Get Updates
Get notified of breaking news, exclusive insights, and must-see stories!

Pralhad Joshi Profile: 'ನಮೋ 3.0 ಸಂಪುಟದಲ್ಲಿ ಸಚಿವರಾದ ಪ್ರಹ್ಲಾದ್ ಜೋಶಿ, ಜೀವನ, ರಾಜಕೀಯ ಪರಿಚಯ

ಬೆಂಗಳೂರು, ಜೂನ್ 09: ಲೋಕಸಭಾ ಚುನಾವಣೆ 2024ರಲ್ಲಿ ಉತ್ತರ ಕರ್ನಾಟಕದ ಧಾರವಾಡ ಕ್ಷೇತ್ರದಿಂದ ಐದನೇ ಭಾರಿ ಪ್ರಹ್ಲಾದ್ ಜೋಶಿಯವರು ವಿಜಯಪತಾಕೆ ಹಾರಿಸಿದ್ದಾರೆ. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿಯವರ (Modi 3.0) ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೋಶಿಯವರ ಜೀವನ, ಬಾಲ್ಯ, ಶಿಕ್ಷಣ, ರಾಜೀಕೀಯ ಪ್ರವೇಶ, ಧಾರವಾಡದಲ್ಲಿ ಹ್ಯಾಟ್ರಿಕ್ ಗೆಲುವು ಹಾಗೂ ಅವರ ಜೀವನ ಪರಿಚಯ ಇಲ್ಲಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 61 ವರ್ಷ ವಯಸ್ಸಿನ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್ ವಿರುದ್ಧ ಬರೋಬ್ಬರಿ ಸುಮಾರು 97000 ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷದ ಅಧ್ಯಕ್ಷಗಿರಿ, ಕೇಂದ್ರ ಸಚಿವ ಸ್ಥಾನಗಳನ್ನು ನಿರ್ವಹಿಸಿರುವ ಅನುಭವ ಅವರಿಗಿದೆ. ಬಿಜೆಪಿಯಲ್ಲಿ ಹಿರಿಯ ನಾಯಕರ ಪೈಕಿ ಇವರು ಒಬ್ಬರಾಗಿದ್ದಾರೆ.

PM Modi 3 0 Dharwad Elected BJP MP Pralhad Joshi Profile Political Career Details here

ಇಂದು ಜೂನ್ 09ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು. ಅವರೊಂದಿಗೆ ಸಂಸದ ಪ್ರಹ್ಲಾದ್ ಜೋಶಿ (61) ಸಹ ಮತ್ತೊಮ್ಮೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ವಿಜಯಪುರದಲ್ಲಿ 1962 ರಲ್ಲಿ ಜನನ

ಮೂಲತಃ ಬ್ರಾಹ್ಮಣ ಕುಟುಂಬದಲ್ಲಿ 1962ರ ನವೆಂಬರ್ 27 ರಂದು ಕರ್ನಾಟಕದ ವಿಜಯಪುರದಲ್ಲಿ ಜನಿಸಿದರು. ಸಾಮಾನ್ಯ ಬ್ರಾಹ್ಮಣ ಹುಡುಗರಂತೆ ಬಾಲ್ಯ ಕಳೆದ ಇವರು ಪದವಿಧರರು. ರಾಜಕೀಯ ಜೊತೆಗೆ ಕೈಗಾರಿಕೋದ್ಯಮ ವಲಯದಲ್ಲಿ ಗುರುತಿಸಿಕೊಂಡವರು.

1992 ರಿಂದ 1994ರ ಅವಧಿಯಲ್ಲಿ ಹುಬ್ಬಳ್ಳಿಯಲ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದಾಗಿ ಆರ್‌ಎಸ್‌ಎಸ್‌ ಘೋಷಿಸಿತ್ತು. ಇವು ಪ್ರಹ್ಲಾದ್ ಜೋಶಿಯವರ ರಾಜಕೀಯದ ಆರಂಭಿಕ ದಿನಗಳಾಗಿದ್ದವು. ಆಗಲೂ ಅವರು ಆರ್‌ಎಸ್‌ಎಸ್‌ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು.

PM Modi 3 0 Dharwad Elected BJP MP Pralhad Joshi Profile Political Career Details here

ಈ ಮೈದಾನ ಮಾಲೀಕತ್ವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪುನಃ ಸ್ಥಾಪಿಸುವಲ್ಲಿ ಜೋಶಿಯವರ ಪಾತ್ರ ಮಹತ್ವದ್ದು. ಈ ಮೈದಾನ ಸರ್ಕಾರ ಅಧೀನದ್ದು ಎಂಬುದನ್ನು ಹೈಕೋರ್ಟ್, ಕಳೆದ ವರ್ಷ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಹೀಗಾಗಿ ಹಂತ ಹಂತವಾಗಿ ಆರ್‌ಎಸ್‌ಎಸ್‌ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡರು.

