Anke Gowda: 'ಪುಸ್ತಕ ಮನೆ'ಯ ಅಕ್ಷರ ಲೋಕದ ತಪಸ್ವಿ ಅಂಕೇಗೌಡರಿಗೆ 'ಪ್ರದ್ಮಶ್ರೀ' ಗೌರವ: ಯಾರಿವರು?, ಪುಸ್ತಕ ಪ್ರೇಮ ಹುಟ್ಟಿದ್ದೇಗೆ
ಬೆಂಗಳೂರು: ದೇಶದ ಉನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ 'ಪದ್ಮಶ್ರೀ ಪ್ರಶಸ್ತಿ 2026'ಯನ್ನು ಭಾರತ ಸರ್ಕಾರವು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕದ ಮಂಡ್ಯ ಜಿಲ್ಲೆಯ ಅಕ್ಷರ ಯೋಗಿ ಎಂ. ಅಂಕೇಗೌಡ (M Anke Gowda) ಅವರಿಗೆ ನೀಡಿ ಗೌರವಿಸಲಿದೆ. ಭಾನುವಾರ ಪದ್ಮಶ್ರೀ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಆಗಿದ್ದು, ಅದರಲ್ಲಿ ಅಂಕೇಗೌಡರ ಹೆಸರು ನೋಡುತ್ತಿದ್ದಂತೆ ರಾಜಕೀಯ ಗಣ್ಯರು ಹಾಗೂ ಆಪ್ತರು ಅವರಿಗೆ ಶುಭ ಕೋರಿದ್ದಾರೆ. ಒಂದು ಕಾಲದಲ್ಲಿ ಬಸ್ ಚಾಲಕರಾಗಿದ್ದ ಇವರ ಕನ್ನಡ, ಪುಸ್ತಕ ಪ್ರೇಮದಿಂದ ಹೆಚ್ಚು ಖ್ಯಾತಿ ಪಡೆದವರು. ತಮ್ಮ ಮನೆಯನ್ನು 'ಪುಸ್ತಕ ಮನೆ'ಯಾಗಿ ಪರಿವರ್ತಿಸಿ, ಗ್ರಾಮೀಣ ಭಾಗದ ಜನರ ಜ್ಞಾನದ ಹಸಿವು ನೀಗಿಸುತ್ತಿದ್ದಾರೆ. ಅವರ ಬಗೆಗಿನ ಒಂದಷ್ಟು ಮಾಹಿತಿ ಮುಂದಿದೆ.
ಪುಸ್ತಕಗಳನ್ನು ಜೀವನದ ಸರ್ವಸ್ವವೆಂದು ಪರಿಗಣಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿರು ಅವರು ಬೃಹತ್ 'ಪುಸ್ತಕ ಮನೆ'ಯನ್ನು ಸಾರ್ವಜನಿಕರಿಗೆ ತೆರೆದಿಟ್ಟಿದ್ದಾರೆ. ಮೂಲಗಳ ಪ್ರಕಾರ, 20 ಭಾಷೆಗಳ ಸುಮಾರು 20 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಅವರು ಸಂಗ್ರಹಿಟ್ಟಿದ್ದಾರೆ. ಅದಕ್ಕೆ ಅವರ ಪತ್ನಿ ಸಹ ಸದಾ ಅವರಿಗೆ ಸಹಕಾರ ನೀಡುತ್ತ ಬಂದಿದ್ದಾರೆ. ಅವರ ಈ ಪುಸ್ತಕ ಪ್ರೇಮವು 'ಲಿಮ್ಕಾ ಬುಕ್ ಆಫ್ ರೆಕಾಡ್ಸ್'ನಲ್ಲೂ ಸ್ಥಾನ ಪಡೆಯುವಂತೆ ಮಾಡಿದೆ.

