ಬಜೆಟ್ ಬಗ್ಗೆ ಸಿದ್ದರಾಮಯ್ಯಗೆ ಸ್ವಂತ ಅಭಿಪ್ರಾಯ ಇರಬಹುದು: ಪರಮೇಶ್ವರ್
Recommended Video

ಬೆಂಗಳೂರು, ಜೂನ್ 25: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ಮಾಡಿದ್ದೇವೆ, ಕೆಲ ದಿನಗಳ ಬಳಿಕ ಸಿದ್ದರಾಮಯ್ಯ ಬರುತ್ತಾರೆ ಆಗ ಸಮನ್ವಯ ಸಮಿತಿ ಸಭೆ ಕರೆಯುತ್ತಾರೆ ಅಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ಸಿದ್ದರಮಾಯ್ಯ ಅವರನ್ನು ಭೇಟಿ ಮಾಡಿ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಬಜೆಟ್ ಬಗ್ಗೆ ಅಸಮಧಾನ ಇದೆಯೋ ಅಥವಾ ಮುಖ್ಯಮಂತ್ರಿಗಳಿಗೆ ಇದೆಯೋ , ಅಥವಾ ನನಗೆ ಇದೆಯೋ ಆ ಬಗ್ಗೆ ಚರ್ಚೆ ಮಾಡಲಾಗುತ್ತದೆ, ನಾನು ಬಜೆಟ್ ಬೇಕು ಅಂದಿದ್ದೇನೆ, ಅವರು ಬೇಡ ಎಂದು ಹೇಳಿರುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎನ್ನುವುದು ನಿಮ್ಮ ಕಲ್ಪನೆ ಎಂದರು.

ಬಜೆಟ್ ಮಂಡನೆ ಬೇಕು ಎಂದು ನಾನು ಹೇಳಿದ ಹಾಗೆ ಬೇಡ ಎನ್ನುವುದು ಅವರವರ ಅಭಿಪ್ರಾಯ ಅಭಿಪ್ರಾಯ ಎಲ್ಲರದ್ದೂ ಒಂದೇ ಆಗಿರುವುದಿಲ್ಲ, ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು, ಸಿದ್ದರಾಮಯ್ಯ ಅವರನ್ನು ಆರೋಗ್ಯದ ದೃಷ್ಟಿಯಿಂದ ಮಾತನಾಡಿಸಲು ಹೋಗಿದ್ದೆ, ಅವರು ಬಂದ ಬಳಿಕ ಸಮನ್ವಯ ಸಮಿತಿ ಸಭೆಯನ್ನು ಕರೆಯುತ್ತಾರೆ ಅಲ್ಲಿ ಇದೆಲ್ಲಾ ವಿಷಯಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.












Click it and Unblock the Notifications