ಬಿಜೆಪಿಯವರು ಹೀನಾಯವಾಗಿ ಸೋತಿದ್ದಾರೆ ಮಾಡಲು ಕೆಲಸವಿಲ್ಲ : ಈಶ್ವರ್ ಖಂಡ್ರೆ
ಚಿತ್ರದುರ್ಗ, ಮೇ 30: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯವರು ಹೀನಾಯವಾಗಿ ಸೋತಿದ್ದಾರೆ ಅವರಿಗೆ ಮಾಡಲು ಕೆಲಸವಿಲ್ಲ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಈ ಕುರಿತು ಮಂಗಳವಾರ ಚಿತ್ರದುರ್ಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೀಡಿದ ಒಂದು ಬರವಸೆಯು ಈಡೇರಿಸಿಲ್ಲ ಕಾಂಗ್ರೆಸ್ ಆಡಳಿತದಲ್ಲಿ ಹಿಂದೆಯೂ ನೋಡಿದಂತೆ ನಡೆದಿದ್ದೇವೆ ಈಗಲೂ ಸಹ ನುಡಿದಂತೆ ನಡೆಯುತ್ತಿದ್ದೇವೆ. ಅದಕ್ಕೆ ಬಿಜೆಪಿಯವರಿಗೆ ನಡುಕ ಹುಟ್ಟಿದೆ, ಆಗಾಗಿ ಅವರು ಹತಾಶೆ ಮನೋಭಾವನೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನಾವು ಜಾರಿಗೊಳಿಸುತ್ತೇವೆ, ಈಗಾಗಲೇ ಮೊದಲ ಸಂಪುಟದಲ್ಲೇ ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಅಧಿಕಾರಿಗಳಿಗೆ ರೂಪುರೇಷೆ ತಯಾರಿಸಲು ಸೂಚಿಸಿದ್ದೇವೆ. ನಾಡಿದ್ದು ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ. ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ನಕ್ಸಲರು ಆಕ್ಟಿವ್ ಎಂದು ಸಿ.ಟಿ ರವಿ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿ ದುರ್ವರ್ತನೆ, ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ, ಈಗಲಾದರೂ ಇಂಥ ಹೇಳಿಕೆ ಕೊಡುವುದು ಬಿಡಲಿ ಎಂದು ಸಿ.ಟಿ ರವಿ ವಿರುದ್ದ ತಿರುಗೇಟು ನೀಡಿದ್ದಾರೆ.

ನಾವು ಸುಳ್ಳು ಹೇಳಲ್ಲ, ಬಿಜೆಪಿಗೆ ಸುಳ್ಳೇ ಮನೆ ದೇವರು ಆಗಿದೆ. ನಾವು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕೆ ಟೀಕೆ ಟಿಪ್ಪಣಿ ಮಾಡಲಿ. ಇನ್ನು ಐದು ವರ್ಷದಲ್ಲಿ ಇಬ್ಬರು ಸಿಎಂ ಆಗುತ್ತಾರೆಂಬ ವಿಚಾರ ಅಪ್ರಸ್ತುತವಾಗಿದೆ. ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ನೆರವು ಎಂದು ಹೇಳಿದರು.












Click it and Unblock the Notifications