ಜ್ಞಾನ ಹೆಚ್ಚಿಸುವ ಕಾರ್ಯದಲ್ಲಿ ಅಕ್ಷರ ಯೋಗಿ ನಿರತ
ಅಂಕೇಗೌಡ ಅವರು, ಪುಸ್ತಕಗಳನ್ನು ಮಾತ್ರವಲ್ಲದೇ ನಾಣ್ಯ, ಅಂಚೇ ಚೀಟಿ, ಅಪರೂಪ ಲಗ್ನ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ತಾವು ದುಡಿಯುವ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಈ ಪುಸ್ತಕಗಳ ಸಂಗ್ರಹಣೆ, ನಿರ್ವಹಣೆಗೆ ಖರ್ಚು ಮಾಡುತ್ತಿರುವ ವಿಶಿಷ್ಟ ಸಾಧಕರು ಇವರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಪುಸ್ತಕ ಪ್ರೀಯರಿಗೆ ಇವರು ಸ್ಪೂರ್ತಿಯಾಗಿದ್ದು, ಅವರಿಗೆ ಉದ್ಯಮಿಯಾದ ಹರಿಕೋಡೆ ಅವರು ವಿಶ್ವೇಶ್ವರ ನಗರದಲ್ಲಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ಆ ಮನೆಯನ್ನು ಬೃಹತ್ ಗ್ರಂಥಾಲಯವಾಗಿ, ನಾನಾ ಬಗೆಯ ಪುಸ್ತಕಗಳು ಲಭ್ಯವಾಗುವಂತೆ ಮಾಡಿದ್ದಾರೆ. ವರ್ಷಗಳಿಂದಲೂ ಜ್ಞಾನ ಹೆಚ್ಚಿವು ಕಾರ್ಯದಲ್ಲಿ ನಿರತರಾಗಿದ್ದಾರೆ.
ಜ್ಞಾನದ ಹಸಿವು ನೀಗಿಸುತ್ತಿದೆ 'ಪುಸ್ತಕ ಮನೆ'
ಪಾಂಡವಪುರದಲ್ಲಿರುವ ಅವರ 'ಪುಸ್ತಕ ಮನೆ' ನೀವೊಮ್ಮೆ ಕಾಲಿಟ್ಟರೆ, ಪುಸ್ತಕ ಪ್ರಪಂಚಕ್ಕೆ ಬಂದಿರುವಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿನ ಪುಸ್ತಕಗಳ ರಾಶಿ ಕಾಣಬಹುದಾಗಿದೆ. ಜ್ಞಾನದ ಹಸಿವುಳ್ಳವರಿಗೆ ಈ ಮನೆ ಕೈ ಬೀಸಿ ಕರೆಯುತ್ತದೆ. ಪುಸ್ತಕ ಸಂಗ್ರಹ, ಅದರ ಮೇಲಿನ ಪ್ರೇಮದಿಂದಲೇ ಇಂದು ಅಂಕೇಗೌಡರು ಎತ್ತರದ ಸ್ಥಾನಕ್ಕೇರಿದ್ದಾರೆ. ಸ್ವಂತ ಹಣ ಖರ್ಚು ಮಾಡಿ ಹಳ್ಳಿ ಭಾಗದಲ್ಲಿ ಬೃಹತ್ ಗ್ರಂಥಾಲಯ ಹುಟ್ಟು ಹಾಕಿದ ಈ ಸಾಧಕನಿಗೆ ಸರ್ಕಾರ 2026ನೇ ಸಾಲಿನ 'ಪದ್ಮಶ್ರೀ ಪ್ರಶಸ್ತಿ' ಗೆ ಆಯ್ಕೆ ಮಾಡಿದೆ.
ಒಂದು ಕಾಲದಲ್ಲಿ ಬಸ್ ಚಾಲಕರಾಗಿದ್ದ ಅಂಕೇಗೌಡ ಅವರ ಮನೆಯಲ್ಲಿಯೇ ಲಕ್ಷಾಂತರ ಪುಸ್ತಕಗಳನ್ನು ಉಚಿತವಾಗಿ ಓದಲು ಅವಕಾಶ ಇದೆ. ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಉಚಿತವಾಗಿ ಜ್ಞಾನದ ಹಸಿವು ನೀಗಿಸುತ್ತಿದ್ದಾರೆ. ಒಟ್ಟು 20ಕ್ಕೂ ಅಧಿಕ ಭಾಷೆಗಳ 20 ಲಕ್ಷಕ್ಕೂ ಅಧಿಕ ಪುಸ್ತಗಳು ಇವರ 'ಪುಸ್ತಕ ಮನೆ'ಯಲ್ಲಿವೆ. ಇವರು ಮನೆಯಲ್ಲಿಯೇ ಪುಸ್ತಕಗಳ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಇಂದಿನ ಪೀಳಿಗೆಗೆ ಎಲ್ಲ ವಿಧದ ಪುಸ್ತಕಗಳ ಮೂಲಕ ಜ್ಞಾನ ಹೆಚ್ಚಿಸುವಲ್ಲಿ ಅವರು ನಿರತರಾಗಿದ್ದಾರೆ. ಪುಸ್ತಕ ಸಂಗ್ರಹಿಸುವ ಕಾರ್ಯ ಇಂದಿಗೂ ಮುಂದುವರಿದಿದೆ.
