Opposition Meeting Bengaluru LIVE: ಯುಪಿಎ ಮೈತ್ರಿಕೂಟದ ಸಭೆ ಮುಕ್ತಾಯ, ಯುಪಿಎ ಇನ್ನು ಮುಂದೆ INDIA

ಬೆಂಗಳೂರು,

ಜುಲೈ
17:
ಮುಂಬರುವ
ಲೋಕಸಭಾ
ಚುನಾವಣೆಯನ್ನು
ದೃಷ್ಟಿಯಲ್ಲಿ
ಇಟ್ಟುಕೊಂಡು
ವಿಪಕ್ಷಗಳ
ಎರಡನೇ
ಸಭೆ
ಕರ್ನಾಟಕದ
ರಾಜಧಾನಿ
ಬೆಂಗಳೂರಿನಲ್ಲಿ
ಸೋಮವಾರ
(ಜು
17)
ಆರಂಭವಾಗಲಿದೆ.
ನಗರದ
ರೇಸ್
ಕೋರ್ಸ್
ರಸ್ತೆಯಲ್ಲಿರುವ
ತಾಜ್
ವೆಸ್ಟ್
ಎಂಡ್
ಪಂಚತಾರಾ
ಹೋಟೆಲ್‌ನಲ್ಲಿ
ಸಭೆ
ನಡೆಯಲಿದೆ.
ವಿವಿಧ
ಪಕ್ಷಗಳ
ಹಲವಾರು
ಮುಖಂಡರು
ಈಗಾಗಲೇ
ಬೆಂಗಳೂರಿಗೆ
ಆಗಮಿಸಿದ್ದಾರೆ.
ಇಂದು
ಮತ್ತಷ್ಟು
ನಾಯಕರು
ಸೇರಿಕೊಳ್ಳಲಿದ್ದಾರೆ.
ವಿಪಕ್ಷಗಳ
ಸಭೆಯ
ಅಪ್ಡೇಟ್ಸ್
ಅನ್ನು
ಲೈವ್
ಬ್ಲಾಗ್
ಮೂಲಕ
ನೀಡಲಾಗುತ್ತದೆ.

id="toptextpromo">
id='are-slot-1'
class='oiad
oi-axt
oiadv'>

Jul 18, 2023, 7:39 pm IST

Eat INDIA Company!

ಹೊಸ ಹೆಸರಿನ ಹಳೆ ಭ್ರಷ್ಟರ ಕೂಟ ಭಾರತೀಯರನ್ನು ವಂಚಿಸಲು ಸಂಚು ರೂಪಿಸಿದೆ
Jul 18, 2023, 7:24 pm IST

ಇವತ್ತಿನ INDIA ಒಕ್ಕೂಟದ ಮೀಟಿಂಗ್ ವಾಯ್ಸ್ ಆಫ್ ಇಂಡಿಯಾ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Jul 18, 2023, 5:13 pm IST

ಮೋದಿ ಸಾಧ್ಯವಾದರೆ ಇಂಡಿಯಾವನ್ನು ಎದುರಿಸಲಿ- ಖರ್ಗೆ ಸವಾಲ್

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾಘಟಬಂಧನ್‌ ಸಭೆಯನ್ನು ಬೆಂಗಳೂರಿನಲ್ಲಿ ವಿಪಕ್ಷಗಳು ಎರಡು ದಿನ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಒಗ್ಗೂಡಿದ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಅನ್ನೋ ಹೆಸರೇ ನಮ್ಮ ಮೊದಲ ಜಯ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಸಾಧ್ಯವಾದರೆ 'ಇಂಡಿಯಾ'ವನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
Jul 18, 2023, 5:03 pm IST

ರಾಹುಲ್ ಗಾಂಧಿ ಭಾಷಣ

ಇದು ಎರಡು ಪಕ್ಷಗಳ ನಡುವಿನ ಫೈಟ್ ಅಲ್ಲ, ನಮ್ಮ ದೇಶದ ಸಿದ್ದಾಂತವನ್ನು ಉಳಿಸಿಕೊಳ್ಳುವ ಹೋರಾಟ - ರಾಹುಲ್ ಗಾಂಧಿ.
Jul 18, 2023, 4:49 pm IST

