ 1.10ಕ್ಕೆ ಕೊಡೆಕಲ್‌ ಹೆಲಿಪ್ಯಾಡ್‌ಗೆ ರಸ್ತೆ ಮೂಲಕ ಹೊರಟು ಹೆಲಿಪ್ಯಾಡ್‌ ಮೂಲಕ ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕು ಮಳಖೇಡ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಸಾಗಿ ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳ ಶಿಲನ್ಯಾಸ ಮಾಡಲಿದ್ದಾರೆ.

Newest FirstOldest First
3:22 PM, 19 Jan

ಹೊಸ ಇತಿಹಾಸ ನಿರ್ಮಿಸಿದ ಮಳಖೇಡದ ಹಕ್ಕು ಪತ್ರ ವಿತರಣೆ.
3:22 PM, 19 Jan

ಕಾರ್ಯಕ್ರಮದ ಸ್ಥಳದಿಂದ ಹೆಲಿಪ್ಯಾಡ್‌ಗೆ ತೆರಳಿದ ಮೋದಿ. ಅಲ್ಲಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಐಎಎಫ್ ವಿಮಾನದ ಮೂಲಕ ಪ್ರಧಾನಿ ಮುಂಬೈಗೆ ತಲುಪಲಿದ್ದಾರೆ.
3:21 PM, 19 Jan

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಸಮಾವೇಶ ಮುಗಿಸಿ ತೆರಳಿದ ಪ್ರಧಾನಿ ನರೇಂದ್ರ ಮೋದಿ.
3:18 PM, 19 Jan

ಡಬಲ್ ಎಂಜಿನ್ ಸರ್ಕಾರ ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದೆ. ದೇಶದ ಎಷ್ಟೋ ಜನರಿಗೆ ಬ್ಯಾಂಕ್ ವಹೀವಾಟಿನ ಬಗ್ಗೆ ಗೊತ್ತೇ ಇರಲಿಲ್ಲ. ನಮ್ಮ ಸರ್ಕಾರ ಎಲ್ಲರಿಗೂ ಬ್ಯಾಂಕ್ ಖಾತೆ ತೆರೆದು ಹಣ ಹಾಕಿದೆ. ಗ್ರಾಮೀಣ ಭಾಗದ ಜನರಿಗಾಗಿ ಮುದ್ರಾ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಪ್ರಧಾನಿ ತಿಳಿಸಿದರು.
3:16 PM, 19 Jan

ಮುದ್ರಾ ಯೋಜನೆಯಿಂದ ಕರ್ನಾಟಕದ ಎಸ್‌ಸಿ, ಎಸ್‌ಟಿ ಸಮುದಾಯಕ್ಕೂ ಅನುಕೂಲ- ಪ್ರಧಾನಿ ಮೋದಿ.
3:15 PM, 19 Jan

ಪಿಎಂ ಆವಾಸ್ ಯೋಜನೆಯಡಿ ಎಲ್ಲ ಸೌಕರ್ಯಗಳು ಸಿಗುತ್ತಿವೆ. ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಇದ್ದವು. ಆ ಸರ್ಕಾರದಿಂದ ವಂಚಿತರಾದವರಿಗೆ ಬಿಜೆಪಿಯಿಂದ ಈಗ ಎಲ್ಲ ಸೌಲಭ್ಯ ಸಿಗುತ್ತಿವೆ- ಮೋದಿ.
3:13 PM, 19 Jan

'ಪಿಎಂ ಆವಾಸ್' ಯೋಜನೆಯಿಂದ ಲಕ್ಷಾಂತರ ಜನರಿಗೆ ಪ್ರಯೋಜನ. ನೀರು, ಗ್ಯಾಸ್, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿದೆ. 'ಜನ್‌ಧನ್‌ ಯೋಜನೆ'ಯಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಸಮಾಜದ ಪ್ರತಿ ವರ್ಗದವರಿಗೂ ಅನುಕೂಲ. ಹಲವು ವರ್ಷಗಳಿಂದ ಬದಲಾವಣೆ ಪರ್ವ- ಪ್ರಧನಿ ನರೇಂದ್ರ ಮೋದಿ.
Advertisement
3:08 PM, 19 Jan

ಬಂಜಾರ ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿವೆ. ಡಬಲ್ ಎಂಜಿನ್ ಸರ್ಕಾರದಿಂದ ಎಲ್ಲ ಸಮುದಾಯಗಳು ಅಭಿವೃದ್ಧಿ. ವಿಪಕ್ಷಗಳು ಎಂದೂ ಹಕ್ಕುಪತ್ರ ನೀಡುವ ಬಗ್ಗೆ ಯೋಚನೆ ಮಾಡಿರಲಿಲ್ಲ. ಡಬಲ್ ಎಂಜಿನ್ ಸರ್ಕಾರದಿಂದ ಹೊಸ ಬದಲಾವಣೆ ಆಗುತ್ತಿದೆ ಎಂದು ಮೋದಿ ವಿವರಿಸಿದರು.
3:06 PM, 19 Jan

ಬಂಜಾರ ತಾಯಿಯ ಆಶೀರ್ವಾದ ಸಿಕ್ಕಿದೆ: ಮೋದಿ

ರಾಷ್ಟ್ರ ನಿರ್ಮಾಣದಲ್ಲಿ ಬಂಜಾರ ಸಮುದಾಯದ ಕೊಡುಗೆ ನೀಡುತ್ತಿದೆ. 1994 ಚುನಾವಣೆ ಸಮಯದಲ್ಲಿ ನಾನು ಈ ಭಾಗಕ್ಕೆ ಬಂದಿದ್ದೆ. 1993ರಲ್ಲಿ ಇಂದಿನ ಯೋಜನೆಗೆ ಶಿಫಾರಸು ಮಾಡಿದ್ದೆ. ಬಸವಣ್ಣನವರ ಆಶಯದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಮಾಡುತ್ತಿದ್ದೇವೆ. ವೇದಿಕೆಯಲ್ಲಿ ಬಂಜಾರ ಸಮುದಾಯದ ತಾಯಿಯು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.
3:02 PM, 19 Jan

ಸಬ್‌ ಕಾ..ಸಾತ್, ಸಬ್‌ ಕಾ... ವಿಕಾಸ್, ಸಬ್‌ ಕಾ... ಪ್ರಯಾಸ್. ಬಂಜಾರ ಸಮುದಾಯದ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಬಂಜಾರ ಸಮುದಾಯದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ಬಿಜೆಪಿ ನೀಡಿದೆ ಎಂದು ಮೋದಿ ತಿಳಿಸಿದರು.
3:01 PM, 19 Jan

ಬಿಜೆಪಿ ಸರ್ಕಾರದಿಂದ ಬಂಜಾರ ಸಮುದಾಯ ಸಂತೋಷವಾಗಿದೆ. ಶರಣ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ಮಾಡಿದ್ದರು- ಪ್ರಧಾನಿ ಹೇಳಿಕೆ.
2:58 PM, 19 Jan

ಹಕ್ಕುಪತ್ರ ವಿತರಣೆಯಿಂದ ಬಂಜಾರ ಸಮಾಜದ ಅಭಿವೃದ್ಧಿಯಾಗುತ್ತದೆ. ಬರೋಬ್ಬರಿ 50 ವರ್ಷದ ಬಳಿಕ ಬಂಜಾರ ಸಮುದಾಯದಲ್ಲಿ ಭಾರಿ ಬದಲಾವಣೆ- ಪ್ರಧಾನಿ ಮೋದಿ.
Advertisement
2:56 PM, 19 Jan

ಕರ್ನಾಟಕ ಸರ್ಕಾರದಿಂದ ಸಮಾಜಿಕ ನ್ಯಾಯ ದೊರೆತಿದೆ. 51 ಸಾವಿರ ಜನರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ- ಪ್ರಧಾನಿ ಹೇಳಿಕೆ.
2:53 PM, 19 Jan

