Get Updates
Get notified of breaking news, exclusive insights, and must-see stories!

ಕನ್ನಡ, ತುಳು ಕಲಿತವರಿಗೆ ಸ್ವರ್ಗ ಇಲ್ವಾ ಸುಗುಣೇಂದ್ರ ಸ್ವಾಮೀಜಿ ಅಂತಿದ್ದಾರೆ ಜನ!

ಸಂಸ್ಕೃತ ಭಾಷೆಯನ್ನು ತಿಳಿದುಕೊಂಡವರಷ್ಟೇ ಸ್ವರ್ಗಕ್ಕೆ ಹೋಗುತ್ತಾರೆ. ನೀವು ಸ್ವರ್ಗಕ್ಕೆ ಹೋಗಲು ಇಚ್ಛಿಸಿದರೆ ಮೊದಲು ಸಂಸ್ಕೃತ ಭಾಷೆಯನ್ನು ಕಲಿಯಿರಿ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಹೇಳಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ, ಕನ್ನಡ, ತುಳು ಭಾಷೆಯನ್ನು ಕಲಿತ ನಾವು ಸ್ವರ್ಗಕ್ಕೆ ಹೋಗಲ್ವಾ ಸ್ವಾಮೀಜಿ ಎಂದು ಕನ್ನಡಿಗರು ಹಾಗೂ ತುಳು ಭಾಷಿಕರು ಪ್ರಶ್ನೆ ಮಾಡಿದ್ದಾರೆ.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಹೇಳಿಕೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತರಾವೇರಿ ಟ್ರೋಲ್‌ಗಳು ಸಹ ಮಾಡಲಾಗುತ್ತಿದೆ. ಸಂಸ್ಕೃತ ಕಲಿತರಷ್ಟೇ ಸ್ವರ್ಗದ ಬಾಗಿಲು ತೆಗೆಯುತ್ತಾರೆ ಎಂದಾದರೆ, ಆ ಸ್ವರ್ಗ ನನಗೆ ಬೇಡವೇ ಬೇಡ, ನನಗೆ ಕನ್ನಡವೇ ಸಾಕು ಎಂದು ಕೆಲವರು ಹೇಳಿದ್ದಾರೆ.

People s question to Sugunendra Swamiji those who learned Kannada and Tulu have no chance for heaven

ಇಷ್ಟಕ್ಕೂ ಸ್ವಾಮೀಜಿ ಹೇಳಿದ್ದೇನು ?

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಂಸ್ಕೃತದ ಬಗ್ಗೆ ಹಿರಿಮೆಯಿಂದ ಹೇಳಿದ ಮಾತೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಭಾಷಾ ಸಮರಕ್ಕೂ ಕಾರಣವಾಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿ, ಸಂಸ್ಕೃತ ಭಾಷೆಯು ಪವಿತ್ರ, ಪಾವನ ಹಾಗೂ ಶ್ರೇಷ್ಠ ಭಾಷೆ ಎಂದರು. ಇಲ್ಲಿಗೆ ನಿಲ್ಲಿಸದೆ ಮುಂದುವರಿದು ಸ್ವಾಮೀಜಿಗಳು ಸಂಸ್ಕೃತವು ಎಲ್ಲಾ ಭಾಷೆಗಳ ಮೂಲವಾಗಿದೆ. ಸಂಸ್ಕೃತದಿಂದಲೇ ಉಳಿದ ಎಲ್ಲಾ ಭಾಷೆಗಳ ಜನನವಾಗಿದೆ ಎಂಬರ್ಥದಲ್ಲಿ ಮಾತನಾಡಿದರು.

