ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಗಳಲ್ಲೂ 'ಆಕ್ಸಿಜನ್ ಬಸ್'

|
Google Oneindia Kannada News

ಬೆಂಗಳೂರು, ಮೇ 17; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರಿಗೆ ಸಹಾಯಕವಾಗಲು ಸಾರಿಗೆ ಇಲಾಖೆ ' ಆಕ್ಸಿಜನ್ ಬಸ್' ಸೇವೆ ಆರಂಭಿಸಿದೆ. ಬಸ್‌ಗಳಲ್ಲಿ ರೋಗಿಗಳು ಆಕ್ಸಿಜನ್ ಪಡೆಯಲು ವ್ಯವಸ್ಥೆಯನ್ನು ಮಾಡಲಾಗಿದೆ.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಮಾತನಾಡಿದ್ದು, "ಜಿಲ್ಲಾ ಮಟ್ಟಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳು, ಆಸ್ಪತ್ರೆಗಳು ಪ್ರಾಯೋಜಕತ್ವ ನೀಡಿದರೆ ಎಲ್ಲಾ ಜಿಲ್ಲೆಗಳಲ್ಲಿಯೂ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಂದ ಆಕ್ಸಿಜನ್ ಬಸ್ ಸೌಲಭ್ಯ ಒದಗಿಸಲು ಸಿದ್ಧ" ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿಗೂ ಬಂತು 'ಆಕ್ಸಿಜನ್ ಬಸ್'; ತುರ್ತು ಸಂದರ್ಭದಲ್ಲಿ ಸಹಕಾರಿ ಚಿಕ್ಕಮಗಳೂರಿಗೂ ಬಂತು 'ಆಕ್ಸಿಜನ್ ಬಸ್'; ತುರ್ತು ಸಂದರ್ಭದಲ್ಲಿ ಸಹಕಾರಿ

"ಒಂದು ಬಸ್ಸಿನಲ್ಲಿ 6-10 ಮಂದಿಗೆ ಆಕ್ಸಿಜನ್ ಪೂರೈಕೆ ಮಾಡುವುದು ಸಾಧ್ಯ. ಪ್ರಸ್ತುತ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಜಾಸ್ತಿಯಾಗಿರುವುದರಿಂದ ಸಹಜವಾಗಿಯೇ ಆಕ್ಸಿಜನ್ ಪೂರೈಕೆ ಕಷ್ಟಸಾಧ್ಯವಾಗುತ್ತಿದೆ" ಎಂದು ಸಚಿವರು ಹೇಳಿದರು.

ಆಕ್ಸಿಜನ್ ಮರು ಹಂಚಿಕೆ ಮಾಡಿ; ಕೇಂದ್ರಕ್ಕೆ ದಕ್ಷಿಣದ ರಾಜ್ಯಗಳ ಪತ್ರ ಆಕ್ಸಿಜನ್ ಮರು ಹಂಚಿಕೆ ಮಾಡಿ; ಕೇಂದ್ರಕ್ಕೆ ದಕ್ಷಿಣದ ರಾಜ್ಯಗಳ ಪತ್ರ

"ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಅಳವಡಿಸಿರುವ ಬಸ್ಸುಗಳನ್ನು ಆಸ್ಪತ್ರೆ ಬಳಿ ನಿಲ್ಲಿಸಿದರೆ ರೋಗಿಗಳಿಗೆ ತುರ್ತಾಗಿ ಬಂದು ಅಲ್ಲಿ ವಿಶ್ರಮಿಸಲು ಮತ್ತು ಆಕ್ಸಿಜನ್ ಪಡೆದು ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂಥಾ ಪ್ರಯೋಗಗಳು ಈಗಾಗಲೇ ಬೆಂಗಳೂರಿನಲ್ಲಿ ಯಶಸ್ಸು ಕಂಡಿವೆ" ಎಂದು ಸಚಿವರು ವಿವರಿಸಿದರು.