"ಎನ್‌ಡಿಎ, ನೀವು ಇಂಡಿಯಾ (ಐಎನ್‌ಡಿಐಎ)ಗೆ ಸವಾಲು ಹಾಕಬಹುದೇ?" ಬಿಜೆಪಿ ನೀವು ಇಂಡಿಯಾಗೆ ಚಾಲೆಂಜ್ ಮಾಡುತ್ತಿರಾ?. ನಾವು ನಮ್ಮ ತಾಯ್ನಾಡನ್ನು ಪ್ರೀತಿಸುತ್ತೇವೆ. ಇಂದು ನಾವಿದ್ದೇವೆ. ಭವಿಷ್ಯದಲ್ಲಿಯೂ ನಿಮ್ಮ ಜೊತೆಗಿದ್ದೇವೆ. ರೈತರ ಜೊತೆಗಿದ್ದೇವೆ, ಪೊಲೀಸರ ಜೊತೆಗಿದ್ದೇವೆ. ದೇಶದ ಜೊತೆಗಿದ್ದೇವೆ" ಎಂದು ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
Jul 18, 2023, 4:48 pm IST

ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದೇನು?

ನಾವು ದೇಶವನ್ನು ಸುರಕ್ಷಿತವಾಗಿ ಇಡಲು ಬಯಸುತ್ತೇವೆ. ಮುಂದೆ ನಾವು ಆಗಸ್ಟ್ 6ರಂದು ಮುಂಬೈನಲ್ಲಿ ಸಭೆ ಮಾಡುತ್ತೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದರು.
Jul 18, 2023, 4:47 pm IST

ದೇಶದ ಧ್ವನಿಯನ್ನು ಅಡಗಿಸುತ್ತಿರುವವರ ಜೊತೆಗೆ ಹೋರಾಟ- ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾಘಟಬಂಧನ್ ಸಭೆ ಬಳಿಕ ಮಾತನಾಡಿದರು. 'ಇವತ್ತು ಮಹತ್ವದ ಚರ್ಚೆ ಆಗಿದೆ. ದೇಶದ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಬಿಜೆಪಿ ಅವರು ದೇಶವನ್ನು ಮಾರುತ್ತಿದ್ದಾರೆ, ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ದೇಶದ ಧ್ವನಿಯನ್ನು ಅಡಗಿಸುತ್ತಿರುವವರ ಜೊತೆಗೆ ಹೋರಾಟ ಮಾಡುತ್ತಿದ್ದೇವೆ. ದೇಶಕ್ಕಾಗಿ ಮುಂದೇನು ಮಾಡಬೇಕು ಎಂದು ಚರ್ಚಿಸಲು ಮುಂದಿನ ಸಭೆ ಮಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
Jul 18, 2023, 4:38 pm IST

ದೇಶದಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ- ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ

26 ಪಕ್ಷಗಳ ನಾಯಕರು ಸಭೆ ಸೇರಿ ಚರ್ಚಿಸಿದ್ದೇವೆ. ದೇಶದಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ. ಹೀಗಾಗಿ ನಾವು ಸೇರಿ ದೇಶವನ್ನು ಮುನ್ನಡೆಸಲು ನಿರ್ಧರಿಸಿದ್ದೇವೆ. ಬಿಜೆಪಿಯವರು ದೇಶ ಮಾರುವ ಒಪ್ಪಂದ ಮಾಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.
Jul 18, 2023, 4:36 pm IST

ಕೇಂದ್ರ ಸರ್ಕಾರ ವಿರುದ್ಧ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ

ಮಹಾಘಟಬಂಧನ್‌ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದರು. ಸಭೆಯಲ್ಲಿ ಮೈತ್ರಿಕೋಟಕ್ಕೆ INDIA ಹೆಸರೇ ಫೈನಲ್. I ಅಂದರೆ Indian, N-National, D- Developmental, I- Inclusive, A- Alliance ಎಂದು ನಾಮಕರಣ ಮಾಡಲಾಗಿದೆ. ನೀವು 'ಇಂಡಿಯಾ' ಎಂದು ಹೇಳಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ದೇಶದಲ್ಲಿ ಪ್ರತಿಯೊಬ್ಬರೂ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ದೇಶವೇ ನಮಗೆ ಮುಖ್ಯ ಹೀಗಾಗಿ ನಾವು ಒಂದಾಗಬೇಕಿದೆ. ರಿಯಲ್ ಚಾಲೆಂಜ್ ಎದುರಿಸಲು ನಾವು ಸಿದ್ದ ಎಂದು ಹೇಳಿದರು.
Jul 18, 2023, 4:29 pm IST

