ಪ್ರಧಾನಿ ಮೋದಿ ಬಂಡೀಪುರ ಭೇಟಿ: 22 ಕಿ.ಮೀ. ಸಫಾರಿ ವೇಳೆ ಹುಲಿ ಕಂಡಿಲ್ಲ: ಏಕೆ?, ಕೊನೆಗೂ ಕಾರಣ ತಿಳಿಸಿದ ಅಧಿಕಾರಿಗಳು
ಚಾಮರಾಜನಗರ, ಏಪ್ರಿಲ್ 11: 'ಪ್ರಾಜೆಕ್ಟ್ ಟೈಗರ್ 50' ಹಿನ್ನೆಲೆಯಲ್ಲಿ ಕರ್ನಾಟಕದ ಚಾಮರಾಜಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ದೇಶದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರು. ಆದರೆ ಅವರಿಗೆ ಸಫಾರಿ ವೇಳೆ ಒಂದೇ ಒಂದು ಹುಲಿ ಕಾಣಸಿಲಿಲ್ಲ. ಈ ಕುರಿತು ವಿಪಕ್ಷಗಳು ವ್ಯಾಪಕ ಟೀಕೆ ಮಾಡಿದ್ದವು. ಇದರ ಬೆನ್ನಲ್ಲೆ ಹುಲಿ ಕಾಣದಿದ್ದಕ್ಕೆ ಬಿಆರ್‌ಟಿ ಅಧಿಕಾರಿಗಳು ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಏಪ್ರಿಲ್ 9ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರಕ್ಕೆ ಆಗಮಿಸಿದ್ದರು. ಅಂದು ಬೆಳಗ್ಗೆ 7:15 ರಿಂದ 9:30 ಗಂಟೆವರೆಗೆ ಒಟ್ಟು 22 ಕಿಲೋ ಮೀಟರ್‌ವರೆಗೆ ಸಫಾರಿಯಲ್ಲಿ ನಡೆಸಿದ್ದರು. ಆದರೆ ಅವರ ಒಂದೇ ಒಂದು ಹುಲಿ ಕಾಣಲಿಲ್ಲ. ಈ ವಿಚಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಹುಲಿಗೆ ಮೀಸಲಾದ ಪ್ರದೇಶದಲ್ಲಿ ಹುಲಿ ಕಾಣದಿದ್ದರೆ ಹೇಗೆ? ಎಂಬ ಪ್ರಶ್ನೆಗಳು ಕಾಡಿದ್ದವು ಅದಕ್ಕೆ ಅಂತಿಮವಾಗಿ ಕಾರಣ ಏನೆಂಬುದು ತಿಳಿದು ಬಂದಿದೆ.

ಸಫಾರಿ ವೇಳೆ ಪ್ರಧಾನಿಗೆ ಹುಲಿ ಕಾಣದಕ್ಕೆ ಇರುವ ನೈಜ ಕಾರಣವೆಂದರೆ ಅದು ಪ್ರಧಾನಿ ಭದ್ರತಾ ಸಿಬ್ಬಂದಿ (ಎಸ್‌ಪಿಜಿ) ಕೈಗೊಂಡ ಭದ್ರತಾ ಕ್ರಮಗಳು ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಬಂಡೀಪುರಕ್ಕೆ ಭೇಟಿ ನೀಡುವುದಕ್ಕೂ ಮುನ್ನ 5 ದಿನಗಳ ಹಿಂದೆ ಪ್ರಧಾನಿ ಸಫಾರಿ ಮಾಡಬೇಕಿದ್ದ ಜಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಸಿಬ್ಬಂದಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು, ನಕ್ಸಲ್ ನಿಗ್ರಹ ಪಡೆ ಮತ್ತಿತರರು ಹಲವು ಭಾರಿ ಸಫಾರಿ ಕೈಗೊಂಡಿದ್ದರು. ಈ ವೇಳೆ ಹುಲಿಗಳು ಕಂಡಿದ್ದು, ಸಿಬ್ಬಂದಿ ಫೋಟೊ ಕ್ಲಿಕ್ಕಿಸಿದ್ದಾರೆ.
ಹಲವು ಬಾರಿ ಸಫಾರಿ ಮಾರ್ಗದಲ್ಲಿ ತಪಾಸಣೆ
ಬಿಆರ್‌ಟಿ ಅಧಿಕಾರಿಗಳು ತಿಳಿಸಿರುವಂತೆ, ಪ್ರಧಾನಿ ಭೇಟಿಗೆ 5 ದಿನಗಳ ಹಿಂದೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸಿಬ್ಬಂದಿ ತಪಾಸಣೆ, ಡ್ರಿಲ್ ನಡೆಸಿದ್ದರು. ಈ ತಪಾಸಣೆ ಪ್ರಧಾನಿ ಸಫಾರಿ ಮಾರ್ಗದಲ್ಲೇ ನಡೆದಿತ್ತು. ಆಗ ಕಂಡು ಬಂದಿದ್ದ ಹುಲಿಗಳ ಪ್ರಧಾನಿ ಮೋದಿ ಕಾಣಲಿಲ್ಲ. ಅವರ ಸಫಾರಿ ವೇಳೆ ಕೇವಲ ಹುಲಿ ಹೆಜ್ಜೆ ಗುರುತುಗಳು ಕಂಡಿದ್ದವಷ್ಟೇ. ಅಲ್ಲದೇ ಹುಲಿಗಳು ಪ್ರಧಾನಿ ಸಫಾರಿ ವೇಳೆ ಸದ್ದುಗದ್ದಲವಿಲ್ಲದೇ ಪ್ರದೇಶಗಳಿಗೆ ತೆರಳಿರಬಹದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹುಲಿ ಓಡಾಡುವ ಮಾರ್ಗದಲ್ಲೇ ಸಫಾರಿ
ಹುಲಿಗಳು ತಿಂದು, ನಿದ್ದೆ ಮಾಡುವ ಓಡಾಡುವ ಮಾರ್ಗವನ್ನೇ ಪ್ರಧಾನಿ ಸಫಾರಿಗೆ ಗುರುತಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಪ್ರಧಾನಿ ಇದ್ದ ಸಫಾರಿ ವಾಹನ ಬೆಂಗಾವಲು ಪಡೆ ಮಾರ್ಗದ ಮಧ್ಯದಲ್ಲಿ ಇರುವಂತೆ ಹೇಳಲಾಗಿತ್ತುದೆ. ಸಫಾರಿ ವೇಳೆ ಯಾವಾಗಲೂ ಇರುವ ವಾಹನದಿಂದ ಪ್ರಾಣಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಲಾಗಿತ್ತು. ಹೀಗಾಗಿ ಭದ್ರತಾ ಸಿಬ್ಬಂದಿ ವಾಹನ ಐದಾರು ಬಾರಿ ಸುತ್ತು ಹೊಡೆದಿತ್ತು. ಈ ಗದ್ದಲದ ಕಾರಣದಿಂದ ಪ್ರಧಾನಮಂತ್ರಿಗಳಿ ಹುಲಿ ಕಂಡು ಬಂದಿಲ್ಲ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಪ್ರಧಾನಿ ಭೇಟಿಗೂ ಮುನ್ನ ಭದ್ರತಾ ಸಿಬ್ಬಂದಿ ಸಫಾರಿ ಮಾರ್ಗದಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಬಿಆರ್‌ಟಿ ಮನವಿ ಮೇರೆಗೆ ಬೇಟಿಯ ಹಿಂದಿನ ರಾತ್ರಿ ಅಂದರೆ ಶನಿವಾರವೂ ಸಿಬ್ಬಂದಿ ತಪಾಸಣೆ ಕೈಗೊಂಡಿರಲಿಲ್ಲ. ಈ ಕಾರಣದಿಂದಾಗಿ ಸಫಾರಿ ವೇಳೆ ಪ್ರಧಾನಿಮಂತ್ರಿಗಳು ಸುಮಾರು 40 ಆನೆಗಳ ಗುಂಪು, 20-30 ಗೌರ್‌ಗಳು, ಅಂದಾಜು 30 ಸಾಂಬಾರ್ ಜಿಂಕೆಗಳು ಮತ್ತು ಇನ್ನಿತರ ವನ್ಯಜೀವಿಗಳನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ ಟೈಗರ್ ಯೋಜನೆಯು 50 ವರ್ಷ ಪೂರೈಸಿದ್ದಕ್ಕೆ ಹುಲಿ ನೋಡಲು ಬಂದಿದ್ದ ಪ್ರಧಾನಿಗೆ ಹುಲಿ ನೋಡಲು ಸಾಧ್ಯವಾಗಲಿಲ್ಲ ಎಂದು ಬಿಆರ್‌ಟಿ ತಿಳಿಸಿದೆ.
ಹುಲಿ ಕಂಡಿಲ್ಲ: ವಾಹನ ಚಾಲಕನದ್ದು ತಪ್ಪಿಲ್ಲ
ಪ್ರಧಾನಿ ಸಫಾರಿ ವೇಳೆ ಒಂದೇ ಒಂದು ಹುಲಿ ಕಾಣಲು ಸಾಧ್ಯವಾಗಿಲ್ಲ ಎಂಬ ಸುದ್ದಿ ಭಾರಿ ಸದ್ದು ಮಾಡಿತು. ಇದಕ್ಕೆ ಸಫಾರಿ ವಾಹನದ ಚಾಲಕ 29 ವರ್ಷದ ಮಧುಸೂಧನ್ ಕಾರಣ ಅಂತಲೂ ಹೇಳಲಾಗಿತ್ತು. ಏಕೆಂದರೆ ಆತನಿಗೆ ಹುಲಿ ಸಿಗುವ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಆತ ವಿಫಲನಾಗಿದ್ದಾನೆ ಎಂಬ ಮಾತುಗಳು ಕೇಳಿ ಬಂದಿವೆ. ಆ ವಾಹನದ ನೋಂದಣಿ ರದ್ದು ಮಾಡುವಂತೆಯೂ ನೆಟ್ಟಿಗರು ಒತ್ತಾಯಿಸಿದ್ದರು.
ಹರಿದಾಡುತ್ತಿರುವ ವಾಹನದ ನೋಂದಣಿ ಹಳೆಯದ್ದಾಗಿದೆ. ರದ್ದು ವಿಚಾರ ಸುಳ್ಳು, ಇದರಲ್ಲಿ ವಾಹನ ಸವಾರದ್ದೇನು ತಪ್ಪಿಲ್ಲ ಎಂದು ಬಿಆರ್‌ಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications