ನಿಮ್ಮದೇನಿದ್ದರೂ ಅಲ್ಕೊ 'ಹಾಲು' ಅಲ್ವಾ: ಅಮೂಲ್‌ಗೆ ಬೆಂಬಲಿಸಿದ ಸಿಟಿ ರವಿಗೆ ಹಿಗ್ಗಾಮುಗ್ಗಾ ಉಗಿದ ಟ್ವೀಟಿಗರು

ಬೆಂಗಳೂರು, ಏಪ್ರಿಲ್‌ 08: ನಂದಿನಿ ( Nandini ) ಹಾಗೂ ಅಮೂಲ್‌ ( Amul ) ವಿವಾದ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ಹತ್ತಿರ ಇರುವಾಗಲೇ ಭುಗಿಲೆದ್ದ ವಿವಾದಕ್ಕೆ ತುಪ್ಪು ಸುರಿಯುವ ಕೆಲಸವನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ( BJP ) ಶಾಸಕ ಸಿಟಿ ರವಿ ( CT Ravi ) ಮಾಡಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿವಾದದ ಕುರಿತು ಟ್ವೀಟ್‌ ಮಾಡಿರುವ ಸಿಟಿ ರವಿ, 'ಗುಲಾಮರಿಗೆ ಇಟಾಲಿಯನ್ ಆಳ್ವಿಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಭಾರತೀಯ ಬ್ರಾಂಡ್ ಅಮುಲ್ ತನ್ನ ಉತ್ಪನ್ನಗಳನ್ನು ಇತರ ಹಲವು ಬ್ರಾಂಡ್‌ಗಳಂತೆ ಕರ್ನಾಟಕದಲ್ಲಿ ಮಾರಾಟ ಮಾಡುವಾಗ ಅವರಿಗೆ ಸಮಸ್ಯೆ ಆಗಿದೆ. ಅವರದ್ದು ಸೋತವರ ಗುಂಪು' ಎಂದು ಹೇಳಿದ್ದಾರೆ.

People Slam BJP MLA CT Ravi for supporting amul over nandini

ರವಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಚೈತನ್ಯ ಗೌಡ ಎಂಬುವವರು, 'ನೀವು ಗುಜ್ಜುಗಳ ಗುಲಾಮರು, ನಾವಲ್ಲ. ಹಿಂದುತ್ವ, ಬಾರತೀಯತೆ ಎಂಬ ಪೊಳ್ಳು ನಾಟಕಗಳ ಸೋಗಿನಲ್ಲಿ ಕನ್ನಡಿಗರನ್ನು ಮರಾಠಿಗರು, ಗುಜರಾತಿಗಳ ಗುಲಾಮರಾಗಿಸಲು ನೋಡುತ್ತಿದೆ ನಿಮ್ಮ ಆರೆಸ್ಸೆಸ್. ನಿಮ್ಮ ಹಿಂದುತ್ವಕ್ಕೆ ಬೆಂಕಿ ಹಾಕ. ಯಾವೋನಿಗ್ ಬೇಕು ನಿಮ್ಮ ಹಿಂದುತ್ವ? ನಮಗೆ ಗುಜರಾತಿಗಳೂ ಒಂದೇ, ಇಟಲಿಯವರೂ ಒಂದೇ ಕನ್ನಡದ ವಿಷಯಕ್ಕೆ ಬಂದರೆ' ಎಂದು ಹರಿಹಾಯ್ದಿದ್ದಾರೆ.

ಸಿಟಿ ರವಿಗೆ ಕಾಮೆಂಟ್‌ ಮಾಡಿರುವ ಮತ್ತೊಬ್ಬ ಟ್ವೀಟಿಗರು, 'ಭಾರತೀಯ ಬ್ರಾಂಡ್ ಅಮೂಲ್ ಅಂತೆ. ಕರ್ನಾಟಕದ ಬ್ರಾಂಡ್ ನಂದಿನಿ ಮತ್ತೆ ಅದನ್ನೇ ನಂಬಿಕೊಂಡು ಕೂತಿರೋ ಕರ್ನಾಟಕದ ರೈತರ ಬಾಯಿಗೆ ಮಣ್ಣು ಹಾಕ್ತೀರಾ? ಅಡ್ಮಿನ್ ನಿನ್ನಂದನೇ ಸಿಟಿ ರವಿ ಸೋಲ್ತಾರೆ ಈ ಸಲ. ನೋಡ್ತೀಯಂತೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