ಈ 'ಪುಸ್ತಕ ಮನೆ'ಗೆ ಯಾರೇ ಭೇಟಿ ಕೊಟ್ಟರು ಅವರಿಗೆ ಇಷ್ಟವಾದ ಹಲವು ಪುಸ್ತಕಗಳು ಸಿಕ್ಕೇ ಸಿಗುತ್ತವೆ. ಅಷ್ಟರ ಮಟ್ಟಿಗೆ ರಾಶಿ ಪುಸ್ತಕಗಳನ್ನು ಇವರು ಸಂಗ್ರಹಿಸಿದ್ದಾರೆ. ವಿಶ್ವದ ಪ್ರಮುಖ ಗ್ರಂಥಗಳೂ ಈ ಮನೆಯಲ್ಲಿವೆ.
ಬಸ್ ಕಂಡಕ್ಟರ್ ವೃತ್ತಿಯಲ್ಲಿದ್ದಾಗಲೇ ಬಿಎ ಪದವಿ
ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಜನಿಸಿದ ಅಂಕೆಗೌಡರು ಅಲ್ಲಿಯೇ ಆರಂಭಿಕ ಶಿಕ್ಷಣ ಪಡೆದರು. ಬೆಳೆದು ದೊಡ್ಡವರಾದ ಮೇಲೆ ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ನಿರ್ವಾಹಕರಾಗಿ ವೃತ್ತಿ ಆರಂಭಿಸಿದರು. ಕೆಲಸ ಮಾಡಿಕೊಂಡೆ ಸಂಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವಾಗಲೇ ವೇತನದ ಬಹುಪಾಲು ಹಣವನ್ನು ಪುಸ್ತಕ ಖರೀದಿಗೆ ವ್ಯಯಿಸುತ್ತಿದ್ದ ಅಪರೂಪದ ವ್ಯಕ್ತಿತ್ವ ಇವರದ್ದು.
#WATCH | Padma Awards: Anke Gowda from Karnataka will be conferred the Padma Shri 2026 in the field of Literature and Education, as per sources
— ANI (@ANI) January 25, 2026
This year’s Padma Awards recognise a wide spectrum of unsung heroes from across the length and breadth of India. These include… pic.twitter.com/j6SaAleqST
ಅವರಿಗೆ ಪುಸ್ತಕ ಪ್ರೀತಿ ಹುಟ್ಟಿದ್ದು ಹೇಗೆ?
ಅಂಕೇಗೌಡರಿಗೆ ಈ ಪುಸ್ತಕಗಳ ಮೇಲೆ ಪ್ರೀತಿ, ಸಂಗ್ರಹಣೆಯ ಪ್ರವೃತ್ತಿ ಶುರುವಾಗಿದ್ದ ಅವರ ಶಾಲಾ ದಿನಗಳಲ್ಲಿ. ಅವರು ಶಾಲೆಗಳಲ್ಲಿ ಇದ್ದಾಗ ಗ್ರಂಥಾಲಯದಲ್ಲಿ ಇದ್ದ ಪುಸ್ತಕಗಳನ್ನು ಮನೆ ಒಯ್ಯಲು ಅನುಮತಿ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಅವರು ಬೇಸರಪಟ್ಟುಕೊಂಡಿದ್ದರು. ಅಂದಿನಿಂದಲೇ ಅವರು ಪುಸ್ತಕ ಸಂಗ್ರಹಿಸಲು ಆರಂಭಿಸಿದರು. ಅಂದಿನ ಅವರ ನಿರ್ಧಾರ ಇಂದು ಬೃಹತ್ ಗ್ರಂಥಾಲಯದಂತೆ 'ಪುಸ್ತಕ ಮನೆ' ನಿರ್ಮಾಣ, ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಿಂದ ಹಿಡಿದು ಇಂದಿನ 'ಪ್ರದ್ಮಶ್ರೀ ಪ್ರಶಸ್ತಿ'ಗೆ ಆಯ್ಕೆ ಆಗುವವರೆಗೆ ತಂದು ನಿಲ್ಲಿಸಿದೆ. ಪುಸ್ತಕ ಪ್ರಿಯರು ಮಾತ್ರವಲ್ಲದೇ ಅಪಾರ ಸಂಖ್ಯೆಯ ಜನರಿಂದ ಅವರಿಗೆ ಗೌರಿಗೆ ಸಿಗುವಂತೆ ಮಾಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications