KEA PGAYUSH–2025: ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ನವೆಂಬರ್ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪಿಜಿ ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋಪತಿ ಮತ್ತು ಯೋಗ ಕೋರ್ಸ್‌ಗಳ PG AYUSH-2025ಮೊದಲ ಹಂತದ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ನವೆಂಬರ್ 16ರಂದು ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಇಚ್ಛೆ/ಆಯ್ಕೆಗಳನ್ನು ನೋಂದಾಯಿಸಿಕೊಳ್ಳಬೇಕು.
ನವೆಂಬರ್ 16ರಂದು ಸಂಜೆ 6 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಇದಾದ ಬಳಿಕ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಗಳನ್ನು ಬದಲಾಯಿಸಲು, ಮರುಕ್ರಮಕ್ಕೆ ತರುವ ಅಥವಾ ಹೊಸ ಆಯ್ಕೆಗಳನ್ನು ಸೇರಿಸಲು ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯು ನವೆಂಬರ್ 18ರ ಬೆಳಗ್ಗೆ 11 ಗಂಟೆಯವರೆಗೆ ನಡೆಯಲಿದೆ. ನಂತರ ಅವಕಾಶ ಇಲ್ಲ ಎಂದು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ತಾತ್ಕಾಲಿಕ ಮತ್ತು ಅಂತಿಮ ಫಲಿತಾಂಶಗಳು
ಸದ್ಯ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು,ಅ ದರ ಫಲಿತಾಂಶವನ್ನು ನವೆಂಬರ್ 18ರಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಆಗುತ್ತದೆ. ಬಳಿಕ ನವೆಂಬರ್ 19ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದರು.
ಅಭ್ಯರ್ಥಿಗಳು ಸೀಟು ಹಂಚಿಕೆಯಾದ ನಂತರ ಪೋಷಕರೊಂದಿಗೆ ಚರ್ಚಿಸಿ ಸೂಕ್ತವಾದ ಆಯ್ಕೆ (Choice) ಅನ್ನು ದಾಖಲು ಮಾಡಬೇಕು. ಈ ಪ್ರಕ್ರಿಯೆಗೆ ನವೆಂಬರ್ 19ರಂದು ಮಧ್ಯಾಹ್ನ 1 ಗಂಟೆಯಿಂದ ನವೆಂಬರ್ 21ರಂದು ಬೆಳಿಗ್ಗೆ 11 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರಗಳ ಡೌನ್‌ಲೋಡ್
Choice-1 ಹಾಗೂ Choice-2 ಆಯ್ಕೆ ಮಾಡಿದ ಅಭ್ಯರ್ಥಿಗಳು ನವೆಂಬರ್ 19ರಿಂದ ನವೆಂಬರ್ 21ರ ವರೆಗೆ ಬ್ಯಾಂಕಿನ ಕಾರ್ಯನೇರವಿನ ಸಮಯದಲ್ಲಿ ಚಾಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕಿದೆ. ಶುಲ್ಕ ಪಾವತಿಸಿದ Choice-1 ಅಭ್ಯರ್ಥಿಗಳು ನವೆಂಬರ್ 19ರಿಂದ ನವೆಂಬರ್ 22ರ ಸಂಜೆ 4 ಗಂಟೆಯೊಳಗೆ ಪ್ರವೇಶ ಪತ್ರ (Admission Order) ಡೌನ್‌ಲೋಡ್ ಮಾಡಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.
ನಂತರ Choice-1 ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ನವೆಂಬರ್ 22ರ ಸಂಜೆ 5.30ರೊಳಗೆ ತಮ್ಮ ಹಂಚಿಕೆಯಾದ ಕಾಲೇಜಿಗೆ ಕಡ್ಡಾಯವಾಗಿ ಹಾಜರಾಗಬೇಕು. ಅಭ್ಯರ್ಥಿಗಳಿಗೆ ವೇಳಾಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ವೈಯಕ್ತಿಕ ಮಾಹಿತಿ SMS ಅಥವಾ Email ಮೂಲಕ ಕಳುಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications