ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ವಾಪಸ್
ಬೆಂಗಳೂರು, ಏ. 11 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಸಂಜೆಯಿಂದ ಕರೆ ನೀಡಿದ್ದ ಮುಷ್ಕರವನ್ನು ಪೆಟ್ರೋಲ್ ಬಂಕ್ ಮಾಲೀಕರು ವಾಪಸ್ ಪಡೆದಿದ್ದಾರೆ. ಬಂಕ್ ಮಾಲೀಕರ ಬೇಡಿಕೆ ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ತೈಲ ಮಾರಾಟ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದರು. ದೇಶಾದ್ಯಂತ ಈ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿಯೂ ಬೆಂಬಲ ದೊರಕಿತ್ತು.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂಧ್ರ ಪ್ರಧಾನ್ ಶನಿವಾರ ಇಲಾಖೆಯ ಅಧಿಕಾರಿಗಳು, ತೈಲ ಮಾರಾಟಗಾರರ ಒಕ್ಕೂಟದ ಜೊತೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಏ.30ರೊಳಗೆ ಈಡೇಸಿರುವ ಭರವಸೆ ನೀಡಿದ್ದಾರೆ.[ಮಾಲೀಕರ ಮುಷ್ಕರ ಏಕೆ?]
ಕೇಂದ್ರ ಸಚಿವರಿಂದ ಭರವಸೆ ಸಿಕ್ಕಿರುವ ಹಿನ್ನಲೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ಪೆಟ್ರೋಲ್ ಬಂಕ್ ಬಂದ್ ಮಾಡಿ ನಡೆಸುವ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಪೆಟ್ರೋಲ್ ಬಂಕ್‌ಗಳು ರಾತ್ರಿಯೂ ಕಾರ್ಯನಿರ್ವಹಿಸಲಿವೆ. [ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]
ಡೀಸೆಲ್ ಮತ್ತು ಪೆಟ್ರೋಲ್ ಮಾರಾಟಗಾರರಿಗೆ ಶೇ.5ರಷ್ಟು ಲಾಭಾಂಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಮುಷ್ಕರ ನಡೆಸಲು ತೀರ್ಮಾನಿಸಲಾಗಿತ್ತು. ತೈಲ ಮಾರಾಟ ಮಾಡುವ ಡೀಲರ್‌ಗಳಿಗೆ ಒಂದು ವರ್ಷದಿಂದ ಲಾಂಭಶ ಹೆಚ್ಚಳ ಮಾಡಿಲ್ಲ ಎಂದು ತೈಲ ಮಾರಾಟಗಾರರು ಆರೋಪಿದ್ದರು.












Click it and Unblock the Notifications