ತುರ್ತು ಸೌಲಭ್ಯಕ್ಕೆ 'ಆಕ್ಸಿಜನ್ ಆನ್ ವೀಲ್ಸ್' ಬಸ್ ಸೇವೆಗೆ ಬಿಎಂಟಿಸಿ ಚಾಲನೆತುರ್ತು ಸೌಲಭ್ಯಕ್ಕೆ 'ಆಕ್ಸಿಜನ್ ಆನ್ ವೀಲ್ಸ್' ಬಸ್ ಸೇವೆಗೆ ಬಿಎಂಟಿಸಿ ಚಾಲನೆ

ಬಸ್ ಮತ್ತು ಚಾಲಕರನ್ನು ನೀಡಲಾಗುತ್ತದೆ

ಬಸ್ ಮತ್ತು ಚಾಲಕರನ್ನು ನೀಡಲಾಗುತ್ತದೆ

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು "ಒಂದು ವೇಳೆ ಸ್ವಯಂಸೇವಾ ಸಂಸ್ಥೆಗಳು ಆರೋಗ್ಯ ಸಿಬ್ಬಂದಿಗಳೊಂದಿಗೆ ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಒದಗಿಸಿಕೊಟ್ಟರೆ ಉಚಿತವಾಗಿ ಬಸ್ಸುಗಳನ್ನು ಮತ್ತು ಚಾಲಕರನ್ನು ನಮ್ಮ ಸಾರಿಗೆ ನಿಗಮಗಳಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ

ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ

"ಈ ಹಿನ್ನಲೆಯಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಆಕ್ಸಿ ಬಸ್ಸುಗಳನ್ನು ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ತಾವು ಸೂಚಿಸಲಾಗಿದೆ. ಈ ಬಗ್ಗೆ ಅಗತ್ಯವಿದ್ದವರು ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು" ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸಂಸ್ಥೆಯೊಂದು ಮುಂದೆ ಬಂದಿದೆ

ಸಂಸ್ಥೆಯೊಂದು ಮುಂದೆ ಬಂದಿದೆ

"ಹೈದರಾಬಾದ್ ಮೂಲದ ಸೇವಾ ಸಂಸ್ಥೆಯೊಂದು ನಮ್ಮ ಸಾರಿಗೆ ನಿಗಮಗಳ ಸಹಯೋಗದಲ್ಲಿ ಆಕ್ಸಿಜನ್ ಬಸ್ಸುಗಳ ಸೇವೆಯನ್ನು ಪ್ರಾರಂಭಿಸಲು ಮುಂದೆ ಬಂದಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ಈ ಜಂಟಿ ಪ್ರಯತ್ನ ಕೈಗೂಡಿದರೆ ರಾಜ್ಯಾದ್ಯಂತ ಮತ್ತಷ್ಟು ಹೆಚ್ಚಿನ ಮಂದಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ" ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Recommended Video

ಟೀ ಕುಡಿಯೋದ್ರಿಂದ ಕೊರೊನಾ‌ ಸೋಂಕು ತಡೆಗಟ್ಟಬಹುದಾ? | Oneindia Kannada
ಚಿಕ್ಕಮಗಳೂರಿನಲ್ಲಿ ಇಂದು ಆರಂಭ

ಚಿಕ್ಕಮಗಳೂರಿನಲ್ಲಿ ಇಂದು ಆರಂಭ

ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ಸೋಂಕಿತರ ಸಹಾಯಕ್ಕೆ ಮುಂದಾಗಿದೆ. ಇದಕ್ಕಾಗಿ 'ಆಕ್ಸಿಜನ್ ಬಸ್' ವ್ಯವಸ್ಥೆಗೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸೋಮವಾರ ಚಿಕ್ಕಮಗಳೂರಿನಲ್ಲಿ ಆಕ್ಸಿಜನ್ ಬಸ್ ಸೇವೆ ಆರಂಭವಾಗಲಿದೆ.

English summary
Transport minister Lakshman Savadi said that we are ready to start oxygen on wheel service with the help of private partnership in all districts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X