ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‌ಗೆ ಲಿಖಿತ ದೂರು

Recommended Video

      ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಬೇಡ , ಹೈ ಕಮಾಂಡ್ ಗೆ ದೂರು | Oneindia Kannada

      ಬೆಂಗಳೂರು, ಸೆಪ್ಟೆಂಬರ್ 09 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ವಿರುದ್ಧ ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದಾರೆ.

      ಮೈತ್ರಿ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಕಾರಣ ಎಂಬ ವಿಚಾರದ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಾತಿನ ಸಮರ ದೆಹಲಿ ಮಟ್ಟಕ್ಕೆ ತಲುಪಿತ್ತು. ಹೈಕಮಾಂಡ್ ನಾಯಕರ ಸೂಚನೆ ಬಳಿಕ ಎಲ್ಲರೂ ಮೌನಕ್ಕೆ ಶರಣಾಗಿದ್ದರು.

      ಈಗ ಸಿದ್ದರಾಮಯ್ಯ ವಿರುದ್ಧ ಪಕ್ಷದ ಅಧ್ಯಕ್ಷರಾಗಿ ದೂರು ನೀಡಲಾಗಿದೆ. ಗಮನಿಸಬೇಕಾದ ಅಂಶವೆಂದರೆ ದೂರು ನೀಡಿರುವವರು ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರು.

      ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‌ ಹೊಸಬರನ್ನು ತರಲು ಚಿಂತನೆ ನಡೆಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಬಾರದು ಎಂಬುದು ಕೆಲವು ಹಿರಿಯ ನಾಯಕರ ಒತ್ತಾಯ. ಇದಕ್ಕೆ ಪೂರಕವಾದ ಅಂಶಗಳನ್ನು ಉಲ್ಲೇಖಿಸಿ ಲಿಖಿತ ರೂಪದಲ್ಲಿ ದೂರು ಕೊಡಲಾಗಿದೆ.

      ಬೇರೆಯವರಿಗೆ ಅವಕಾಶ ಕೊಡಿ

      ಬೇರೆಯವರಿಗೆ ಅವಕಾಶ ಕೊಡಿ

      ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಆರೋಪವಿದೆ. ಅವರಿಗೆ ಇದುವರೆಗೂ ಅಧಿಕಾರ ನೀಡಿದ್ದು ಸಾಕು. ಐದು ವರ್ಷ ಅವರು ಸಿಎಂ ಆಗಿದ್ದರು. ಈಗ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬೇರೆಯವರಿಗೆ ನೀಡಿ, ಬೇರೆ ನಾಯಕರನ್ನು ಬೆಳೆಸಿದರೆ ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.

      ಯಾರ ಹೆಸರು ಚಾಲ್ತಿಯಲ್ಲಿದೆ?

      ಯಾರ ಹೆಸರು ಚಾಲ್ತಿಯಲ್ಲಿದೆ?

      ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ನಿಂದ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಎಚ್. ಕೆ. ಪಾಟೀಲ್ ಹೆಸರುಗಳು ಕೇಳಿ ಬರುತ್ತಿವೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್‌. ಕೆ. ಪಾಟೀಲ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

      ಡಿ. ಕೆ. ಶಿವಕುಮಾರ್‌ ಸಾಧ್ಯವಿಲ್ಲ

      ಡಿ. ಕೆ. ಶಿವಕುಮಾರ್‌ ಸಾಧ್ಯವಿಲ್ಲ

      ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿ. ಕೆ. ಶಿವಕುಮಾರ್‌ಗೆ ಸದ್ಯಕ್ಕೆ ಪಕ್ಷದಲ್ಲಿ ಯಾವುದೇ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಆದ್ದರಿಂದ, ಎಚ್. ಕೆ. ಪಾಟೀಲ್ ಮತ್ತು ಸಿದ್ದರಾಮಯ್ಯ ರೇಸ್‌ನಲ್ಲಿ ಉಳಿಯುತ್ತಾರೆ. ಪಕ್ಷದ ಶಾಸಕರು ಯಾರಿಗೆ ಬೆಂಬಲ ನೀಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.

      ಗಂಭೀರವಾಗಿ ಪರಿಗಣಿಸಲಿದೆಯೇ?

      ಗಂಭೀರವಾಗಿ ಪರಿಗಣಿಸಲಿದೆಯೇ?

      ಮೈತ್ರಿ ಸರ್ಕಾರ ಪತನವಾದಾಗ ಎಚ್. ಡಿ. ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‌ಗೆ ದೂರು ಕೊಟ್ಟಿದ್ದರು. ಈಗ ಸ್ವತಃ ಪಕ್ಷದ ಹಿರಿಯ ನಾಯಕರೇ ದೂರು ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪದೇ ಪದೇ ದೂರು ಬರುತ್ತಿರುವ ಹಿನ್ನಲೆಯಲ್ಲಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಲಿದೆಯೇ?.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+