ಸಂಸ್ಕೃತವು ಸುಂದರವಾದ ಭಾಷೆ ಸರಳವಾಗಿ ಈ ಭಾಷೆಯನ್ನು ಎಲ್ಲರೂ ಕಲಿಯಲು ಸಾಧ್ಯವಿದೆ. ಭಾರತೀಯ ಭಾಷೆಗಳಿಗಷ್ಟೇ ಅಲ್ಲ. ವಿಶ್ವದ ಪ್ರಧಾನ ಭಾಷೆಯಾಗಿ ಗುರುತಿಸಿಕೊಂಡಿರುವ ಇಂಗ್ಲಿಷ್‌ ಭಾಷೆಗೂ ಸಂಸ್ಕೃತವೇ ಕಾರಣ ಎಂದು ಹೇಳಿದ್ದಾರೆ. ಸ್ವರ್ಗಕ್ಕೆ ಹೋಗುವ ಆಸಕ್ತಿ ಇದ್ದವರು ಸಂಸ್ಕೃತ ಕಲಿಯಿರಿ ಎಂದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಂಸ್ಕೃತ ಕಲಿತವರಷ್ಟೇ ಸ್ವರ್ಗಕ್ಕೆ ಹೋಗುವುದಾದರೆ ಆ ಸ್ವರ್ಗ ಬೇಡ, ನೀವೇ ಅಲ್ಲಿರಿ ಎಂದೂ ಜನ ಹೇಳಿದ್ದಾರೆ.

ಬಸವವಾದಿ ಶರಣರ ಚಿಂತನ ಕೂಟದಲ್ಲಿ ಅಸಮಾಧಾನ

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಹೇಳಿಕೆಯ ಬಗ್ಗೆ ಬಸವವಾದಿ ಶರಣರ ಚಿಂತನ ಕೂಟದಲ್ಲಿ ಚರ್ಚೆ ನಡೆದಿದ್ದು, ಶ್ರೀಗಳ ಹೇಳಿಕೆಗೆ ಅಸಮಾಧಾನ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದ ಬಸವವಾದಿ ಶರಣರ ಚಿಂತನ ಕೂಟದಲ್ಲಿ ಶ್ರೀಗಳ ಹೇಳಿಕೆಗೆ ಬಸವವಾದಿಗಳು ತಿರುಗೇಟು ನೀಡಿದ್ದಾರೆ. ಸತ್ಯವನುಡಿವುದೇ ಸ್ವರ್ಗ, ಮಿಥ್ಯವನುಡಿವುದೇ ನರಕ ಹಾಗೂ ಆಚಾರವೇ ಸ್ವರ್ಗ ಅನಾಚಾರವೇ ನರಕ ಎನ್ನುವ ಶರಣರ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಸ್ವರ್ಗಕ್ಕೆ ಹೋಗಲು ಬಸ್‌ ಸಿಗುತ್ತೆ!

ಇನ್ನು ಸ್ವಾಮೀಜಿ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತರಾವೇರಿ ಟ್ರೋಲ್‌ಗಳು ಕೇಳಿಬರುತ್ತಿವೆ. ಇದಕ್ಕೆ ಸ್ವರ್ಗಕ್ಕೆ ಹೋಗಲು ಬಸ್‌ ವ್ಯವಸ್ಥೆ ಇದೆ ಎನ್ನುವುದು ಸಹ ಒಂದು. ಸ್ವರ್ಗಕ್ಕೆ ಹೋಗಬೇಕು ಎನ್ನುವುದಕ್ಕೆ ಸಂಸ್ಕೃತ ಭಾಷೆ ಗೊತ್ತಿರಬೇಕು ಎನ್ನುವುದು ಕಡ್ಡಾಯವಲ್ಲ. ಮಂಗಳೂರು ಟು ಕಾಸರಗೋಡು ಎಕ್ಸಪ್ರೆಸ್‌ ಬಸ್‌ ಸಿಗುತ್ತೆ. ಅದರಲ್ಲಿ ಕುಳಿತು ಕುಂಬಳೆಯಲ್ಲಿ ಇಳಿಯಿರಿ. ಕುಂಬಳೆಯಲ್ಲಿ ಎಲ್ಲರಿಗೂ ತುಳು, ಮಲೆಯಾಳಂ, ಬ್ಯಾರಿ ಹಾಗು ಕನ್ನಡ ಭಾಷೆ ಬರುತ್ತದೆ. ಅದರಲ್ಲಿ ಸ್ವರ್ಗಕ್ಕೆ ಹೋಗುವ ಬಸ್‌ ಎಷ್ಟೊತ್ತಿಗೆ ಬರುತ್ತದೆ ಎಂದು ಕೇಳಿದರೆ ಹೇಳುತ್ತಾರೆ ಎಂದು ಟ್ರೋಲ್ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+