ಕಲಬುರಗಿಯ ಶ್ರೀ ಶರಣ ಸವೇಶ್ವರ, ಗಾಣಗಾಪುರದ ಗುರು ದತ್ತಾತ್ರೇಯ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ. ಕರುನಾಡಿನ ಜನತೆಗೆ ಕನ್ನಡದಲ್ಲೇ ನಮಸ್ಕಾರ ತಿಳಿಸಿದ ಪ್ರಧಾನಿ.
2:51 PM, 19 Jan

ಹಕ್ಕು ಪತ್ರ ವಿತರಣೆ ಸಮಾವೇಶದಲ್ಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ. ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ.
2:48 PM, 19 Jan

ಸಾಂಕೇತಿಕವಾಗಿ ತಾಂಡಾ ನಿವಾಸಿಗಳ ಪೈಕಿ ಐದು ಮಂದಿ ಕಂದಾಯ ಹಕ್ಕು ಪತ್ರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ.
2:43 PM, 19 Jan

ನಗಾರಿ ಭಾರಿಸುವ ಮೂಲಕ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ.
2:43 PM, 19 Jan

ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿಕೆ.
2:41 PM, 19 Jan

ಇವತ್ತು ಕಂದಾಯ ಕ್ರಾಂತಿ ಆಗುತ್ತಿದೆ. ಡಿಜಿಟಲ್ ಕ್ರಾಂತಿಯಿಂದ ಎಲ್ಲವೂ ಸುಲಭವಾಗಿ ಸಿಗುತ್ತಿದೆ- ಸಿಎಂ ಬೊಮ್ಮಾಯಿ.
2:40 PM, 19 Jan

ಡಬಲ್ ಎಂಜಿನ್ ಸರ್ಕಾರ ಸಾಮಾಜಿಕ ನ್ಯಾಯ ಕೊಡುತ್ತಿದೆ. ಸಾಮಾಜಿಕ ಪರಿವರ್ತನೆ ಆಗುತ್ತಿದೆ. ಸಾಮಾಜಿಕ ಪರಿವರ್ತನೆಯ ಹರಿಕಾರ ಪ್ರಧಾನಿ ಮೋದಿಯವರು ಎಂದು ಹಾಡಿ ಹೊಗಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
2:38 PM, 19 Jan

ಅವಿಸ್ಮರಣೀಯ ದಿನ: ಸಿಎಂ

ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತು ಆರಂಭ. ಇಂದು ಕರ್ನಾಟಕದ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆ ಆಗುತ್ತಿದೆ. ಇಂದು ಅತ್ಯಂತ ಸ್ಮರಣೀಯ ದಿನ. ಗೊಲ್ಲರಹಟ್ಟಿ ತಾಂಡಾಗಳು ಕಂದಾಯ ಗ್ರಾಮಗಳು ಆಗಿರಲಿಲ್ಲ. ಬಹು ವರ್ಷಗಳ ಬೇಡಿಕೆ ಈಗ ಈಡೇರುತ್ತಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು.
2:32 PM, 19 Jan

ಆರ್‌.ಅಶೋಕ್ ಭಾಷಣ

ಸಮಾವೇಶದಲ್ಲಿ ಕಂದಾಯ ಸಚಿವ ಆರ್‌.ಅಶೋಕ್ ಭಾಷಣ ಆರಂಭ. ಇಲ್ಲಿ ಅಲೆಮಾರಿಗಳಾಗಿದ್ದ ಲಂಬಾಣಿಗರಿಗೆ ಶಾಶ್ವತ ನೆಲೆ ಒದಗಿಸಲಾಗುತ್ತಿದೆ. ದಾಖಲೆಗಳಲ್ಲಿ ಲಂಬಾಣಿಗಳ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
2:30 PM, 19 Jan

