• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

PM Modi Bengaluru Visit; ಬೆಂಗಳೂರು ಸ್ಟಾರ್ಟ್‌ಅಪ್‌ಗಳ ನಗರ; ಮೋದಿ

|
Google Oneindia Kannada News

ಬೆಂಗಳೂರು, ನವೆಂಬರ್ 11; ಭಾರತದ ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಕರ್ನಾಟಕ ಭೇಟಿ ಪೂರ್ಣಗೊಂಡಿದೆ. ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಮೋದಿ ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಪ್ರಹ್ಲಾದ್ ಜೋಶಿ ಮೋದಿ ಸ್ವಾಗತಿಸಿದರು.

'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಬುಕ್ಕಿಂಗ್ ಆರಂಭ, ದರ'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಬುಕ್ಕಿಂಗ್ ಆರಂಭ, ದರ

PM Modi Bengaluru Visit Live Updates: PM to unveil Kempegowda 108 ft statue, open KIA Terminal 2

ನರೇಂದ್ರ ಮೋದಿ ಬೆಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದರು. ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳುವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳು

ವಂದೇ ಭಾರತ್ ಎಕ್ಸ್‌ಪ್ರೆಸ್, ಕರ್ನಾಟಕ ಭಾರತ್‌ ಕಾಶಿ ದರ್ಶನ ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮಾಡಿದರು. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟಿಸಿದರು. ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಭೇಟಿಯ ಫೋಟೋ, ವಿಡಿಯೋ, ವರದಿಗಳು ಇಲ್ಲಿವೆ....

108-ft Kempegowda statue : 108 ಅಡಿ ಕೆಂಪೇಗೌಡ ಪ್ರತಿಮೆ ವಿಶೇಷತೆಗಳು 108-ft Kempegowda statue : 108 ಅಡಿ ಕೆಂಪೇಗೌಡ ಪ್ರತಿಮೆ ವಿಶೇಷತೆಗಳು