ಆಗಸ್ಟ್ 6ರಂದು ಮುಂಬೈನಲ್ಲಿ ಮುಂದಿನ ಸಭೆ ನಡೆಸಲು ನಿರ್ಧಾರ

ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದೆ. ಬಿಜೆಪಿ ಸರ್ಕಾರದ ದೌರ್ಬಲ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ. ವಿಪಕ್ಷಗಳನ್ನು ಕಂಡು ಪ್ರಧಾನಿ ಹೆದರಿದ್ದಾರೆ. ವಿಪಕ್ಷಗಳ ಮಹಾಮೈತ್ರಿಕೂಟಕ್ಕೆ INDIA ಎಂದು ನಾಪಕರಣ ಮಾಡಲಾಗಿದೆ. ಆಗಸ್ಟ್ 6ರಂದು ಮುಂಬೈನಲ್ಲಿ ಮುಂದಿನ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Jul 18, 2023, 4:03 pm IST

ಯುಪಿಎ ಮೈತ್ರಿಕೂಟದ ಸಭೆ ಮುಕ್ತಾಯ

ಯುಪಿಎ ಮೈತ್ರಿಕೂಟದ ಸಭೆ ಮುಕ್ತಾಯ. ಚಕ್ ದೇ ಇಂಡಿಯಾ ಎಂದು ಟಿಎಂಸಿ ನಾಯಕನ ಟ್ವೀಟ್. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ, ಮೂವತ್ತು ನಾಯಕರಿಗೆ ವೇದಿಕೆಯಲ್ಲಿ ಕೂರಲು ಅವಕಾಶ.
Jul 18, 2023, 2:33 pm IST

ದೇಶದ ಹಲವು ದಿಗ್ಗಜ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ, ಈ ಬೆಳವಣಿಗೆಯಿಂದ ಬಿಜೆಪಿಗೆ ನಡುಕ ಹುಟ್ಟಿದೆ
Jul 18, 2023, 2:29 pm IST

ಅರವಿಂದ್ ಕೇಜ್ರಿವಾಲ್

ಪ್ರಧಾನಿ ಮೋದಿ ತಮ್ಮ 10 ವರ್ಷಗಳ ಆಡಳಿತದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಸಂಪೂರ್ಣವಾವಿ ಆರ್ಥಿಕವಾಗಿ ಅವ್ಯವಸ್ಥೆಗೊಳಿಸಿದ್ದಾರೆ. ಅವರನ್ನು ತೊಲಗಿಸುವ ಸಮಯ ಬಂದಿದೆ ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.
Jul 18, 2023, 2:16 pm IST

ಯುಪಿಎ ಮೈತ್ರಿಕೂಟದ ಮರು ನಾಮಕರಣ ಸಾಧ್ಯತೆ

ಯುಪಿಎ ಮೈತ್ರಿಕೂಟದ ಮರು ನಾಮಕರಣ ಸಾಧ್ಯತೆ. ವಿಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ, ಯುಪಿಎ ಸೇರಿದಂತೆ ಮತ್ತೆ ಮೂರು ಹೆಸರು ಸಭೆಯಲ್ಲಿ ಪ್ರಸ್ತಾವ. ಪಿಡಿಎ - ಪ್ರೊಗ್ರೆಸ್ಸೀವ್ ಡೆಮೊಕ್ರೆಟಿಕ್ ಅಲಯನ್ಸ್ : I N D I A - ಇಂಡಿಯನ್ ನ್ಯಾಷನಲ್ ಡೆಮೊಕ್ರೆಟಿಕ್ ಇನ್ಕ್ಲೂಸೀವ್ ಅಲಯನ್ಸ್ ಮತ್ತು ಎನ್ ಸಿಐ, ಈ ಮೂರು ಹೆಸರ ಶಿಫಾರಸು.
Jul 18, 2023, 1:15 pm IST

ನಮ್ಮ ನಾಯಕರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆ

'ಪ್ರತಿಯೊಂದು ಸಂಸ್ಥೆಗಳನ್ನೂ ಪ್ರತಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿದೆ. ನಮ್ಮ ನಾಯಕರ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಅವರು ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿಕೊಳ್ಳುವಂತೆ ಮಾಡಲಾಗುತ್ತಿದೆ' ವಿಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
Jul 18, 2023, 1:12 pm IST