ಸನ್ಮಾದ ಬಳಿಕ ಮೋದಿಗೆ ಅನುಭವ ಮಂಟಪದ ವರ್ಣ ಚಿತ್ರ ಗಿಫ್ಟ್.‌
2:29 PM, 19 Jan

ವೇದಿಕೆಯಲ್ಲಿ ಗೋರ್ ಬಂಜಾರ ಶಾಲು ಹೊದಿಸಿ ಪ್ರಧಾನಮಂತ್ರಿಗಳಿಗೆ ಸನ್ಮಾನಿಸಿದ ಗಣ್ಯರು.
2:27 PM, 19 Jan

ಮಳಖೇಡ ಗ್ರಾಮದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಸಚಿವ ಭಗವಂತ್ ಕೂಬಾ, ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಉಮೇಶ್ ಜಾಧವ್, ಸಚಿವರಾದ ಆರ್‌.ಅಶೋಕ್, ಶಾಸಕ ಪಿ.ರಾಜೀವ್ ಸೇರಿದಂತೆ ಇನ್ನಿತರ ಗಣ್ಯರು ಭಾಗಿ.
2:19 PM, 19 Jan

ಮಳಖೇಡ ಹೆಲಿಪ್ಯಾಡ್ ನಿಂದ ಸಮಾವೇಶ ಸ್ಥಳದತ್ತ ಪ್ರಧಾನಿ ಮೋದಿ ಆಗಮನ. ಕಾರ್ಯಕ್ರಮ ಸ್ಥಳದಲ್ಲಿ ತುಂಬಿ ತುಳುಕುತ್ತಿರುವ ಜನಸ್ಥೋಮ. ಪ್ರಧಾನಿ ಕಣ್ತುಂಬಿಕೊಂಡು ಹಕ್ಕು ಪತ್ರ ಪಡೆಯಲು ಕಾತರರಾಗಿರುವ ಲಂಬಾಣಿ ಜನರು.
2:07 PM, 19 Jan

ಕೊಡೆಕಲ್‌ನಿಂದ ಹೆಲಿಕಾಪ್ಟರ್ ಮೂಲಕ ಮಳಖೇಡ ಗ್ರಾಮದ ಹೆಲಿಪ್ಯಾಡ್‌ಗೆ ಆಗಮಿಸಿದ ಮೋದಿ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಬೃಹತ್ ಕಾರ್ಯಕ್ರಮ ಜರುಗಲಿದೆ.
2:02 PM, 19 Jan

ಕಲಬುರಗಿಯಲ್ಲಿ ಪ್ರಧಾನಿ ಪಾಲ್ಗೊಳ್ಳುವ ಕಾರ್ಯಕ್ರಮದತ್ತ ಧಾವಿಸುತ್ತಿರುವ ಜನರ ಗುಂಪು. ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಕಾರ್ಯಕ್ರಮದ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳ ಹಿಡಿಸದಷ್ಟು ರೀತಿಯಲ್ಲಿ ನಾಗರಿಕರ ಸಂಚಾರ.
1:57 PM, 19 Jan

ಯಾದಗಿರಿ ಜಿಲ್ಲೆಯಿಂದ ಸೇಡಂ ಪಟ್ಟಣದತ್ತ ಪ್ರಧಾನಿ ಮೋದಿ ಪ್ರಯಾಣ.
1:56 PM, 19 Jan

ಸೇಡಂ ತಾಲೂಕಿನ ಮಳಖೇಡದಲ್ಲಿ ಬೃಹತ್ ಸಮಾವೇಶ ಆಯೋಜನೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಭಾಗಿ. ಮೋದಿ ನೋಡಲು ಕಾರ್ಯಕ್ರಮದತ್ತ ಆಗಮಿಸುತ್ತಿರುವ ಜನಸಾಗರ.
READ MORE

English summary
PM Modi Kalaburagi Visit Live Updates : PM Narendra Modi will visit Yadgir and Kalaburagi districts on January 19 to participate in various programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X