2004ರಲ್ಲಿ ಮೊದಲ ಭಾರಿಗೆ ಸಂಸದರಾಗಿ ಆಯ್ಕೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸಿದ್ದ ಇವರು, 2004ರಲ್ಲಿ ಬಿಜೆಪಿಯಿಂದ ಇದೇ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತಪೂರ್ವ ಜಯ ಗಳಿಸಿದರು. ಅಲ್ಲಿಂದ ಅವರು ನಿಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಈವರೆಗೆ ಅವರು ಐದು ಭಾರಿ ಧಾರವಾಡದಲ್ಲಿ ಗೆದ್ದ ಏಕೈಕ ಸಂಸದರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

2004ರಲ್ಲಿ, 2009, 2014ರಲ್ಲೂ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದರು. ನಂತರ 2019ರಲ್ಲಿ ನಾಲ್ಕನೇ ಭಾರಿಗೆ ಗೆದ್ದು ಪ್ರಧಾನಿ ಮೋದಿಯವರ 2.0 ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದರು.

ಧಾರವಾಡಕ್ಕೆ ಐಐಟಿ ತರುವಲ್ಲಿ ಪ್ರಮುಖ ಪಾತ್ರ

ಇದರೊಂದಿಗೆ ಧಾರವಾಡದಲ್ಲಿ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (IIT Dharwad) ಸ್ಥಾಪನೆಗೆ, ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲ್ದರ್ಜೆಗೆ ಏರಿಸುವಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು. ಸದ್ಯ ಹುಬ್ಬಳ್ಳಿಯ ಖ್ಯಾತ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಮೇಲ್ಸೇತುವೆ ಯೋಜನೆಗೆ ಸಾಕಾರ ಇವರ ನೇತೃತ್ವದಲ್ಲಿ ಆಗಲಿದೆ.

ಧಾರವಾಡದಲ್ಲಿ ಭರ್ಜರಿ ಗೆಲುವು: 2019ರಲ್ಲಿ ಭಾರೀ ಅಂತರದ ಜಯ

ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿಯವರು 2004ರಲ್ಲಿ ಮೊದಲ ಭಾರಿಗೆ ಸಂಸದರಾದರು. 2009 ರಲ್ಲಿ ಸಹ ಕಣಕ್ಕಿಳಿದು ಬರೋಬ್ಬರಿ 4,46,786 ಬಹುಮತ ಪಡೆದು ಮೊದಲ ಭಾರಿಗೆ ಸಂಸದರಾದರು. ನಂತರ 2014ರಲ್ಲಿ ಕಾಂಗ್ರೆಸ್ ವಿರುದ್ಧ ವಿನಯ್ ಕುಲಕರ್ಣಿ ವಿರುದ್ಧ 5,45,395 ಬಹುಮತಗಳಿಂದ ಗೆದ್ದು ಬೀಗಿದ್ದರು.

ಕಳೆದ ಭಾರಿಗೆ 2019ರಲ್ಲೂ ಮತ್ತದೇ ಕ್ಷೇತ್ರದಿಂದ ನಿಂತ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್ ವಿನಯ್ ಕುಲಕರ್ಣಿ ವಿರುದ್ಧ ಭರ್ಜರಿ 6,84,837 ಬಹುಮತ ಪಡೆದು ಗೆದ್ದರು. ಈ ವೇಳೆ ಅವರು ಮತ್ತು ಕುಲಕರ್ಣಿ ಮಧ್ಯ 2.5 ಲಕ್ಷ ಮತಗಳ ಅಂತರ ಇತ್ತು ಎಂಬುದು ವಿಶೇಷ.

ಕಾಂಗ್ರೆಸ್ ವಿರುದ್ಧ ಮತ್ತೆ ಗೆಲುವು, ಮತ್ತೆ ಮಂತ್ರಿ ಸ್ಥಾನ

ಈ ಭಾರಿ 2024ರಲ್ಲಿ ಧಾರವಾಡದಿಂದ ಕಣಕ್ಕಿಳಿದರು. ಹಲವು ಆರೋಪಗಳನ್ನು ಎದುರಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವಿರುದ್ಧ 97ಸಾವಿರ ಮತಗಳ ಅಂತದಲ್ಲಿ ಗೆದ್ದು, ಐದನೇ ಭಾರಿಗೆ ಸಂಸದರಾದರು. ಪ್ರತಿ ಭಾರಿಗೆ ಗೆದ್ದಾಗಲು ಅವರು ಮತಗಳನ್ನು ಹೆಚ್ಚಿಸಿಕೊಂಡೇ ಬಂದಿದ್ದಾರೆ.

2019ರಿಂದ ಐದು ವರ್ಷ ಕಲ್ಲಿದ್ದಲು-ಸಂಸದೀಯ ವ್ಯವಹಾರ ಸಚಿವರಾಗಿ ಸೇವೆ ಸಲ್ಲಿಸದ ಪ್ರಹ್ಲಾದ್ ಜೋಶಿಯವರಿಗೆ 2024ರ ಪ್ರಧಾನಿ ಸಂಪುಟದಲ್ಲಿ ಮತ್ತೆ ಮಂತ್ರಿಗಿರಿ ಭಾಗ್ಯ ಸಿಕ್ಕಿದೆ. ಇಂದು ಜೂನ್ 09 ರಂದು ಅವರು ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+