Get Updates
Get notified of breaking news, exclusive insights, and must-see stories!

ಹಳೆಯ ವಾಹನಗಳ ಸಂಖ್ಯೆಯಲ್ಲಿ ದೇಶದಲ್ಲಿ ಕರ್ನಾಟಕವೇ ನಂಬರ್ 1

ಬೆಂಗಳೂರು, ಮಾರ್ಚ್ 29: ಹದಿನೈದಕ್ಕಿಂತ ಹೆಚ್ಚು ವರ್ಷ ಹಳೆಯದಾದ 4 ಕೋಟಿಗೂ ಹೆಚ್ಚು ವಾಹನಗಳು ದೇಶಾದ್ಯಂತ ಸಂಚರಿಸುತ್ತಿವೆ.

ಈ ಪೈಕಿ 70 ಲಕ್ಷಕ್ಕೂ ಅಧಿಕ ವಾಹನಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಪ್ರಸ್ತಾಪವನ್ನು ಅದು ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದು, ಅದರ ಬೆನ್ನಲ್ಲೇ ಇಂತಹ ತೆರಿಗೆ ವ್ಯಾಪ್ತಿಗೆ ಒಳಪಡುವ ವಾಹನಗಳ ರಾಜ್ಯವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಸಿರು ತೆರಿಗೆ ಯಾವ ವಾಹನಗಳಿಗೆ ಅನ್ವಯ

ಹಸಿರು ತೆರಿಗೆ ಯಾವ ವಾಹನಗಳಿಗೆ ಅನ್ವಯ

8 ವರ್ಷಕ್ಕಿಂತ ಹಳೆಯ ಸಾರಿಗೆ ವಾಹನಗಳು, 15 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಗಳಿಗೆ ಫಿಟ್‌ನೆಸ್ ಪರೀಕ್ಷೆ ವೇಳೆ ರಸ್ತೆ ತೆರಿಗೆಯ ಶೇ.10 ರಿಂದ ಶೇ.25ರಷ್ಟು ಹಸಿರು ತೆರಿಗೆ ವಿಧಿಸಲಾಗುತ್ತದೆ.

ಕೇಂದ್ರೀಕೃತ 'ವಾಹನ್' ದತ್ತಾಂಶ

ಕೇಂದ್ರೀಕೃತ 'ವಾಹನ್' ದತ್ತಾಂಶ

ಕೇಂದ್ರೀಕೃತ ವಾಹನ್ ದತ್ತಾಂಶಗಳ ಅನ್ವಯ, 15 ವರ್ಷಕ್ಕೂ ಹಳೆಯದಾದ 4 ಕೋಟಿಗೂ ಹೆಚ್ಚಿನ ವಾಹನಗಳು ಸದ್ಯ ದೇಶಾದ್ಯಂತ ಸಂಚರಿಸುತ್ತಿವೆ. ಈ ಪೈಕಿ 2 ಕೋಟಿ ವಾಹನಗಳ ಪೈಕಿ 70 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ(56.54ಲಕ್ಷ), ದೆಹಲಿ(49.93 ಲಕ್ಷ), ಕೇರಳ( 34.64 ಲಕ್ಷ), ತಮಿಳುನಾಡು( 33.43 ಲಕ್ಷ), ಪಂಜಾಬ್ (25.83 ಲಕ್ಷ), ಪಶ್ಚಿಮ ಬಂಗಾಳ( 22.69 ಲಕ್ಷ) ವಾಹನಗಳನ್ನು ಹೊಂದಿದೆ. ಇನ್ನು ಮಹಾರಾಷ್ಟ್ರ, ಒಡಿಶಾ, ಹರ್ಯಾಣ ಸರಾಸರಿ 13 ರಿಂದ 18 ಲಕ್ಷದಷ್ಟು ವಾಹನಗಳನ್ನು ಹೊಂದಿದೆ.

ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ತೆರಿಗೆ ಪ್ರಮಾಣ ಕಡಿಮೆ

ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ತೆರಿಗೆ ಪ್ರಮಾಣ ಕಡಿಮೆ

ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ತೆರಿಗೆ ಪ್ರಮಾಣ ಕಡಿಮೆ ಇರಲಿದೆ. ಹೆಚ್ಚಿನ ಮಾಲಿನ್ಯ ಇರುವ ನಗರಗಳಲ್ಲಿ ತೆರಿಗೆ ಪ್ರಮಾಣ ಶೇ. 50ರವರೆಗೂ ಇರಲಿದೆ. ಹೈಬ್ರಿಡ್, ಎಲೆಕ್ಟ್ರಿಕ್, ಸಿಎನ್‌ಜಿ, ಎಲ್‌ಪಿಜಿ, ಕೃಷಿ ಚಟುವಟಿಕೆಗಳಿಗೆ ಬಳಸುವ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ ಇರಲಿದೆ.

ಪರಿಸರ ಮಾಲಿನ್ಯ ತಡೆಯಲು ಕ್ರಮ

ಪರಿಸರ ಮಾಲಿನ್ಯ ತಡೆಯಲು ಕ್ರಮ

ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಪ್ರಸ್ತಾಪವನ್ನು ಅದು ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದು, ಅದರ ಬೆನ್ನಲ್ಲೇ ಇಂತಹ ತೆರಿಗೆ ವ್ಯಾಪ್ತಿಗೆ ಒಳಪಡುವ ವಾಹನಗಳ ರಾಜ್ಯವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+