People Slam BJP MLA CT Ravi for supporting amul over nandini

'ಮೊದಲು ನಮ್ಮ ಭಾಷೆ, ನಮ್ಮ ನೆಲ, ನಮ್ಮ ಸಂಸ್ಕೃತಿ, ಆಮೇಲೆ ಭಾರತೀಯ ಇದನ್ನ ಮೊದಲ ತಿಳ್ಕೊ ನಿಮ್ಮಂಥವರಿಗೆಲ್ಲ ಚಿಕ್ಕಮಗಳೂರು ಜನ ವೋಟ್ ಹಾಕಿ ಗೆಲ್ಲುಸ್ತಾ ಇದ್ದಾರಲ್ಲ ಅವರಿಗೆ ಬುದ್ದಿ ಇಲ್ಲ' ಎಂದು ಅಗಸ್ತ್ಯ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

'ಇದೆ ಮಾತನ್ನ ಚಿಕ್ಕಮಗಳೂರಿನ ಹಳ್ಳಿಗಳಲ್ಲಿ KMF ಹಾಲು ಹಾಕ್ತರಲ್ಲ ರೈತರು ರೈತ ಮಹಿಳೆಯರ ಮುಂದೆ ಹೋಗಿ ಹೇಳಿ ಅಮುಲ್ ತರುಸ್ತುವಿ ನೀವು ಹಾಲು ಅಕ್ಬೇಡಿ KMF ಗೆ ಅಂತ. ಕರ್ನಾಟಕದಲ್ಲಿ ಹೈನಗಾರಿಕೆ KMF ನಂಬಿ ತುಂಬ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ ಇಗ ಅಮುಲ್ ತಂದ್ರೆ ಅವರ ಕತೆ ಏನ್ ಸ್ವಾಮಿ?' ಎಂದು ಮಂಜುನಾಥ ಎಂಬುವವರು ಕೇಳಿದ್ದಾರೆ.

'ಮಾನ್ಯರೆ ಇಂಗ್ಲೀಷ್ ಬ್ರಿಟೀಷರ ಭಾಷೆ, ವಿದೇಶಿ ಭಾಷೆ. ನಮ್ಮದಲ್ಲದ ಭಾಷೆಯಲ್ಲಿ ಯಾಕೆ ನೀವು ಟ್ವೀಟ್ ಮಾಡ್ತಿರಿ? ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಟ್ವೀಟ್ ಮಾಡಿ' ಎಂದು ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿರುವ ಸಿಟಿ ರವಿಗೆ ಪ್ರಖ್ಯಾತ್‌ ಪುತ್ತೂರು ಎಂಬುವವರು ಒತ್ತಾಯಿಸಿದ್ದಾರೆ.

People Slam BJP MLA CT Ravi for supporting amul over nandini

'ನಿಮ್ ಪ್ರಕಾರ ಕನ್ನಡದ ನಂದಿನಿ ಹಂಗಾದ್ರೆ ಭಾರತದಲ್ವಾ, ಏನು ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಕಂಪನಿ / ಸಂಸ್ಥೆಗಳು ಮಾತ್ರ ಭಾರತದ್ದಾ. ಸುದೀಪ್‌, ಕುಮಾರಸ್ವಾಮಿ ನೋಡಿ ಇಲ್ಲೊಮ್ಮೆ' ಎಂದು ನಟ ಕಿಚ್ಚ ಸುದೀಪ್‌ ಹಾಗೂ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿಗೆ ಟ್ಯಾಗ್‌ ಮಾಡಿದ್ದಾರೆ.

'ಕಸ್ತೂರಿ ಕರ್ನಾಟಕ ಉತ್ಪನ್ನಗಳು ಮೊದಲು. ನಂತರ ಇತರ ಉತ್ಪನ್ನಗಳು ಸನ್ಮಾನ್ಯ ರವಿ ಅವರೇ... ರಾಜ್ಯದ ಹಿತಾಸಕ್ತಿ ಮೊದಲ ಆದ್ಯತೆ ಆಗಬೇಕು ಅಲ್ಲವೇ? ಇದಕ್ಕೆ ಪೂರಕ ಆದ್ಯತೆ ಮೊದಲು ನಮ್ಮ ರಾಜ್ಯದ ಎಂಪಿ ಗಳು ಹಾಗೂ ಎಂಎಲ್‌ಎಗಳು ನೀಡಬೇಕು ಎಂದು ಕನ್ನಡಿಗರು ಬಯಸುವುದು ತಪ್ಪೆ?' ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+