ನರೇಂದ್ರ ಮೋದಿ
Know all about
ನರೇಂದ್ರ ಮೋದಿ

Newest First Oldest First
1:59 PM, 11 Nov
ಬೆಂಗಳೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಧುರೈಗೆ ತೆರಳಿದರು.
1:34 PM, 11 Nov
ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಪೂರ್ಣಗೊಳಿಸಿದರು.
1:26 PM, 11 Nov
ಕರ್ನಾಟಕದಿಂದ ಕಾಶಿ, ಅಯೋಧ್ಯೆ, ಪ್ರಯಾಗ್‌ರಾಜ್‌ಗೆ ಯಾತ್ರೆ ಮಾಡಬಹುದಾಗಿದೆ. ಈ ರೈಲಿನಿಂದ ಧಾರ್ಮಿಕ ಕ್ಷೇತ್ರಗಳಿಗೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ ಎಂದು ಮೋದಿ ಹೇಳಿದರು.
1:22 PM, 11 Nov
ಬೆಂಗಳೂರಿನಲ್ಲಿ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ.
1:19 PM, 11 Nov
5ಜಿ ಟೆಕ್ನಾಲಜಿ, ಡಿಜಿಟಲ್ ಪೇಮೆಂಟ್ ಜಾರಿಗೆ ಬರುವಲ್ಲಿ ಬೆಂಗಳೂರಿನ ಯುವಕರ ಶ್ರಮ ಹೆಚ್ಚಿದೆ ಎಂದು ಮೋದಿ ಬಣ್ಣಿಸಿದರು.
1:17 PM, 11 Nov
ಕರ್ನಾಟಕ ಡಬಲ್ ಎಂಜಿನ್ ತಾಕತ್‌ನಿಂದ ಚಲಿಸುತ್ತಿದೆ. ಆದ್ದರಿಂದ ಅಭಿವೃದ್ಧಿಗೆ ಸಹ ವೇಗ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
1:16 PM, 11 Nov
ಎಫ್‌ಡಿಐ ಆಕರ್ಷಣೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಆದರೆ ಈ ಬಂಡವಾಳ ಹೂಡಿಕೆ ಕೇವಲ ಐಟಿ ವಲಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ವಲಯಗಳಿಗೂ ಸಹ ಬಂಡವಾಳ ಹರಿದು ಬರುತ್ತಿದೆ. ದೇಶದ ಸೇನೆಗೆ ವಿಮಾನ, ಹೆಲಿಕಾಪ್ಟರ್ ತಯಾರಿಕೆಯಲ್ಲಿ ಕರ್ನಾಟಕ ಮುಂದಿದೆ ಎಂದು ಮೋದಿ ಬಣ್ಣಿಸಿದರು.
1:15 PM, 11 Nov
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆದ್ದರಿಂದ ನಮ್ಮ ಸರ್ಕಾರ ಹೊಸ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
1:13 PM, 11 Nov
ಇನ್ನೂ 400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ವಿಸ್ಟಾಡೋಮ್ ಕೋಚ್‌ಗಳ ಮೂಲಕ ಸಾರಿಗೆ ಕ್ಷೇತ್ರದಲ್ಲಿ ನಾವು ಹೊಸ ಅಧ್ಯಾಯ ಬರೆಯಲಿದ್ದೇವೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಹೋದರೆ ನಮಗೆ ಬೇರೆ ಲೋಕಕ್ಕೆ ಹೋದಂತೆ ಆಗುತ್ತದೆ. ಇದೇ ಮಾದರಿಯಲ್ಲಿ ಯಶವಂತಪುರ, ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮೋದಿ ಹೇಳಿದರು.
1:11 PM, 11 Nov
ವಂದೇ ಭಾರತ್ ಎಕ್ಸ್‌ಪ್ರೆಸ್‌ ಕೇವಲ ರೈಲಲ್ಲ. ಇದು ನವ ಭಾರತದ ಹೊಸ ಆಲೋಚನೆಯಾಗಿದೆ. ಭಾರತ ಈಗ ವೇಗವಾಗಿ ಓಡುತ್ತದೆ ಎಂಬುದನ್ನು ಈ ರೈಲು ತಿಳಿಸುತ್ತದೆ ಎಂದು ಮೋದಿ ಹೇಳಿದರು.
1:09 PM, 11 Nov
ಇಡೀ ವಿಶ್ವದಲ್ಲೇ ಭಾರತದ ಗುರುತಿಸುವಿಕೆ ಸ್ಟಾರ್ಟ್‌ ಅಪ್ ಮೂಲಕ ಇದೆ. ಅದರಲ್ಲಿ ಬೆಂಗಳೂರು ಸ್ಟಾರ್ಟ್‌ ಅಪ್‌ಗಳಿಗೆ ಪ್ರಸಿದ್ಧಿಯಾಗಿದೆ. ಸ್ಟಾರ್ಟ್‌ ಅಪ್ ಒಂದು ವಿನೂತನ ಯೋಚನೆಯಾಗಿದೆ. ಬೆಂಗಳೂರು ಸ್ಟಾರ್ಟ್‌ ಅಪ್ ಸಿಟಿಯನ್ನು ಪ್ರತಿನಿಧಿಸುತ್ತದೆ.
1:08 PM, 11 Nov
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಕೆಲವು ಚಿತ್ರಗಳನ್ನು ನಾನು ಸಾಮಾಜಿಕ ಜಾತತಾಣದಲ್ಲಿ ಹಾಕಿದ್ದೆ. ಅದಕ್ಕಿಂತಲೂ ಟರ್ಮಿನಲ್ ಸುಂದರವಾಗಿದೆ ಎಂದು ಮೋದಿ ಬಣ್ಣಿಸಿದರು.
1:07 PM, 11 Nov
ಕರ್ನಾಟಕದ ಜನರು ಕಾಶಿ, ವಾರಣಾಸಿ ದರ್ಶನ ಪಡೆಯಲು ಅನುಕೂಲವಾಗುವಂತೆ ಕರ್ನಾಟಕ ಭಾರತ್ ಕಾಶಿ ದರ್ಶನ ರೈಲಿಗೆ ಚಾಲನೆ ನೀಡಲಾಗಿದೆ ಎಂದು ಮೋದಿ ಹೇಳಿದರು.
1:06 PM, 11 Nov