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಿತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಮಾತನಾಡಿ, ಪಕ್ಷ ಪ್ರಧಾನ ಮಂತ್ರಿ ಹುದ್ದೆಯ ಅಧಿಕಾರದಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ. ಸೋಮವಾರದಿಂದ ವಿರೋಧ ಪಕ್ಷಗಳ ಸಭೆ ನಡೆಯುತ್ತಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹ ಪಾಲ್ಗೊಂಡಿದ್ದಾರೆ.
Jul 18, 2023, 12:53 pm IST

ವಿಪಕ್ಷಗಳ ಸಭೆಯಲ್ಲಿ ಶರದ್ ಪವಾರ್

ವಿಪಕ್ಷಗಳ ಸಭೆಯಲ್ಲಿ ಶರದ್ ಪವಾರ್
ವಿಪಕ್ಷಗಳ ಸಭೆಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಮ್ಯೂನಿಸ್ಟ್ ನಾಯಕ ಡಿ.ರಾಜ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ.
Jul 18, 2023, 11:33 am IST

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬಿಜೆಪಿ ವಿರೋಧಿ ಗುಂಪುಗಳ ರಚನೆ, ಸಾಮಾನ್ಯ ಕಾರ್ಯಸೂಚಿಯನ್ನು ರೂಪಿಸಲು ಪ್ರತ್ಯೇಕ ಸಮಿತಿ, ಪ್ರಚಾರ ಕಾರ್ಯಕ್ರಮ, ಸೀಟು ಹಂಚಿಕೆಯ ಮಾರ್ಗಸೂಚಿಯ ಲೆಕ್ಕಾಚಾರ ಮುಂತಾದ ಪ್ರಮುಖ ಅಂಶಗಳ ರೂಪುರೇಷೆಯ ಬಗ್ಗೆ ಚರ್ಚೆ ನಡೆಯಲಿದೆ.
Jul 18, 2023, 11:09 am IST

ಮಹಾಘಟಬಂಧನ್‌ ಸಭೆಗೆ ಹಿರಿಯ ಐಎಎಸ್ ಅಧಿಕಾರಿಗಳ ಬಳಕೆ: ಬಿವೈ ವಿಜಯೇಂದ್ರ ಆರೋಪ

ಮಹಾಘಟಬಂಧನ್‌ ಸಭೆಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವುದನ್ನು ನಾವು ವಿರೋಧ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ವಿಧಾಸಸೌಧದಲ್ಲಿ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಇಡೀ ಜಗತ್ತನ್ನೇ ಗೆದ್ದು ಬಂದಂತೆ ಆಡುತ್ತಿದ್ದಾರೆ. ಇದಕ್ಕೆಲ್ಲ ಉತ್ತರ ಲೋಕಸಭೆ ಚುನಾವಣೆ ಸಿಗಲಿದೆ ಎಂದು ಹೇಳಿದರು.
Jul 18, 2023, 10:33 am IST

ಅವಕಾಶವಾದಿಗಳ ಸಭೆ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ
Jul 18, 2023, 10:32 am IST

ಲೋಕಸಭಾ ಚುನಾವಣೆಗೆ ಮುನ್ನ ಬಲಾಬಲ ಪ್ರದರ್ಶನ

ದೆಹಲಿ ಗದ್ದುಗೆ ಏರಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ರಾಜಕೀಯ ಪಕ್ಷಗಳು
Jul 18, 2023, 10:15 am IST

ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲ ವಿರೋಧ ಪಕ್ಷಗಳು ರೂಪುರೇಷೆ ಸಿದ್ದಪಡಿಸಲು ಆಗಮಿಸುತ್ತಿದ್ದು, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವಿಕೆ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
Jul 18, 2023, 10:04 am IST

ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲ ವಿರೋಧ ಪಕ್ಷಗಳು ರೂಪುರೇಷೆ ಸಿದ್ದಪಡಿಸಲು ಆಗಮಿಸುತ್ತಿದ್ದು, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವಿಕೆ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
Jul 18, 2023, 8:53 am IST

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ದ ಬೆಂಗಳೂರಿನ ರಸ್ತೆಯಲ್ಲಿ ಪೋಸ್ಟರುಗಳು. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಯಲ್ಲಿ ನಿತೀಶ್ ಕುಮಾರ್ ಭಾಗವಹಿಸಿದ್ದಾರೆ.
Jul 18, 2023, 7:49 am IST

ಮಹಾಮೈತ್ರಿಕೂಟದ ನೇತೃತ್ವ ವಹಿಸಲು ಕಾಂಗ್ರೆಸ್ ಉತ್ಸುಕ

ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಚುನಾವಣೆ ವಿಷಯಗಳನ್ನು ನಿರ್ಧರಿಸಲು ಸಂಚಾಲಕರನ್ನು ನೇಮಿಸಿ, ವಿವಿಧ ತಂಡಗಳನ್ನು ರಚಿಸುವ ಬಗ್ಗೆ ಚರ್ಚೆಗಳು ಆಗಲಿವೆ. ಪ್ರತಿಪಕ್ಷಗಳಲ್ಲಿಯೇ ದೊಡ್ಡ ಪಕ್ಷವಾದ ಕಾಂಗ್ರೆಸ್ ತಾನೇ ಹೊಸ ಮೈತ್ರಿಕೂಟದ ನೇತೃತ್ವದ ವಹಿಸಿಕೊಳ್ಳಲು ಉತ್ಸುಕವಾಗಿದೆ.
Jul 18, 2023, 7:40 am IST

ಎರಡನೇ ದಿನ: ಸಭೆ ಬಳಿಕ ಮಹತ್ವದ ಘೋಷಣೆ?

ಕೇಂದ್ರ ವಿರೋಧ ಪಕ್ಷಗಳ ಸಭೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಂಗಳವಾರ ಬೆಂಗಳೂರಿನಲ್ಲಿ ಮಹಾಮೈತ್ರಿಕೂಟದ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ತಂತ್ರೋಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ. ದಿನವಿಡೀ ಸಭೆ ಬಳಿಕ ಮಹತ್ವದ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ.
Jul 17, 2023, 9:09 pm IST

ವಿಪಕ್ಷಗಳ ನಾಯಕರಿಗೆ ಸಿದ್ದರಾಮಯ್ಯ ಡಿನ್ನರ್ ಪಾರ್ಟಿ

ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆಯುತ್ತಿರುವ ಔತಣಕೂಟದಲ್ಲಿ ನಲವತ್ತಕ್ಕೂ ಹೆಚ್ಚು ನಾಯಕರು ಭಾಗಿ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಂ.ಕೆ.ಸ್ಟಾಲಿನ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಜರಿ.
Jul 17, 2023, 8:45 pm IST

ಸಭೆಗೆ ಆಗಮಿಸಿದ ಲಾಲೂ ಪ್ರಸಾದ್ ಯಾದವ್

ಸಭೆಗೆ ಆಗಮಿಸಿದ ನಾಯಕರನ್ನು ಖುದ್ದು ನಿಂತು ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪುತ್ರ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಕೂಡಾ ಸಭೆಯಲ್ಲಿ ಭಾಗಿ.
Jul 17, 2023, 8:44 pm IST

ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ವಿಪಕ್ಷಗಳ ಸಭೆ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ವಿಪಕ್ಷಗಳ ಸಭೆ ಆರಂಭ. ಸಭೆಯಲ್ಲಿ ಬಹುತೇಕ ಎನ್ಡಿಎ ಮೈತ್ರಿಕೂಟ ಹೊರತಾದ ಪಕ್ಷಗಳ ಮುಖಂಡರು ಭಾಗಿ.
Jul 17, 2023, 5:43 pm IST

'ಎಲ್ಲರೂ ಆತಂಕದಿಂದ ಬದುಕುತ್ತಿರುವುದೇ ಬಿಜೆಪಿಯ ಕೊಡುಗೆ'

ದೇಶವನ್ನು ಲೂಟಿ ಮಾಡಿದಂತಹ ಪಕ್ಷಗಳು ಇಂದು ಒಂದಾಗುತ್ತಿವೆ ಎಂಬ ಬಿಜೆಪಿ ಪಕ್ಷದ ಹೇಳಿಕೆಗೆ ಉತ್ತರ ನೀಡುತ್ತಾ, ಈ ದೇಶದ ಆರ್ಥಿಕತೆಯನ್ನು ಹಾಳು ಮಾಡಿದವರೇ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿಯವರು ಬಂದ ನಂತರ ಬೆಲೆ ಏರಿಕೆ, ಬಡವರು, ರೈತರು, ದಲಿತರು ಇಂದು ಬದುಕಲು ಅಸಾಧ್ಯವಾದ ಪರಿಸ್ಥಿತಿ ಬಂದಿದೆ. ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುವಂತಾಗಿದೆ. ಇದು ಬಿಜೆಪಿಯ ಕೊಡುಗೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+