ಸಿಂಹದ ಮರಿಯಂತೆ ಕಾಣುವ ಪರ್ಷಿಯನ್ ಬೆಕ್ಕು ನೋಡಿದ್ದೀರಾ?

By: ಬಿ.ಎಂ ಲವಕುಮಾರ್, ಮೈಸೂರು
Subscribe to Oneindia Kannada

ಮಡಿಕೇರಿ, ಡಿಸೆಂಬರ್, 09: ಇದು ಸಿಂಹದ ಮರಿಯಲ್ಲ ಸಿಂಹವನ್ನೇ ಹೋಲುವ ಬೆಕ್ಕು ಎಂದರೆ ಅಚ್ಚರಿಯಾಗಬಹುದಲ್ಲವೆ? ಬೆಕ್ಕು ಸಿಂಹದ ಮರಿಯಾದ ಕಥೆಯಿದೆ ಅಲ್ವ ಅದು ಮಾತ್ರ ರೋಚಕ.

ದಕ್ಷಿಣ ಕೊಡಗಿನ ಬಿರುನಾಣಿಯವರಾದ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ನೆಲ್ಲಿರ ರೋಷನ್ ಬೋಪಯ್ಯ ಹಾಗೂ ರಶ್ಮಿರೋಷನ್ ದಂಪತಿಗಳು ಮುದ್ದಾಗಿ ಸಾಕಿ ಬೆಳೆಸುತ್ತಿರುವ ಬೆಕ್ಕು ಈಗ ಸಿಂಹದ ಮರಿಯಂತೆ ಕಂಗೊಳಿಸುತಿದೆ.[ಸತ್ತ ಬೆಕ್ಕುಗಳ ಗಂಟುಗಳು ಮರದಲ್ಲಿ ನೇತಾಡ್ತಿವೆ]

Persian cat is look like a lion at Madikeri

ರಶ್ಮಿ ರೋಷನ್ ಅವರಿಗೆ ಆಕೆಯ ಸ್ನೇಹಿತೆಯೊಬ್ಬಳು ಸ್ನೇಹದ ಸಂಕೇತವಾಗಿ ಸಣ್ಣದಾದ ಪರ್ಷಿಯನ್ ಬೆಕ್ಕಿನ ಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಬೆಕ್ಕನ್ನು ಅವರು ಮುದ್ದಾಗಿ, ಬಹಳ ಪ್ರೀತಿಯಿಂದ ಸಾಕಲು ಪ್ರಾರಂಭಿಸಿದರು.

ಈ ಪರ್ಷಿಯನ್ ಬೆಕ್ಕು ಇತರ ದೇಶದ ಬೆಕ್ಕುಗಳಿಗಿಂತ ವಿಭಿನ್ನ ಎಂಬುದನ್ನು ತಿಳಿದ ಅವರು ಪರ್ಷಿಯನ್ ಬೆಕ್ಕಿನ ಜೀವನ ವಿಧಾನ, ಆಹಾರ ಬಗ್ಗೆ ರೋಷನ್ ಹಾಗೂ ರಶ್ಮಿ ಇಂಟರ್ನೆಟ್ ನಲ್ಲಿ ನೋಡಿ ತಿಳಿದುಕೊಂಡರು. ಬಳಿಕ ಅದರಂತೆ ಆ ಬೆಕ್ಕನ್ನು ಸಾಕಲು ತೊಡಗಿದರು.[ಏಳು ಕೋಟಿ ಬೆಲೆಬಾಳುವ ಕೋಣವನ್ನು ನೋಡಿದ್ದೀರಾ?]

Persian cat is look like a lion at Madikeri

ಪರ್ಷಿಯನ್ ಬೆಕ್ಕಿನ ಮೈ ಮೇಲಿನ ಕೂದಲು ಅಧಿಕ ಇತ್ತು. ಹಾಗಾಗಿ ಕೂದಲು ಕತ್ತರಿಸಲು ಸೆಲೂನಿಗೆ ಹೋದ ಅವರು 1000 ರೂ ಕೊಟ್ಟು "ಲಯನ್ ಕಟ್" ಮಾಡಿಸಿದರು. ಇತರೆ ಯಾವುದೇ ಬೆಕ್ಕುಗಳಿಗೆ ಸೆಲೂನ್ ಗಳಲ್ಲಿ ಅರವಳಿಕೆ ಚುಚ್ಚು ಮದ್ದು ನೀಡಿ ಕೂದಲು, ಉಗುರನ್ನು ತೆಗೆದು ಶುಚಿಗೊಳಿಸುತ್ತಾರೆ.

ಈ ಪರ್ಷಿಯನ್ ಬೆಕ್ಕಿನ ಕೂದಲನ್ನು ಕತ್ತರಿಸುವಾಗ ಬೆಕ್ಕು ಯಾವುದೇ ತೊಂದರೆ ಮಾಡದೆ, ಅಲುಗಾಡದೆ ಲಯನ್ ಕಟ್ ಮಾಡುವವರೆಗೂ ಸುಮ್ಮನೆ ಇತ್ತು. ಅಂದಿನಿಂದ ಪರ್ಷಿಯನ್ ಕ್ಯಾಟ್ ಸಿಂಹದ ಮರಿಯಂತೆಯೇ ಕಾಣತೊಡಗಿತು ಎಂದು ರೋಷನ್ ಬೋಪಯ್ಯ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Persian cat is look like a lion at Madikeri. This cat live in Roshan Bopaiah, Rashmi Roshan
Please Wait while comments are loading...