ಕರ್ನಾಟಕಕ್ಕೆ ಇಂದು ಭಾರತದಲ್ಲೇ ತಯಾರಾದ ವಂದೇ ಭಾರತ್ ರೈಲು ಸಿಕ್ಕಿದೆ. ಈ ರೈಲು ಚೆನ್ನೈ, ಬೆಂಗಳೂರು ಮತ್ತು ಮೈಸೂರನ್ನೂ ಸಂಪರ್ಕಿಸಲಿದೆ ಎಂದು ಮೋದಿ ಹೇಳಿದರು.
1:05 PM, 11 Nov
ಉತ್ತಮವಾದ, ವಿಶೇಷವಾದ ದಿನ ಕರ್ನಾಟಕಕ್ಕೆ ಆಗಮಿಸುವ ಅವಕಾಶ ನನಗೆ ಸಿಕ್ಕಿದೆ. ಕನಕದಾಸರಿಗೆ, ಒನಕೆ ಓಬವ್ವಗೆ ಮತ್ತೊಮ್ಮೆ ನಮಿಸುತ್ತೇನೆ ಎಂದು ನರೇಂದ್ರ ಮೋದಿ ಮೋದಿ ಹೇಳಿದರು.
1:04 PM, 11 Nov
ಕರ್ನಾಟಕದ ಜನರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಎಂದು ಪ್ರಧಾನಿ ಮೋದಿ ಕನ್ನಡದಲ್ಲಿಯೇ ಮಾತು ಆರಂಭಿಸಿದರು.
1:04 PM, 11 Nov
ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ.
1:02 PM, 11 Nov
ನಮ್ಮ ಕಾಂಗ್ರೆಸ್ ಪಕ್ಷ ನಾಡಪ್ರಭು ಕೆಂಪೇಗೌಡರ ಮೌಲ್ಯಗಳ ನೈಜ ಅನುಯಾಯಿ. ಅವರ ಗೌರವಾರ್ಥ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದೇವೆ. ಬೆಂಗಳೂರಿನ ಮುಖ್ಯ ಮೆಟ್ರೋ ನಿಲ್ದಾಣಕ್ಕೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
1:01 PM, 11 Nov
ಮೋದಿ ಬೆಂಗಳೂರು ಭೇಟಿ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
12:59 PM, 11 Nov
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಅಷ್ಟು ಯೋಜನಾ ಬದ್ಧವಾಗಿ ಅವರು ನಗರವನ್ನು ಕಟ್ಟಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
12:57 PM, 11 Nov
ನಾಡಪ್ರಭು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಬಳಿಕ ನಡೆಯುತ್ತಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತಿದ್ದಾರೆ.
12:55 PM, 11 Nov
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.
12:51 PM, 11 Nov
ಪ್ರಧಾನಿ ಮೋದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
12:48 PM, 11 Nov
ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಿದ್ದಾರೆ.
12:43 PM, 11 Nov
ನರೇಂದ್ರ ಮೋದಿ ಸಮಾವೇಶದ ನೇರ ಪ್ರಸಾರ
12:42 PM, 11 Nov
ನಾಡಪ್ರಭು ಕೆಂಪೇಗೌಡರ ಕುರಿತ ಸಂಕ್ಷಿಪ್ತ ವಿಡಿಯೋವೊಂದನ್ನು ಸಮಾವೇಶದಲ್ಲಿ ಬಿತ್ತರಿಸಲಾಯಿತು.
12:41 PM, 11 Nov
ನಮ್ಮ ಮೆಟ್ರೋ ಮತ್ತು ಸಬ್ ಅರ್ಬನ್ ರೈಲು ಸೇರಿದಂತೆ ವಿವಿಧ ಕೊಡುಗೆಯನ್ನು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಬಣ್ಣಿಸಿದರು.
12:40 PM, 11 Nov
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ, ಧಾರವಾಡ ಸಂಸದ ಪಹ್ಲಾದ್ ಜೋಶಿ ಸಮಾವೇಶದಲ್ಲಿ ಸ್ವಾಗತ ಭಾಷಣೆ ಮಾಡುತ್ತಿದ್ದಾರೆ.
12:38 PM, 11 Nov
ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಪೇಟವನ್ನು ತೊಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಸನ್ಮಾಸಿಸಿದರು.
12:36 PM, 11 Nov
ನಾಡಪ್ರಭು ಕೆಂಪೇಗೌಡ, ವೀರವನಿತೆ ಒನಕೆ ಓಬವ್ವ, ಕನಕದಾಸರ ಫೋಟೋಗಳಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.
READ MORE

English summary
PM Modi Bengaluru Visit Live Updates : He scheduled to inaugurate Bengaluru International Airport second terminal and unveiling the 108ft statue of Kempegowda. Check live news and updates in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X